ಪಂಡಿತರು ಎಲ್ಲರಿಗೂ ಮರಣವಿದೆ ಎಂದು ತಿಳಿದುಕೊಂಡಿರುವುದರಿಂದಲೇ ಅಳುವುದಿಲ್ಲ. ಮಗು ಬಿದ್ದಾಗ ಅಮ್ಮ ನೆಲಕ್ಕೆ ಬಡಿಯುವುದಿಲ್ಲವೆ? “ನನಗೂ ನೋವಾಯಿತು, ನೆಲಕ್ಕೂ ನೋವಾಯಿತು’ ಎಂದು ಮಗು ತಿಳಿಯುತ್ತದೆ. ವಿದ್ಯುತ್ ಹೋದಾಗ ಪಕ್ಕದ ಮನೆಯಲ್ಲಿಯೂ ವಿದ್ಯುತ್ ಇಲ್ಲದಿರುವುದನ್ನು ಕಂಡು ಸಮಾಧಾನಪಡುವುದಿಲ್ಲವೆ? ಬೋಧನೆಯನ್ನು ದುಡಿಸಿಕೊಳ್ಳುವುದರಲ್ಲಿ ಶ್ರೀಕೃಷ್ಣ ಒಂದೊಂದು ಸ್ವರ, ಪದವನ್ನೂ ಬಿಡುವುದಿಲ್ಲ.
ದುಃಖ ಪರಿಹಾರವನ್ನು ಮಾಡುವ ಕ್ರಮವೆಂದರೆ ನನಗೊಬ್ಬನಿಗೇ ಕಷ್ಟವಲ್ಲ, ಎಲ್ಲರಿಗೂ ದುಃಖವಿದೆ ಎಂದು ತಿಳಿದುಕೊಳ್ಳುವುದು. ನನಗೆ ಮಾತ್ರ ಕಷ್ಟವೆಂದು ತಿಳಿದುಕೊಂಡಿದ್ದರೆ ಮಾತ್ರ ದುಃಖ ಬರುವುದು. ಆಸ್ಪತ್ರೆಯಲ್ಲಿ ವೈದ್ಯರು ನಿತ್ಯ ಶವ ನೋಡಿದರೂ ದುಃಖವಾಗುತ್ತದೋ? ಉಳಿದವರಿಗಾದರೆ ಭಾರೀ ದುಃಖವಾಗುತ್ತದೆ. ಎಲ್ಲವೂ ಸಹಜವಾದದ್ದು ಎಂದು ತಿಳಿದಾಗ ಮನಸ್ಸಿನ ಭಾರ ಕಡಿಮೆಯಾಗುತ್ತದೆ. “ನಶೋಚಂತಿ’ ಎನ್ನಬಹುದಿತ್ತು.
ನಾನುಶೋಚಂತಿ ಎಂದು ಏಕೆ ಹೇಳಿದ? ದುಃಖವಾದಾಗ ಒಬ್ಬನೇ ಇದ್ದರೆ ಸುಮ್ಮನೆ ಇರುತ್ತಾನೆ. ಮಗುವನ್ನಾದರೂ ನೋಡಿ. ಬಿದ್ದಾಗ ಯಾರಾದರೂ ಇದ್ದಾರೋ ಎಂದು ಮಗು ನೋಡುತ್ತದೆ. ಇನ್ನೊಬ್ಬ ಇದ್ದಾಗ ದುಃಖ ಜಾಸ್ತಿಯಾಗುತ್ತದೆ. ಪಂಡಿತರಿಗೂ ದುಃಖ ಬರುತ್ತದೆ. ಆದರೆ “ನಾನುಶೋಚಂತಿ’ ಎಂಬಂತೆ ಇನ್ನೊಬ್ಬ ಸತ್ತ ಎಂದು ಅಳುವುದಿಲ್ಲ. “ಅನೌಶೋಚ’ ತಿಳಿದವರಿಗಲ್ಲ. ಅವರಿಗೆ ಕೃತಕ ದುಃಖ ಇರುವುದಿಲ್ಲ.
-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811