Advertisement
ಜಿಲ್ಲೆಯ ಗಣೇಶ ಪೆಂಡಾಲು, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ದೇವಸ್ಥಾನ, ಸಂಘ ಸಂಸ್ಥೆಗಳ ವಠಾರದಲ್ಲಿ ಹಬ್ಬದ ಉತ್ಸವಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ನಿಮಿತ್ತ ಹೂ, ಹಣ್ಣು, ಕಬ್ಬು ಮಾರಾಟ ಭರಾಟೆಯೂ ಜೋರಾಗಿತ್ತು. ಬಹುತೇಕ ಕಡೆಗಳಲ್ಲಿ ಶುಕ್ರವಾರ ಸಂಜೆಯೇ ಗಣೇಶನ ಮೂರ್ತಿ ತಂದಿಡಲಾಗಿದ್ದು, ಶನಿವಾರ ಬೆಳಗ್ಗೆ ಪ್ರತಿಸ್ಥಾಪನೆ, ಅನಂತರ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ ಇತ್ಯಾದಿ ನಡೆಯಲಿವೆ.
Related Articles
Advertisement
ಬಿಗಿ ಬಂದೋಬಸ್ತ್ಹಬ್ಬದ ಹಿನ್ನೆಲೆಯಲ್ಲಿ ವಿವಿಧೆಡೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಬಂದೋಬಸ್ತ್ ಗಾಗಿ ಈಗಾಗಲೇ ಪೊಲೀಸರು ಸನ್ನದ್ಧರಾಗಿದ್ದಾರೆ. ಅಧಿಕಾರಿಗಳು, ಸಿಬಂದಿ ಸಹಿತ ಒಟ್ಟು 800 ಮಂದಿ ಸಿಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗುವುದು. ರಾಜ್ಯ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆಗಳು ಸಿದ್ಧವಾಗಿದೆ. ಮೆರವಣಿಗೆ ನಡೆಸುವವರು ಅನುಮತಿಯಲ್ಲಿ ತಿಳಿಸಿದ ರೂಟ್‌ಗಳಲ್ಲಿ ಮಾತ್ರ ಸಂಚಾರ ಮಾಡಬೇಕು. ನಿಯಮಾವಳಿಗಳನ್ನು ಪಾಲಿಸಿಕೊಂಡು ಹಬ್ಬಗಳನ್ನು ಆಚರಣೆ ಮಾಡಿಕೊಂಡರೆ ಉತ್ತಮ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಅರುಣ್ ಕೆ.ತಿಳಿಸಿದ್ದಾರೆ. ದ.ಕ.: 270 ಗಣೇಶೋತ್ಸವ
ಮಂಗಳೂರು: ಈ ವರ್ಷ ಮಂಗಳೂರು ನಗರ ಪೊಲೀಸ್ ಕಮಿಷನ ರೆಟ್ ವ್ಯಾಪ್ತಿಯ ಒಟ್ಟು 165 ಸಾರ್ವಜನಿಕ ಗಣೇಶೋತ್ಸವ ನಡೆಯಲಿದೆ. ಕಮಿಷನರೆಟ್ ವ್ಯಾಪ್ತಿಯ ಉಪವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವದ ವಿವರ ಇಂತಿದೆ: ಪಣಂಬೂರು ಉಪವಿಭಾಗದ ಪಣಂಬೂರು -7, ಕಾವೂರು-15, ಬಜಪೆ-11, ಸುರತ್ಕಲ್-13, ಮೂಲ್ಕಿ-18, ಮೂಡುಬಿದಿರೆ-29. ದಕ್ಷಿಣ ಉಪವಿಭಾಗ ವ್ಯಾಪ್ತಿಯ ಮಂಗಳೂರು ಗ್ರಾಮಾಂತರ-6, ಕಂಕನಾಡಿ ನಗರ – 7, ಉಳ್ಳಾಲ-9, ಕೊಣಾಜೆ-7. ಕೇಂದ್ರ ಉಪವಿಭಾಗದ ಮಂಗಳೂರು ಉತ್ತರ-6, ಮಂಗಳೂರು ದಕ್ಷಿಣ-15, ಉರ್ವ-4, ಮಂಗಳೂರು ಪೂರ್ವ-13.
ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಒಟ್ಟು 105 ಸಾರ್ವಜನಿಕ ಗಣೇಶೋತ್ಸವ ಗಳು ನಡೆಯಲಿವೆ. ಬಂಟ್ವಾಳ ನಗರ-11, ಬಂಟ್ವಾಳ ಗ್ರಾಮಾಂತರ-15, ವಿಟ್ಲ-20, ಬೆಳ್ತಂಗಡಿ-24, ಧರ್ಮಸ್ಥಳ-19, ಪುಂಜಾಲಕಟ್ಟೆ-7, ವೇಣೂರು-20, ಪುತ್ತೂರು ನಗರ-15, ಪುತ್ತೂರು ಗ್ರಾಮಾಂತರ-17, ಉಪ್ಪಿನಂಗಡಿ-17, ಕಡಬ-13, ಸುಳ್ಯ-16, ಸುಬ್ರಹ್ಮಣ್ಯ -9, ಬೆಳ್ಳಾರೆ-18.