Advertisement

ಬ್ರಹ್ಮಾವರ ಸ. ಆರೋಗ್ಯ ಕೇಂದ್ರಕ್ಕೆ  9.36 ಕೋ. ರೂ.: ಪ್ರಮೋದ್‌

03:45 AM Jan 29, 2017 | Team Udayavani |

ಬ್ರಹ್ಮಾವರ: ಸಚಿವ ಪ್ರಮೋದ್‌ ಮಧ್ವರಾಜ್‌  ಶಿಫಾರಸಿನ ಮೇರೆಗೆ ಬ್ರಹ್ಮಾವರದಲ್ಲಿ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರ ಮತ್ತು ಸಿಬಂದಿಗಳ ವಸತಿಗೃಹಗಳ ನಿರ್ಮಾಣಕ್ಕೆ 2016-17ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನದ ಪಿ.ಐ.ಪಿ. (ಪ್ರಾಜೆಕ್ಟ್ ಇಂಪ್ಲಿಮೆಂಟೇಶನ್‌ ಪ್ಲಾನ್‌)ಯಲ್ಲಿ ಅನುಮೋದನೆಗೊಂಡು ರೂ. 9.36 ಕೋಟಿ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಮಂಜೂರಾತಿ ಹಾಗೂ ತಾಂತ್ರಿಕ ಮಂಜೂರಾತಿ ದೊರಕಿದೆ. 

Advertisement

ಈ ಕಾಮಗಾರಿಗೆ ಈಗಾಗಲೇ ಟೆಂಡರ್‌ ಕರೆಯಲಾಗಿದ್ದು, ಫೆ. 18 ಅಂತಿಮ ದಿನಾಂಕವಾಗಿದ್ದು, ಶೀಘ್ರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಪ್ರಮೋದ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next