Advertisement

Electoral politics ಕನಸಿನಿಂದ ‌ವಿಮುಖ: ಪ್ರಮೋದ್ ಮುತಾಲಿಕ್

07:58 PM Apr 22, 2024 | Team Udayavani |

ವಿಜಯಪುರ : ಚುನಾವಣ ರಾಜಕೀಯ ಅವಕಾಶ ಪಡೆಯುವುದಕ್ಕಾಗಿ ನಾನು ನಡೆಸಿದ ಪ್ರಯತ್ನಗಳು ವಿಫಲವಾದ ಕಾರಣ ರಾಜಕೀಯ ಚುನಾವಣಾ ಕನಸಿನಿಂದ ವಿಮುಖನಾಗಿದ್ದೇನೆ ಎಂದು ಶ್ರೀರಾಮ ಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್ ಹೇಳಿದರು.

Advertisement

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಣಬಲ, ಜಾತಿ ಬಲ ಇಲ್ಲದ ನನ್ನಂಥವರು ರಾಜಕೀಯಕ್ಕೆ ಹಾಗೂ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಗುವುದಿಲ್ಲ. ಹೀಗಾಗಿ ಚುನಾವಣೆಗೆ ಸ್ಪರ್ಧಿಸಲು ನಡೆಸಿದ ರಾಜಕೀಯ ಪ್ರಯತ್ನದಲ್ಲಿ ನಾನು ವಿಫಲನಾದೆ. ಪರಿಣಾಮ ಇನ್ನೆಂದೂ ಚುನಾವಣ ರಾಜಕೀಯಕ್ಕೆ ಬರುವುದಿಲ್ಲ ಎಂದು ನಿವೃತ್ತನಾಗಿದ್ದೇನೆ ಎಂದರು.

ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗ ಹಿಂದೂ ವಿರೋಧಿ ನೀತಿ ಅನುಸರಿಸಿದ ಬಸವರಾಜ ಬೊಮ್ಮಾಯಿ ಅವರಿಂದ ಬಿಜೆಪಿ ಅಧಿಕಾರ ಕಳೆದುಕೊಂಡಿದೆ ಎಂದು ಹರಿಹಾಯ್ದರು.

ಚುನಾವಣೆ ರಾಜಕೀಯದಿಂದ ದೂರವಾಗಿದ್ದರೂ ಪ್ರಸಕ್ತ ಚುನಾವಣೆಯಲ್ಲಿ ದೇಶದ ಹಿತದೃಷ್ಟಿಯಿಂದ ಮೋದಿ ಅವರಿಗಾಗಿ ಬಿಜೆಪಿ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಮನೆಯನ್ನು ನೆಲಸಮ ಮಾಡಿ

Advertisement

ಲವ್ ಜಿಹಾದ್ ಕಾರಣಕ್ಕಾಗಿಯೇ ನೇಹಾಳ ಹತ್ಯೆಯಾಗಿದ್ದು, ಅಂಜುಮನ್ ಸಂಸ್ಥೆ ಹಾಗೂ ಇಸ್ಲಾಂ ಧರ್ಮೀಯತರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ನಿಜಕ್ಕೂ ನೇಹಾಳ ಹತ್ಯೆಗೆ ಕನಿಕರ ಇದ್ದರೆ ಹಂತಕ ಕುಟುಂಬದ ವಿರುದ್ಧ ಫತ್ವಾ ಹೊರಡಿಸಬೇಕು. ಆತನ ಮನೆಯನ್ನು ನೆಲಸಮ ಮಾಡಿ ಎಂದು ಆಗ್ರಹಿಸಿದರು.

ನೇಹಾಳ ಹತ್ಯೆಯ ಹಿಂದೆಯೂ ಐಸಿಸ್ ಹಣ ಕೊಟ್ಟು, ತರಬೇತಿ ನೀಡಿಯೇ ಲವ್ ಜಿಹಾದ್ ಕೃತ್ಯ ಇಳಿಸಲಾಗಿದೆ. ಇನ್ನಾದರೂ ಹಿಂದೂ ಹುಡುಗಿಯರು ಎಚ್ಚರಿಕೆಯಿಂದ ಇರಬೇಕು. ಕೇರಳ ರಾಜ್ಯದಲ್ಲಿ ಕೇವಲ 2 ವರ್ಷಗಳಲ್ಲಿ 3 ಸಾವಿರ ಮತಾಂತರ ಮಾಡಲಾಗಿದೆ. ಇದರ ಹಿಂದೆ ದೊಡ್ಡ ಜಾಲವೇ ಕೆಲಸ ಮಾಡುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next