ಉಡುಪಿ: ಭಾರತದ ಕ್ರಿಕೆಟ್ ದಿಗ್ಗಜ, ಭಾರತ ತಂಡದ ಮಾಜಿ ಮುಖ್ಯ ಕೋಚ್ ಮತ್ತು ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಅವರು ಶ್ರೀ ಕೃಷ್ಣ ಮಠಕ್ಕೆ ಭೇಟಿನೀಡಿ ಶ್ರೀ ಕೃಷ್ಣ ಮತ್ತು ಮುಖ್ಯಪ್ರಾಣ ದೇವರ ದರ್ಶನ ಮಾಡಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರಿಂದ ಅನುಗ್ರಹ ಪಡೆದರು.
ಈ ಸಂದರ್ಭದಲ್ಲಿ ಪರ್ಯಾಯ ಶ್ರೀಪಾದರ ಮುಖ್ಯ ಯೋಜನೆಗಳಲ್ಲೊಂದಾದ ಕೋಟಿಗೀತಾ ಲೇಖನ ಯಜ್ಞದ ದೀಕ್ಷೆ ಸ್ವೀಕರಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು.
ಪೂಜ್ಯ ಪುತ್ತಿಗೆ ಕಿರಿಯ ಶ್ರೀಪಾದರು ಉಡುಪಿಯ ಬಾಲ ಕೃಷ್ಣನಿಗೆ ವಿಧ ವಿಧದ ಅಲಂಕಾರ ಮಾಡುತ್ತ ನೂರನೆಯ ಅಲಂಕಾರದ ದಿನವಾದ ಇಂದು ಕ್ರಿಕೆಟ್ ಲೋಕದಲ್ಲಿ ಶತಕ ಬಾರಿಸಿ ಶತಕ ಖ್ಯಾತಿಯ ಶ್ರೀ ಕೃಷ್ಣ ಭಕ್ತರೂ ಆದ ರವಿಶಾಸ್ತ್ರಿಗಳು ಬಂದು ಆಶೀರ್ವಾದ ಪಡೆದದ್ದು ಯೋಗಾಯೋಗವಾಗಿದ್ದು ಅಚ್ಚರಿ ಉಂಟಾಗಿದೆ ಎಂದು ಅಭಿಪ್ರಾಯಪಟ್ಟರು.
ಶಾಸ್ತ್ರಿಗಳು ಸ್ವಯಂ ಸ್ಪೂರ್ತಿಯಿಂದ ಭಕ್ತರಿಗೆ ಭಗವದ್ಗೀತೆ ಬರೆಯಲು ತಮ್ಮ ಸಂದೇಶ ನೀಡಿದರು. ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಮತ್ತು ಮಠದ ಅಭಿಮಾನಿಗಳಾದ ವಾದಿರಾಜ ಪೆಜತ್ತಾಯ ಲಾತವ್ಯ ಆಚಾರ್ಯ, ವಿನಯ ಬನ್ನಂಜೆ ಉಪಸ್ಥಿತರಿದ್ದರು.