Advertisement
ಆಧುನಿಕ ಸೀರೆಗಳು ನೋಡಲು ಚಂದ ಇರಬಹುದು ಆದರೆ ಅಲ್ಪಕಾಲ ಮಾತ್ರ ಬಾಳಿಕೆ ಬರುವಂತದ್ದು, ಕೈಮಗ್ಗದ ಸೀರೆಗಳು ಸಾಂಪ್ರದಾಯಿಕವಾಗಿಯೂ ದೀರ್ಘಕಾಲ ಬಾಳಿಕೆಗೆ ಬರುವಂತದ್ದಾಗಿದೆ. ಸೀರೆಯುವ ಭಾರತೀಯ ಸಾಂಸ್ಕೃತಿ ಮೌಲ್ಯದ ರಕ್ಷಕವಾಗಿದೆ. ದೇವತೆಗಳು ಸೀರೆಯಲ್ಲೇ ಕಾಣಿಸಿಕೊಂಡಿದ್ದಾರೆ. 16,108 ಸಾವಿರ ಸೀರೆ ಮಾರಾಟ ಆಗುವಂತಾಗಲಿ ಎಂದು ಹರಸಿದರು.
Related Articles
ಉದ್ಘಾಟನೆಯ ಅನಂತರ ಪುತ್ತಿಗೆ ಶ್ರೀಪಾದರು ಮಳಿಗೆಗಳಿಗೆ ಭೇಟಿ ನೀಡಿ ಕೈಮಗ್ಗಗಳಿಂದ ಸಿದ್ಧಪಡಿಸಿದ ಸೀರೆಗಳನ್ನು ವೀಕ್ಷಿಸಿದರು. ಉಡುಪಿ, ಮಂಗಳೂರು, ಇಳಿಕಲ್, ದೊಡ್ಡಬಳ್ಳಾಪುರ, ಜಮಖಂಡಿ, ಚನ್ನರಾಯಪಟ್ಟಣ, ಚಾಮರಾಜನಗರ, ಕೊಳ್ಳೇಗಾಲ, ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದ 30ಕ್ಕೂ ಅಧಿಕ ಕೈಮಗ್ಗ ಸೀರೆಗಳ ಉತ್ಪಾದಕರು ಮತ್ತು ಮಾರಾಟಗಾರರು ಭಾಗವಹಿಸಿದ್ದಾರೆ.
Advertisement
ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಬರುತ್ತಿವೆ. ಕೆಲವು ದೇವಸ್ಥಾನಗಳು ಈಗಾಗಲೇ ವಸ್ತ್ರಸಂಹಿತೆ ಜಾರಿಗೆ ತಂದಿದೆ. ಕೆಲವು ದೇವಸ್ಥಾನಗಳು ವಸ್ತ್ರಸಂಹಿತೆ ಜಾರಿ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆಸುತ್ತಿವೆ. ಉಡುಪಿ ಶ್ರೀ ಕೃಷ್ಣಮಠದಲ್ಲೂ ವಸ್ತ್ರಸಂಹಿತೆ ಜಾರಿ ಮಾಡಬೇಕು ಎಂಬ ಒತ್ತಡ ಇದೆ. ವಸ್ತ್ರಸಂಹಿತೆ ಜಾರಿ ಮಾಡುವುದರಿಂದ ದೇವಸ್ಥಾನಕ್ಕೆ ಸೀರೆ ಉಟ್ಟು ಬರುವವರ ಸಂಖ್ಯೆ ಹೆಚ್ಚಲಿದೆ. ಇದರಿಂದ ಸೀರೆ ಉದ್ಯಮವೂ ಬೆಳೆಯಲಿದೆ ಎಂದು ಶ್ರೀಪಾದರು ಹೇಳಿದರು.
ಚಿತ್ರಗಳು : ಆಸ್ಟ್ರೋ ಮೋಹನ್