Advertisement
ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸುವುದು ಮತ್ತು ಲಿಖೀತವಾಗಿ ಉತ್ತರ ಕಳುಹಿಸುವ ಎರಡೂ ಕ್ರಮಗಳಿರುತ್ತವೆ. ಅದರಂತೆ ಇತ್ತೀಚೆಗೆ ಬೆಳಗಾವಿಯಲ್ಲಿ 10 ದಿನ ನಡೆದ ವಿಧಾನಸಭೆ ಅಧಿವೇಶನದಲ್ಲಿ ಉಡುಪಿ ಜಿಲ್ಲೆಯ ಶಾಸಕರು ಕೇಳಿದ ಪ್ರಶ್ನೋತ್ತರದ ಮಾಹಿತಿ ಇಲ್ಲಿದೆ.
ಉಡುಪಿ ಜಿಲ್ಲೆಗೆ ಪ್ರತ್ಯೇಕ ಜಿಲ್ಲಾ ಸಹಕಾರಿ ಬ್ಯಾಂಕ್ ಬೇಡಿಕೆ ಬಗ್ಗೆ ನ್ಯಾಯಾಲಯದ ತೀರ್ಪು ಬಂದ ಬಳಿಕ ಅನುಷ್ಠಾನಗೊಳಿಸುವ ಭರವಸೆ ಸಚಿವರಿಂದ ದೊರೆತಿದೆ. ಮರಳುಗಾರಿಕೆ, ಡೀಮ್ಡ್ ಅರಣ್ಯ ಸಮಸ್ಯೆ, ಉಡುಪಿ ನಗರಕ್ಕೆ ವಾರಾಹಿ ನೀರು, ಗ್ರಾಮೀಣ ನೀರು ಸರಬರಾಜು ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಮರಳುಗಾರಿಕೆ ಆರಂಭಿಸಲು ಕ್ರಮ, ಡೀಮ್ಡ್ ಅರಣ್ಯ ವಿರಹಿತಗೊಳಿಸುವ ವಿಷಯ ಪರಿಶೀಲನೆ ಹಾಗೂ ವಾರಾಹಿ ಕುಡಿಯುವ ನೀರಿನ ಯೋಜನೆ ಟೆಂಡರ್ ಹಂತದಲ್ಲಿದೆ ಎಂಬ ಉತ್ತರ ಲಭಿಸಿದೆ. ಗಮನ ಸೆಳೆಯುವ ಸೂಚನೆಯಡಿ ನಗರಸಭೆಗೆ ಆಯ್ಕೆಯಾದ ಸದಸ್ಯರು ಪ್ರಮಾಣವಚನ ಸ್ವೀಕರಿಸದೇ ಸಭೆಯನ್ನು ಕರೆಯುವ ಅವಕಾಶವಿದೆಯೇ? ಶಾಸಕರಿಗೆ ಈ ಅಧಿಕಾರ ಇದೆಯೋ ಎಂಬುದಕ್ಕೆ ಉತ್ತರ ಸಿಕ್ಕಿಲ್ಲ. ಮರಳುಗಾರಿಕೆ ಚರ್ಚೆಗೆ ಬಂದಿಲ್ಲ. ಜಿಲ್ಲೆಯ ಅತಿವೃಷ್ಟಿ ಸಮಸ್ಯೆ ಬಗ್ಗೆಯೂ ಪ್ರಸ್ತಾವಿಸಲಾಗಿದೆ. ಕೇಳಲಾದ ಪ್ರಶ್ನೆಗಳ ಸಂಖ್ಯೆ 40. ಉತ್ತರ ಸಿಕ್ಕಿರುವುದು 40
*ಭಾಗವಹಿಸಿದ ಪ್ರಮುಖ ಕಲಾಪ: ಪ್ರಶ್ನೋತ್ತರ ವೇಳೆ ಮತ್ತು ಬರದ ಕುರಿತಾದ ಚರ್ಚೆ
* ಪ್ರಸ್ತಾವಿಸಿದ ಕಾಮಗಾರಿ ಮತ್ತು ಸಿಕ್ಕಿದ ಭರವಸೆ: ಜಿಲ್ಲೆಗೆ ಪ್ರತ್ಯೇಕ ಸಹಕಾರಿ ಬ್ಯಾಂಕ್ ಬೇಡಿಕೆ ಕುರಿತು ನ್ಯಾಯಾಲಯ ತೀರ್ಪಿನ ಅನಂತರ ನಿರ್ಧಾರ.
* ಫಾಲೋಅಪ್ ಮಾಡಬೇಕಾದ ಅವಧಿ: ನಿಗದಿತ ಅವಧಿ ಇಲ್ಲ.
* ಹಾಜರಾತಿ: ಶೇ. 100
Related Articles
ಪ್ರಮುಖವಾಗಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿ 2013-14ರ ಅನಂತರ ಹೆಚ್ಚಳವಾಗಿಲ್ಲ. ಪ್ರದೇಶಾಭಿವೃದ್ಧಿ ಅನುದಾನವನ್ನು 2 ಕೋ.ರೂ.ಗಳಿಂದ 5 ಕೋ.ರೂ.ಗೆ ಏರಿಸಬೇಕೆಂದು ಆಗ್ರಹಿಸಿದರು. ಇದಕ್ಕೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಯಿತು. ಮುಂದಿನ ಬಜೆಟ್‌ನಲ್ಲಿ ಈ ಬಗ್ಗೆ ಗಮನಹರಿಸುವ ಭರವಸೆ ಮುಖ್ಯಮಂತ್ರಿಯವರಿಂದ ದೊರೆಯಿತು. ಕಸ್ತೂರಿ ರಂಗನ್ ವರದಿ ಕುರಿತು ಕೇರಳ ಸರಕಾರ ಕೇಂದ್ರಕ್ಕೆ ಆಕ್ಷೇಪಣೆ ಸಲ್ಲಿಸಿದೆ. ನಮ್ಮಲ್ಲಿಂದ ಕಳುಹಿಸಿದೆಯೇ ಎಂದು ಕೇಳಿದಕ್ಕೆ, ಕಳುಹಿಸಲಾಗಿದೆ ಎಂಬ ಉತ್ತರವಷ್ಟೇ ಸಿಕ್ಕಿದೆ. ಇದಲ್ಲದೇ ಜಮೀನಿನ ಪೋಡಿ ಆಗದೇ ಜನರಿಗೆ ಆಗುತ್ತಿರುವ ತೊಂದರೆ, ಭೂ ಪರಿವರ್ತನೆ ಸಮಸ್ಯೆ ಕುರಿತು ಕಂದಾಯ ಇಲಾಖೆ ಗಮನಸೆಳೆದರು. ಕುಂದಾಪುರದಲ್ಲಿ ಉಪ ಸಾರಿಗೆ ಕಚೇರಿ, ಪಶು ಸಂಗೋಪನೆ ಇಲಾಖೆ, ಮೀನುಗಾರಿಕೆ ಇಲಾಖೆ, ಆರೋಗ್ಯ ಕರ್ನಾಟಕ ಯೋಜನೆ ಕುರಿತು ಪ್ರಸ್ತಾವಿಸಿದರು.
Advertisement
ಕೇಳಲಾದ ಪ್ರಶ್ನೆಗಳ ಸಂಖ್ಯೆ; 15 ಉತ್ತರ ಸಿಕ್ಕಿರುವುದು: ಬಹುತೇಕ
*ಭಾಗವಹಿಸಿದ ಪ್ರಮುಖ ಕಲಾಪ : ಪ್ರಶ್ನೋತ್ತರ ವೇಳೆ ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿಷಯ* ಪ್ರಸ್ತಾವಿಸಿದ ಕಾಮಗಾರಿ ಮತ್ತು ಸಿಕ್ಕಿದ ಭರವಸೆ: ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ಸಿಕ್ಕಿದೆ.
* ಫಾಲೋಅಪ್ ಮಾಡಬೇಕಾದ ಅವಧಿ: ಮೂರು ತಿಂಗಳು
* ಹಾಜರಾತಿ: ಶೇ. 80 (2 ದಿನ ಗೈರು – ಅನಾರೋಗ್ಯ) ಸುಕುಮಾರ ಶೆಟ್ಟಿ – ಬೈಂದೂರು
ಹಿಂದುಳಿದ ವರ್ಗದವರಿಗೆ ಹಾಸ್ಟೆಲ್ ಕಡಿಮೆಯಿರುವುದರಿಂದ ಆಗುತ್ತಿರುವ ಸಮಸ್ಯೆ ಹಾಗೂ ಭೋವಿ ಜನಾಂಗದವರಿಗೆ ಕುಂದಾಪುರದಲ್ಲಿ ಎಸ್‌ಸಿ ಪ್ರಮಾಣಪತ್ರ ನೀಡದಿರುವ ಬಗ್ಗೆ ಗಮನಸೆಳೆಯಲಾಯಿತು. ಸಮಾಜ ಕಲ್ಯಾಣ ಇಲಾಖೆ ಸಚಿವರು ಭೋವಿ ಜನಾಂಗವನ್ನು ಎಸ್‌ಸಿ ವರ್ಗಕ್ಕೆ ಸೇರಿಸಿದೆ ಎಂದು ಉತ್ತರಿಸಿದರು. ಕೇಳಲಾದ ಪ್ರಶ್ನೆಗಳಲ್ಲಿ 5ಕ್ಕೆ ಕಲಾಪದಲ್ಲೇ ಉತ್ತರ ಸಿಕ್ಕಿದ್ದರೆ, ಉಳಿದವುಗಳಿಗೆ ಅಂಚೆ ಮೂಲಕ ಉತ್ತರ ಕಳುಹಿಸುವ ಭರವಸೆ ಸಿಕ್ಕಿದೆ. ಜಲಸಂಪನ್ಮೂಲ ಇಲಾಖೆ ಸಂಬಂಧ ಪಶ್ಚಿಮ ವಾಹಿನಿಯಡಿ ಅನುದಾನ ಹೆಚ್ಚಳ, 3 ವರ್ಷಗಳಲ್ಲಿ ಕ್ಷೇತ್ರದಲ್ಲಿ ವಸತಿ ಯೋಜನೆಯಡಿ ಕೈಗೊಂಡ ಮನೆ ನಿರ್ಮಾಣ, ಡೀಮ್ಡ್ ಫಾರೆಸ್ಟ್ ಸಮಸ್ಯೆ ನಿವಾರಣೆಗೆ ಕೈಗೊಂಡ ಕ್ರಮ, 94 ಸಿ ಜಾಗ ಮಂಜೂರಿಗೆ ಕ್ರಮ, ಕೃಷಿಗೆ ಪ್ರಾಣಿ ಉಪಟಳ ನಿವಾರಣೆ ಕ್ರಮ, ಅತಿವೃಷ್ಟಿ ನಷ್ಟ ಪರಿಹಾರ ಹೆಚ್ಚಳ, ಅಂಗನವಾಡಿ ನೌಕರರ ವೇತನ ಹೆಚ್ಚಳಕ್ಕೆ ಆಗ್ರಹಿಸಲಾಯಿತು. ಕೇಳಲಾದ ಪ್ರಶ್ನೆಗಳ ಸಂಖ್ಯೆ: 17 ಉತ್ತರ ಸಿಕ್ಕಿರುವುದು: 5
* ಭಾಗವಹಿಸಿದ ಪ್ರಮುಖ ಕಲಾಪ; ಪ್ರಶ್ನೋತ್ತರ ವೇಳೆ ಮತ್ತು ಬರದ ಕುರಿತಾದ ಚರ್ಚೆ
* ಪ್ರಸ್ತಾವಿಸಿದ ಕಾಮಗಾರಿ ಮತ್ತು ಸಿಕ್ಕಿದ ಭರವಸೆ: ಪಶ್ಚಿಮ ವಾಹಿನಿಯಡಿ ನೀರಾವರಿ ಯೋಜನೆಗೆ ಅನುದಾನ ಹೆಚ್ಚಳ.
* ಫಾಲೋಅಪ್ ಮಾಡಬೇಕಾದ ಅವಧಿ: 6 ತಿಂಗಳು ಮತ್ತು 4 ತಿಂಗಳು.
* ಹಾಜರಾತಿ: ಶೇ. 100 ಲಾಲಾಜಿ ಮೆಂಡನ್ – ಕಾಪು
ಕಾಪು ಸಹಿತ ಕರಾವಳಿಯ ಸಮಸ್ಯೆಗಳ ಬಗ್ಗೆ ಚರ್ಚೆಗೆ ಕೋರಿದ್ದರೂ ಅವಕಾಶ ಸಿಗಲಿಲ್ಲ. ಮರಳುಗಾರಿಕೆ ಸಮಸ್ಯೆ, ಅರಣ್ಯ ಯೋಜನೆ ಸುಜ್ಲಾನ್ ಕಂಪೆನಿ ಕಾರ್ಮಿಕರ ವರ್ಗಾವಣೆ ಸಮಸ್ಯೆ, ಹೆಜಮಾಡಿ ಬಂದರು ಕಾಮಗಾರಿ ವಿಳಂಬ, ಯುಪಿಸಿಎಲ್ 2ನೇ ಮತ್ತು 3ನೇ ಹಂತದ ವಿಸ್ತರಣೆ ಪ್ರಸ್ತಾವನೆಗೆ ಉದ್ದೇಶಿಸಲಾಗಿತ್ತು. ಕಾಪು ಮಿನಿವಿಧಾನ ಸೌಧ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪುರಸಭೆ ಮತ್ತು ಯೋಜನಾ ಪ್ರಾಧಿಕಾರದ ಬಗ್ಗೆಯೂ ಚರ್ಚೆಗೆ ಕೋರಿದ್ದು, ಕಂದಾಯ ಇಲಾಖೆ ಮೂಲಕ ಸಮಸ್ಯೆ ಬಗೆಹರಿಸಲು ಸಭೆ ಕರೆಯುವ ಭರವಸೆ ದೊರೆತಿದೆ. ಬೆಳಪುವಿನ ಕಾಲೇಜಿನಲ್ಲಿ ಸಂಶೋಧನ ಕೇಂದ್ರ ಪ್ರಾರಂಭಕ್ಕೆ ಆಗುತ್ತಿರುವ ವಿಳಂಬ, ಉದ್ಯಾವರ ಜಾರುಕುದ್ರು, ಕೋಟೆ ಮಟ್ಟು ಸಹಿತ ವಿವಿಧ ಸೇತುವೆ ಕಾಮಗಾರಿ ಕುಂಠಿತಗೊಂಡ ಬಗ್ಗೆ ಕೇಳಲಾದ ಪ್ರಶ್ನೆಗೆ ಲಿಖೀತ ಉತ್ತದ ಭರವಸೆ ದೊರಕಿದೆ. ಕೇಳಲಾದ ಪ್ರಶ್ನೆಗಳ ಸಂಖ್ಯೆ: 7 ಉತ್ತರ ಸಿಕ್ಕಿರುವುದು: 3
* ಭಾಗವಹಿಸಿದ ಪ್ರಮುಖ ಕಲಾಪ; ಪ್ರಶ್ನೋತ್ತರ ವೇಳೆ ಮತ್ತು ಬರದ ಕುರಿತಾದ ಚರ್ಚೆ
* ಪ್ರಸ್ತಾವಿಸಿದ ಕಾಮಗಾರಿ ಮತ್ತು ಸಿಕ್ಕಿದ ಭರವಸೆ: ಮಿನಿ ವಿಧಾನಸೌಧ ನಿರ್ಮಾಣ ಸಂಬಂಧ ಕಂದಾಯ ಇಲಾಖೆ ಸಭೆ ಕರೆಯುವ ಭರವಸೆ.
*ಫಾಲೋಅಪ್ ಮಾಡಬೇಕಾದ ಅವಧಿ: ನಿಗದಿತ ಅವಧಿ ಇಲ್ಲ
*ಹಾಜರಾತಿ: ಶೇ. 100 ಸುನಿಲ್ ಕುಮಾರ್ - ಕಾರ್ಕಳ
ಜಿಲ್ಲೆಯ ಪಶುಸಂಗೋಪನಾ ಇಲಾಖೆಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಹಾಗೂ ಶೂನ್ಯ ಬಂಡವಾಳದಲ್ಲಿ ಕೃಷಿ ಮಾಡುವ ಹೊಸ ಪರಿಕಲ್ಪನೆಯ ಬಗ್ಗೆ ಪ್ರಸ್ತಾವಿಸಿದ್ದು ಈ ಬಗ್ಗೆ ಇಲಾಖೆಯಿಂದ ಯಾವುದೇ ನಿರ್ದಿಷ್ಟ ಭರವಸೆ ದೊರೆತಿಲ್ಲ. ಇದಲ್ಲದೇ, ಗಮನ ಸೆಳೆಯುವ ಸೂಚನೆಯಡಿ ಕಾರ್ಕಳ ತಾಲೂಕಿನಲ್ಲಿ ಮಾದರಿ ವಿದ್ಯುತ್ ಗ್ರಾಮಗಳನ್ನು ಅನುಷ್ಠಾನ ಮಾಡದಿರುವುದನ್ನು ಶಾಸಕರು ಪ್ರಸ್ತಾವಿಸಿದ್ದಾರೆ. ಜತೆಗೆ ಸದನದ ಶೂನ್ಯ ವೇಳೆಯಲ್ಲಿ ಪಡುಬಿದ್ರಿ ಟೋಲ್ ವಿಷಯ ಸಂಬಂಧ ಪ್ರಶ್ನೆ ಕೇಳಲಾಗಿದೆ. ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಮರಳು ಸಮಸ್ಯೆ, ನಾಲ್ಕು ಜಿಲ್ಲೆಗಳಲ್ಲಿ ಅರಣ್ಯ ಇಲಾಖೆಯಿಂದ ಆಗುತ್ತಿರುವ ವಿವಿಧ ಸಮಸ್ಯೆ, ರಾಜ್ಯದಲ್ಲಿ ಆದಂತಹ ತಾಲೂಕು ಜಾತಿಗಣತಿಯ ಬಗ್ಗೆ ಪ್ರಸ್ತಾವ ಮಾಡಿದ್ದಾರೆ. ಈ ಬಗ್ಗೆ ಸರಕಾರದಿಂದ ನಿರ್ದಿಷ್ಟ ಉತ್ತರ ಸಿಕ್ಕಿಲ್ಲ. ಅತಿವೃಷ್ಟಿ ಬಗ್ಗೆ ಮಾತನಾಡಲು ಸಮಯ ನೀಡಲಿಲ್ಲ. ಕೇಳಲಾದ ಪ್ರಶ್ನೆಗಳ ಸಂಖ್ಯೆ: 54. ಉತ್ತರ ಸಿಕ್ಕಿರುವುದು: ಬಹುತೇಕ *ಭಾಗವಹಿಸಿದ ಪ್ರಮುಖ ಕಲಾಪ : ಪ್ರಶ್ನೋತ್ತರ ವೇಳೆ ಮತ್ತು ಬರದ ಕುರಿತಾದ ಚರ್ಚೆ
* ಪ್ರಸ್ತಾವಿಸಿದ ಕಾಮಗಾರಿ ಮತ್ತು ಸಿಕ್ಕಿದ ಭರವಸೆ: ತಾಲೂಕಿನಲ್ಲಿ ಮಾದರಿ ವಿದ್ಯುತ್ ಗ್ರಾಮಗಳ ಯೋಜನೆ ಅನುಷ್ಠಾನ ಮಾಡದಿರುವ ಬಗ್ಗೆ- ನಿರ್ದಿಷ್ಟ ಭರವಸೆ ಇಲ್ಲ
* ಫಾಲೋಅಪ್ ಮಾಡಬೇಕಾದ ಅವಧಿ: ಯಾವುದೇ ಸ್ಪಷ್ಟ ಉತ್ತರ ನೀಡಿಲ್ಲ
* ಹಾಜರಾತಿ: ಶೇ. 100