Advertisement

ಎನ್‌ಆರ್‌ಎಚ್‌ಎಂನಿಂದ 1.5 ಕೋ.ರೂ. ವೆಚ್ಚದ ಯೋಜನೆ

06:00 AM Jun 17, 2018 | Team Udayavani |

ಉಡುಪಿ: ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಅತ್ಯಾಧುನಿಕವಾದ ಕಣ್ಣಿನ ಶಸ್ತ್ರಚಿಕಿತ್ಸಾ ಕೇಂದ್ರ ಮಂಜೂರಾಗಿದೆ. ಸುಮಾರು 1.5 ಕೋ.ರೂ. ವೆಚ್ಚದಲ್ಲಿ ಹೊಸ ಕಟ್ಟಡ ಸಮೇತವಾಗಿ ಕೇಂದ್ರ ನಿರ್ಮಾಣಗೊಳ್ಳಲಿದೆ. ಪ್ರಸ್ತುತ ಜಿಲ್ಲಾಸ್ಪತ್ರೆಯಲ್ಲಿ ಆಥೊì ಪೆಡಿಕ್‌, ಸರ್ಜರಿ ಒಟಿ ಮತ್ತು ಐ ಒಟಿಗಳಿವೆ. ಇವುಗಳ ಮೂಲಕ ಸಾವಿರಾರು ಮಂದಿಗೆ ಸೇವೆ ಒದಗಿಸಲಾಗು ತ್ತಿದೆ. ಆದರೆ ಪ್ರತ್ಯೇಕ, ಸಂಪೂರ್ಣ ಸುಸಜ್ಜಿತ ಕೇಂದ್ರಗಳಿಲ್ಲ. ಹೊಸ “ಮಾಡ್ಯುಲರ್‌ ಒಟಿ ಸೆಂಟರ್‌’ ಪ್ರತ್ಯೇಕವಾದ ಮತ್ತು ಆಧುನಿಕ ಶಸ್ತ್ರಚಿಕಿತ್ಸಾ ಕೇಂದ್ರವಾಗಿರುತ್ತದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

1 ಕೋ.ರೂ. ಬಿಡುಗಡೆ
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್‌ಆರ್‌ಎಚ್‌ಎಂ) ಮೂಲಕವಾಗಿ ಯೋಜನೆ ಕಾರ್ಯ ಗತಗೊಳ್ಳಲಿದೆ. ಈಗಾಗಲೇ ಒಂದು ಕೋ.ರೂ. ಬಿಡುಗಡೆಯಾಗಿದೆ. ಇನ್ನೂ ಕನಿಷ್ಠ 50 ಲ.ರೂ.ಗಳ ಅಗತ್ಯ ಇರುವ ಬಗ್ಗೆ ಅಧಿಕಾರಿಗಳು ಎನ್‌ಆರ್‌ಎಚ್‌ಎಂಗೆ ತಿಳಿಸಿದ್ದಾರೆ. ಆ ಮೊತ್ತ ಕೂಡ ಹಂತ ಹಂತವಾಗಿ ಬಿಡುಗಡೆಗೊಳಿಸುವ ಕುರಿತು ಎನ್‌ಆರ್‌ಎಚ್‌ಎಂ ಭರವಸೆ ನೀಡಿದೆ.

ವರ್ಷಕ್ಕೆ 500-600 ಸರ್ಜರಿ 
ಪ್ರಸ್ತುತ ಜಿಲ್ಲಾಸ್ಪತ್ರೆಯಲ್ಲಿ ಇಬ್ಬರು ನೇತ್ರ ತಜ್ಞರಿದ್ದು, ವರ್ಷಕ್ಕೆ 500-600 ಮಂದಿಗೆ ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ದಿನಕ್ಕೆ ನೂರರಷ್ಟು ಮಂದಿ ಕಣ್ಣಿನ ತಪಾಸಣೆ, ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವವರಲ್ಲಿ ನೇತ್ರ ತಪಾಸಣಾ ಶಿಬಿರಗಳ ಮೂಲಕವಾಗಿ ಬರುವ ಶೇ.50ರಷ್ಟು ಮಂದಿ ಹಾಗೂ ನೇರ ವಾಗಿ ಬರುವ ಶೇ.50ರಷ್ಟು ಮಂದಿ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ಕೇಂದ್ರ ಶೀಘ್ರವಾಗಿ ಕಾರ್ಯಗತಗೊಂಡು ಜನರಿಗೆ ಸೇವೆ ಒದಗಿಸಬೇಕಾಗಿದೆ. ಜತೆಗೆ ಅಗತ್ಯ ಸಿಬಂದಿ ಹಾಗೂ ಮತ್ತಷ್ಟು ತಜ್ಞ ವೈದ್ಯರ ನೇಮಕವಾಗಬೇಕೆಂಬ ಬೇಡಿಕೆ ಸಾರ್ವಜನಿಕರದ್ದು.

Advertisement

Udayavani is now on Telegram. Click here to join our channel and stay updated with the latest news.

Next