Advertisement
ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮದ ಸುಮತಿ ಅವರ ಮನೆಗೆ ಭಾಗಶಃ ಹಾನಿಯಾಗಿದ್ದು, 30,000 ರೂ. ನಷ್ಟ ಅಂದಾಜಿಸಲಾಗಿದೆ. ಹಲುವಳ್ಳಿ ಗ್ರಾಮದ ಅಪ್ಪಿ ಅವರ ಮನೆಗೆ ಹಾನಿಯಾಗಿ ಸುಮಾರು 15,000 ರೂ. ನಷ್ಟ ಅಂದಾಜಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 169ಎಯ ಮಣಿಪಾಲ ಲಕ್ಷ್ಮೀಂದ್ರನಗರದ ಐನಾಕ್ಸ್ ಚಿತ್ರಮಂದಿರದ ಮುಂಭಾಗದ ಗುಡ್ಡದ ಮಣ್ಣು ಕುಸಿದು ವಾಹನ ಚಾಲಕರಲ್ಲಿ ಆತಂಕ ಉಂಟಾಗಿದೆ. ರವಿವಾರ ಬೆಳಗ್ಗಿನ ಸಮಯ ಮಣ್ಣು ಕುಸಿದು ರಸ್ತೆಗೆ ಬಿದ್ದಿದ್ದು ಕಳೆದ ಬಾರಿಯೂ ಸಹ ಇದೇ ಸಮಯದಲ್ಲಿ ಮಣ್ಣು ಕುಸಿತ ವಾಗಿತ್ತು. ರಸ್ತೆ ವಿಸ್ತರಣೆಯ ಸಮಯದಲ್ಲಿ ಗುಡ್ಡದ ಬುಡದ ಮಣ್ಣನ್ನು ತೆರವುಗೊಳಿಸ ಲಾಗಿತ್ತು. ಇದರಿಂದ ಮಣ್ಣು ಸಡಿಲಗೊಂಡಿದೆ. ಸ್ವಲ್ಪ ದೂರದಲ್ಲೇ ಕಟ್ಟಡಗಳೂ ಇವೆ. ರಸ್ತೆಗೆ ಹೊಂದಿಕೊಂಡಂತೆ ಇರುವ ಈ ಪ್ರದೇಶ ಅಪಾಯಕಾರಿಯಾಗಿದೆ. ಯಾವುದೇ ಸಂದರ್ಭದಲ್ಲಿ ಮಣ್ಣು ವಾಹನಗಳ ಮೇಲೆ ಬೀಳುವ ಅಪಾಯ ವಿರುವ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆ ಬಳಸುವ ಕಬ್ಬಿಣದ ಬಲೆಯನ್ನು ಹಾಕುವಂತೆ ಸಾರ್ವಜನಿಕರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
Related Articles
ಗಾಳಿ ಮಳೆಯಿಂದ ಹೇರೂರು ಕಣ್ಣಬೆಟ್ಟಿನ ತಿಮ್ಮ ಪೂಜಾರಿ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಹಂದಾಡಿ ಗ್ರಾಮದ ಮೀನಕ್ಕ ಪೂಜಾರಿ ಅವರ ಹಟ್ಟಿ ಕುಸಿದು ಭಾಗಶಃ ಹಾನಿಯಾಗಿದೆ.
Advertisement
ಕುಂದಾಪುರ : ಸಾಧಾರಣ ಮಳೆಕುಂದಾಪುರ: ಬೈಂದೂರು ಹಾಗೂ ಕುಂದಾಪುರ ತಾಲೂಕಿನೆಲ್ಲೆಡೆ ರವಿವಾರ ಬೆಳಗ್ಗಿನಿಂದ ಸಂಜೆಯವರೆಗೂ ಸಾಧಾರಣ ಮಳೆಯಾಗಿದೆ. ಕುಂದಾಪುರ, ಹೆಮ್ಮಾಡಿ, ಗಂಗೊಳ್ಳಿ, ಮರವಂತೆ, ಉಪ್ಪುಂದ, ಬೈಂದೂರು, ಕೊಲ್ಲೂರು, ಹೊಸಂಗಡಿ, ಸಿದ್ದಾಪುರ, ಹಾಲಾಡಿ, ತೆಕ್ಕಟ್ಟೆ, ಗೋಳಿಯಂಗಡಿ, ಅಂಪಾರು, ಕಂಡ್ಲೂರು, ಬಸೂÅರು, ಶಂಕರನಾರಾಯಣ, ಕೊಲ್ಲೂರು, ಜಡ್ಕಲ್, ಮುಡೂರು, ವಂಡ್ಸೆ, ಕೆರಾಡಿ, ಕಾರ್ಕಳ, ಬೆಳ್ಮಣ್ ಮುಂತಾದೆಡೆ ಮಳೆಯಾದ ವರದಿಯಾಗಿದೆ.