Advertisement

ಉಡುಪಿ ಜಿಲ್ಲೆ: ಮತ್ತೆ ನಾಲ್ವರು ಶಂಕಿತರು

11:47 PM Mar 23, 2020 | mahesh |

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸೋಮವಾರ ತಲಾ ಇಬ್ಬರು ಪುರುಷ, ಮಹಿಳೆಯರ ಸಹಿತ ಒಟ್ಟು ನಾಲ್ವರು ಕೋವಿಡ್-19 ಶಂಕಿತರನ್ನು ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಇವರಲ್ಲಿ ಉಡುಪಿಯ ಮೂವರು, ಹೊರ ಜಿಲ್ಲೆಯ ಒಬ್ಬರು ಇದ್ದಾರೆ. ಇವರಲ್ಲಿ ಒಬ್ಬರು ರೋಗ ಲಕ್ಷಣ ಇರುವವರ ಸಂಪರ್ಕ ಹೊಂದಿರುವ ವರಾದರೆ, ಇನ್ನು ಮೂವರು ಉಸಿರಾಟದ ಸಮಸ್ಯೆಯ ಲಕ್ಷಣ ಇರುವವರು. ಇವರ್ಯಾರೂ ಹೊರ ದೇಶಗಳಿಂದ ಬಂದವರಲ್ಲ. ಈಗಾಗಲೇ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿ ರುವವರ ಒಟ್ಟು ಸಂಖ್ಯೆ 21.

ನಾಲ್ವರ ಗಂಟಲು ದ್ರವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇದುವರೆಗೆ ಒಟ್ಟು 51 ಜನರ ಮಾದರಿಗಳನ್ನು ಕಳುಹಿಸಲಾಗಿದ್ದು ಸೋಮವಾರ 19 ಮಂದಿಯ ಪರೀಕ್ಷಾ ವರದಿ ಕೈಸೇರಿದ್ದು ಇವರೆಲ್ಲರ ವರದಿ ನೆಗೆಟಿವ್‌ ಆಗಿದೆ. ಇದುವರೆಗೆ ಒಟ್ಟು 40 ನೆಗೆಟಿವ್‌ ವರದಿಗಳು ಬಂದಿವೆ. ಇದುವರೆಗೆ ಯಾರಿಗೂ ಪಾಸಿಟಿವ್‌ ವರದಿ ಬಂದಿಲ್ಲ. ಸೋಮವಾರ 9 ಮಂದಿ ಸಹಿತ ಒಟ್ಟು 28 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಸೋಮವಾರದ ನಾಲ್ವರು ಸೇರಿದಂತೆ ಒಟ್ಟು 11 ಮಂದಿಯ ಪರೀಕ್ಷಾ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಯವರು ತಿಳಿಸಿದ್ದಾರೆ.

ಸೋಮವಾರ ಆರೋಗ್ಯ ತಪಾಸಣೆಗೆ ಒಳಪಟ್ಟವರು ಒಟ್ಟು 247, ಇದುವರೆಗೆ ಒಟ್ಟು 757. ಸೋಮವಾರ ಒಟ್ಟು 28 ದಿನಗಳ ನಿಗಾ ಅವಧಿಯನ್ನು ಮುಗಿಸಿದವರು 59, ಇದುವರೆಗೆ ಒಟ್ಟು 220. ಹೋಮ್‌ ಕ್ವಾರಂಟೈನ್‌ಗೆ ಸೋಮವಾರ ಒಳಪಟ್ಟವರು 148, ಇದುವರೆಗೆ ಒಟ್ಟು 468.

ಕಂಟ್ರೋಲ್‌ ರೂಂ
ಉಡುಪಿಯಲ್ಲಿ ಸಾರ್ವಜನಿಕರ ವಿಚಾರಣೆಗಾಗಿ ಕಂಟ್ರೋಲ್‌ ರೂಂ ತರೆಯಲಾಗಿದ್ದು 210 ಕರೆಗಳು ಬಂದಿವೆ. ಸಾರ್ವಜನಿಕರು ಕೊರೊನಾ ಸಂಬಂಧಿಸಿ ಸಂಶಯಗಳಿದ್ದರೆ ಈ ದೂರವಾಣಿ ಸಂಖ್ಯೆಗಳಿಗೆ ಕರೆ ನೀಡಬಹುದು: 9663957222, 9663950222.

Advertisement

ಅನಗತ್ಯವಾಗಿ ಯಾವುದೇ ಸುಳ್ಳು ಮಾಹಿತಿಗಳನ್ನು ಹರಡಬಾರದು. ಇಂತಹವರ ವಿರುದ್ಧ ಕಾಯಿದೆಯಂತೆ ಅಪರಾಧ ಪ್ರಕರಣ ದಾಖಲಿಸಲಾಗುವುದೆಂದು ಜಿಲ್ಲಾಧಿಕಾರಿಯವರು ಎಚ್ಚರಿಸಿದ್ದಾರೆ.

ಉಸಿರಾಟದ ತೊಂದರೆ ಇರುವವರಿಗೆ ಮತ್ತು ವಿದೇಶದಿಂದ ಬಂದ ಪ್ರಯಾಣಿಕರ ಜತೆ ಅಥವಾ ಸೋಂಕು ದೃಢಪಟ್ಟವರೊಂದಿಗೆ ಸಂಪರ್ಕ ಹೊಂದಿರುವವರನ್ನೂ ಪರೀಕ್ಷಿಸಲು ಸರಕಾರದ ನಿರ್ದೇಶನವಿರುವ ಕಾರಣ ಎರಡು ದಿನಗಳಿಂದ ನಿಗಾ ಇರಿಸುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.
ಮಾ. 21ರ ರಾತ್ರಿಯಿಂದ ಶಿರೂರು ಮತ್ತು ಹೆಜಮಾಡಿ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆಯನ್ನು ಆರಂಭಿಸಲಾಗಿದೆ.

ಕೋವಿಡ್-19 ಪಾಸಿಟಿವ್‌ ವ್ಯಕ್ತಿ ಜತೆ ಪ್ರಯಾಣಿಸಿದವರ ಪತ್ತೆ
ಉಡುಪಿ: ಮಂಗಳೂರಿನಲ್ಲಿ ಪತ್ತೆಯಾದ ಕೋವಿಡ್-19 ಪಾಸಿಟಿವ್‌ ಪ್ರಕರಣದ ಭಟ್ಕಳದ ವ್ಯಕ್ತಿ ದುಬಾೖಯಿಂದ ವಿಮಾನದಲ್ಲಿ ಬರುವಾಗ ಅವರ ಸಂಪರ್ಕಕ್ಕೆ ಒಳಗಾದ ಉಡುಪಿ ಜಿಲ್ಲೆಯ ಎಲ್ಲ 21 ವ್ಯಕ್ತಿಗಳನ್ನು ಗುರುತಿಸಲಾಗಿದ್ದು ಇವರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಹೋಂ ಕ್ವಾರಂಟೈನ್‌ಗೆ ಅವರಿಗೆ ಸೂಚಿಸಲಾಗಿದೆ.

ಅವರ ವಿವರ ಇಂತಿದೆ: ಬ್ರಹ್ಮಾವರ ತಾಲೂಕು ಸಾಸ್ತಾನದವರು ಒಬ್ಬರು (32 ವ.), ಬೈಂದೂರು ಶೀರೂರಿನ ಒಬ್ಬರು (28), ಬಿಜೂರು ದೊಂಬಳ್ಳಿಯ ಒಬ್ಬರು (32), ಕಾರ್ಕಳ ಕುಕ್ಕುಂದೂರು (36), ತೆಳ್ಳಾರು ರಸ್ತೆಯ (40), ಬೈಲೂರು (24), ಕಾಪು ಚರ್ಚ್‌ ಸಮೀಪದ ಒಬ್ಬರು (45), ಕಾಪು (26), ಶಂಕರಪುರ (43), (44), ಹೇರೂರು (39), ಕುಂದಾಪುರ ತಾಲೂಕಿನ ಗಂಗೊಳ್ಳಿ (28), ಕುಂದಾಪುರ (38), (22), ವಕ್ವಾಡಿ (52), ಕೋಟೇಶ್ವರ (22), ಕೋಡಿ (36), ಕೆ.ಕೆ. ರೋಡ್‌ (31), ಉಡುಪಿ ತಾಲೂಕು ಅಂಬಲಪಾಡಿ (53), (57), ಹೂಡೆ (38).

Advertisement

Udayavani is now on Telegram. Click here to join our channel and stay updated with the latest news.

Next