Advertisement

Udupi District: ಅಪಘಾತಕ್ಕೆ ಕಾರಣವಾಗದಿರಲಿ ವಾಹನ ಚಾಲನೆ

11:32 PM Jun 24, 2023 | Team Udayavani |

ಉಡುಪಿ: ಮಳೆಗಾಲದಲ್ಲಿ ವಾಹನ ಚಲಾಯಿಸುವಾಗ ಆದಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಎದುರಾಗುವ ಸಾಧ್ಯತೆಗಳಿವೆ. ಜಿಲ್ಲೆಯಲ್ಲಿ 2021ರಿಂದ 2023ರ ಜೂ. 15ರ ವರೆಗೆ ಒಟ್ಟು 2,808 ಅಪಘಾತಗಳು ಸಂಭವಿಸಿವೆ. 423 ಮಂದಿ ಸಾವನ್ನಪ್ಪಿದ್ದಾರೆ.

Advertisement

2021ರಲ್ಲಿ ಒಟ್ಟು 1,010 ರಸ್ತೆ ಅಪಘಾತಗಳು ಉಂಟಾಗಿದ್ದು, 1,356 ಗಾಯಾಳುಗಳ ಪೈಕಿ 189 ಮಂದಿ ಸಾವನ್ನಪ್ಪಿದ್ದಾರೆ. 2022ರಲ್ಲಿ 1,232 ಅಪಘಾತ ಸಂಭವಿಸಿದ್ದು, 1,720 ಗಾಯಾಳುಗಳ ಪೈಕಿ 234 ಮಂದಿ ಸಾವನ್ನಪ್ಪಿದ್ದಾರೆ. 2023ರ ಜೂನ್‌ 15ರ ವರೆಗೆ ಸಂಭವಿಸಿದ ಅಪಘಾತಗಳ ಸಂಖ್ಯೆ 566.19 ಬ್ಲ್ಯಾಕ್‌ ಸ್ಪಾಟ್‌ಜಿಲ್ಲೆಯಲ್ಲಿ ಒಟ್ಟು 19 ಬ್ಲ್ಯಾಕ್‌ ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಇಲ್ಲಿ ರಾ.ಹೆ. ಹಾಗೂ ಪಿಡಬ್ಲ್ಯೂ ಡಿ ವತಿಯಿಂದ ಬೇಕಿರುವ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಸ್ತೆ ಸುರಕ್ಷ ವಿಭಾಗ, ಆರ್‌ಟಿಒ ಹಾಗೂ ಪೊಲೀಸ್‌ ಇಲಾಖೆಯವರು ಈ ಬ್ಲ್ಯಾಕ್‌ ಸ್ಪಾಟ್‌ಗಳಿಗೆ ತೆರಳಿ ಬೇಕಿರುವ ಅಗತ್ಯ ಕ್ರಮಗಳಾದ ಬ್ಯಾರಿಕೇಡ್‌ ಅಳವಡಿಕೆ, ಎಚ್ಚರಿಕೆ ಫ‌ಲಕ ಸಹಿತ ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಬ್ಲ್ಯಾಕ್‌ ಸ್ಪಾಟ್‌ಗಳಲ್ಲಿ ಚಾಲಕರ ವೈಫ‌ಲ್ಯ, ವಾಹನಗಳ ಅಚಾತುರ್ಯ ಸಹಿತ ಅನಿರೀಕ್ಷಿತ ಅಪಘಾತಗಳು ಒಳಗೊಂಡಿವೆ. ಈ ಬಗ್ಗೆ ಈ ಮೂರು ಸಮಿತಿಗಳು ಅಗತ್ಯ ವರದಿ ಸಿದ್ಧಪಡಿಸಿ ರಸ್ತೆ ಸುರಕ್ಷಾ ಪ್ರಾಧಿಕಾರಕ್ಕೆ ಸಲ್ಲಿಸಲಿದ್ದಾರೆ.

ಕೆಲವೆಡೆ ಅಪಘಾತ ನಿಯಂತ್ರಣ
ಹೆಚ್ಚಿನ ಅಪಘಾತ ಉಂಟಾಗುತ್ತಿದ್ದ ಪ್ರದೇಶದಲ್ಲಿ ಅಗತ್ಯ ಕ್ರಮ ತೆಗೆದುಕೊಂಡ ಬಳಿಕ ಅಪಘಾತ ಕಡಿಮೆಯಾಗಿದೆ. ಉಚ್ಚಿಲದಲ್ಲಿ ಸರ್ವಿಸ್‌ ರಸ್ತೆಯಾದ ಬಳಿಕ ಯಾವುದೇ ಅಪಘಾತ ಸಂಭವಿಸಿಲ್ಲ. ಸಂತೆಕಟ್ಟೆಯಲ್ಲಿಯೂ ಅಂಡರ್‌ಪಾಸ್‌ ಆದ ಬಳಿಕ ಅಪಘಾತ ನಿಯಂತ್ರಣ ಆಗಲಿದೆ. ಮಳೆಗಾಲದಲ್ಲಿ ಅಂಡರ್‌ಪಾಸ್‌, ಓವರ್‌ಪಾಸ್‌ಗಳಲ್ಲಿ ನೀರು ನಿಲ್ಲದಂತೆ ಹೆದ್ದಾರಿ ಇಲಾಖೆಯವರೇ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.ವಿರುದ್ಧ ದಿಕ್ಕಿನ ಚಾಲನೆಯಿಂದ ಹಲವು ಅಪಘಾತವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸಿದ ಪರಿಣಾಮ 2021ರಲ್ಲಿ 183 ಮಂದಿ ಸಾವನ್ನಪ್ಪಿದ್ದಾರೆ. 14 ಅಪಘಾತಗಳು ಉಂಟಾಗಿವೆ. 2022ರಲ್ಲಿ 237 ಮಂದಿ ಸಾವನ್ನಪ್ಪಿದ್ದು, 35 ಅಪಘಾತಗಳು ಉಂಟಾಗಿವೆ. 2021ರಲ್ಲಿ 47 ಮಂದಿ ಪಾದಚಾರಿಗಳು ಹಾಗೂ 2022ರಲ್ಲಿ 69 ಮಂದಿ ಪಾದಚಾರಿಗಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಹೆಲ್ಮೆಟ್‌ ಕಡ್ಡಾಯವಾಗಿ ಧರಿಸಿ
ದ್ವಿಚಕ್ರವಾಹನ ಚಾಲನೆ ವೇಳೆ ಹೆಲ್ಮೆಟ್‌ ಧರಿಸುವುದು ಕಡ್ಡಾಯವಾಗಿದೆ. 2021ರಲ್ಲಿ ಹೆಲ್ಮೆಟ್‌ ಇಲ್ಲದೆ ವಾಹನ ಚಲಾಯಿಸಿದ ಪರಿಣಾಮ 20 ಮಂದಿ ಹಾಗೂ 2022ರಲ್ಲಿ 26 ಮಂದಿ ಸಾವನ್ನಪ್ಪಿದ್ದಾರೆ.

ಶೂನ್ಯ ಅಪಘಾತ
ಅಪಘಾತ ವಲಯವಾದ ಕಟಪಾಡಿ ಜಂಕ್ಷನ್‌, ಕೋಟದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡ ಪರಿಣಾಮ ಕಳೆದ 5 ತಿಂಗಳಿನಲ್ಲಿ ಯಾವುದೇ ಅಪಘಾತ ಸಂಭವಿಸಿಲ್ಲ.

Advertisement

ಎಚ್ಚರ ಅಗತ್ಯ
ವಾಹನ ಚಲಾಯಿಸುವ ವೇಳೆ ರಸ್ತೆ ಸುರಕ್ಷಾ ನಿಯಮಾವಳಿಯನ್ನು ಪಾಲಿಸುವ ಜತೆಗೆ ಆದಷ್ಟು ಎಚ್ಚರದಿಂದ ಇರಬೇಕು. ಮಳೆಗಾಲದಲ್ಲಿಯೂ ವಾಹನವನ್ನು ನಿಧಾನವಾಗಿ ಚಲಾಯಿಸಿದರೆ ಉತ್ತಮ.
– ಹಾಕೆ ಅಕ್ಷಯ್‌ ಮಚ್ಚೀಂದ್ರ,
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next