ಶಿರೂರು : ಕಾಲ್ತೋಡಿನಲ್ಲಿ ಸೋಮವಾರ ಸಂಜೆ ಶಾಲೆಯಿಂದ ಮನೆಗೆ ಬರುತ್ತಿದ್ದ ವೇಳೆ ಕಾಲು ಸಂಕ ದಾಟುವ ಸಂದರ್ಭ ಕಾಲು ಜಾರಿ ನದಿಗೆ ಬಿದ್ದು ನಿರುಪಾಲಾಗಿದ್ದ ವಿದ್ಯಾರ್ಥಿನಿ ಸನ್ನಿಧಿ(7)ಯ ಪೋಷಕರ ಮನೆಗೆ ಉಡುಪಿ ಜಿಲ್ಲಾಧಿಕಾರಿ ಭೇಟಿ ನೀಡಿ ಪೋಷಕರಿಗೆ ಧೈರ್ಯ ತುಂಬಿದ್ದಾರೆ.
ನಿರುಪಾಲಾಗಿದ್ದ ಅಕ್ಷತಾ ಪತ್ತೆಗೆ ರಕ್ಷಣಾ ತಂಡ ಶೋಧ ಕಾರ್ಯ ನಡೆಸುತ್ತಿದೆ.
ಇದೆ ವೇಳೆ ನೆರೆಹಾವಳಿಯಿಂದ ಅರವತ್ತಕ್ಕೂ ಅಧಿಕ ನಾಡದೋಣಿ ಶಿಥಿಲಗೊಂಡಿರುವ ಕಳುಹಿತ್ಲು ಪ್ರದೇಶಕ್ಕೆ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಭೇಟಿ ನೀಡಿ ಶಿಥಿಲಗೊಂಡಿರುವ ದೋಣಿಗಳನ್ನು ವೀಕ್ಷಿಸಿದ ಅವರು ಬಳಿಕ ಮಾತನಾಡಿ ನೆರೆ ಸಂಭವಿಸಿದ ದಿನ ಶಿರೂರಿನ ಅನೇಕ ಕಡೆ ಭೇಟಿ ನೀಡಿದ್ದೇನೆ. ಮೀನುಗಾರಿಕೆಯನ್ನು ನಂಬಿಕೊಂಡಿರುವ ಮೀನುಗಾರರು ಕೂಡ ನೆರೆಹಾವಳಿಯಿಂದ ಅಪಾರ ನಷ್ಟ ಅನುಭವಿಸಿದ್ದಾರೆ. ಅನೇಕ ದೋಣಿಗಳು ಹಾನಿಗೀಡಾಗಿದೆ. ಈಗಾಗಲೆ ವರದಿಯನ್ನು ಸರಕಾರಕ್ಕೆ ಕಳುಹಿಸಲಾಗಿದೆ. ಪ್ರಾಕೃತಿಕ ವಿಕೋಪ ಅನುದಾನ ಸೇರಿದಂತೆ ಸರಕಾರದಿಂದ ಅವಕಾಶವಿರುವ ಗರಿಷ್ಡ ಸಹಕಾರ ನೀಡುವ ಪ್ರಯತ್ನದ ಜೊತೆಗೆ ಮೀನುಗಾರರ ಸಮಸ್ಯೆಗೆ ಜಿಲ್ಲಾಡಳಿತ ಸದಾ ಸಹಕರಿಸುತ್ತದೆ ಎಂದರು.
ಇದನ್ನೂ ಓದಿ : ಈ ಮನೆಯಲ್ಲಿ ತಾಯಿ – ಮಗ ಇಬ್ಬರೂ ಮಾನಸಿಕ ಅಸ್ವಸ್ಥರು : ಇವರಿಗೆ ಬೇಕಿದೆ ನೆರವಿನ ಹಸ್ತ