Advertisement
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಶೇ. 44.89ರಷ್ಟು ಮತ ಪಡೆದಿತ್ತು. ಈ ಬಾರಿ ಶೇ. 38.72 ಕ್ಕೆ ಕುಸಿದಿದೆ. ಬಿಜೆಪಿ ಮತಗಳಿಕೆ ಹೆಚ್ಚಾಗಿದೆ. ಇದಕ್ಕೆ ಬಿಜೆಪಿ ಸಂಘಟನಾ ಸಾಮರ್ಥ್ಯದೊಂದಿಗೆ ಜಿಲ್ಲಾ ಕಾಂಗ್ರೆಸ್‌ನ ಪ್ರಬಲ ಹೋರಾಟದ ಕೊರತೆಯೂ ಕಾರಣ ಎನ್ನಬಹುದು.
Related Articles
Advertisement
ಈ ಬಾರಿ 1,66,060 ಮತ ಚಲಾವಣೆಯಾಗಿತ್ತು. ಇದರಲ್ಲಿ ಬಿಜೆಪಿ 97,076 ಮತ ಪಡೆದಿದ್ದರೆ, ಕಾಂಗ್ರೆಸ್ 64,303 ಮತ ಪಡೆದಿದೆ. ಹಿಂದಿನ ಬಾರಿಗಿಂತ 8,599 ಮತಗಳು ಕಡಿಮೆ ಬಂದಿವೆ. 18-19 ವರ್ಷದ 4,309 ಮತದಾರರು ಸೇರಿದಂತೆ 5 ವರ್ಷದಲ್ಲಿ ಸೇರ್ಪಡೆಯಾದ 8ರಿಂದ 10 ಸಾವಿರ ಮತದಾರರಲ್ಲಿ ಶೇ.70ರಷ್ಟು ಮತದಾರರನ್ನು ಬಿಜೆಪಿ ಸೆಳೆದಿರುವಂತೆ ತೋರಿದೆ.
ಬಿಜೆಪಿ ಗೆಲುವಿಗೆ ಇನ್ನೊಂದು ಕಾರಣವೆಂದರೆ, ಕಾಂಗ್ರೆಸ್ ಸಂಘ ಟನಾತ್ಮಕವಾಗಿ ಗಟ್ಟಿ ಇಲ್ಲದಿರುವುದು ಮತ್ತು ಸಮರ್ಥ ನಾಯಕತ್ವದ ಕೊರತೆ.
ಕಳೆದ ಬಾರಿ ರಘುಪತಿ ಭಟ್ 12,044 ಮತಗಳಿಂದ ಗೆದ್ದಿದ್ದರೆ, ಈ ಬಾರಿ ಯಶ್‌ಪಾಲ್ 32,773 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು. ಒಂದೊಮ್ಮೆ ಬಿಜೆಪಿ ಅಭ್ಯರ್ಥಿ ಬದಲಾಯಿಸದೇ ಇದ್ದಿದ್ದರೆ ಇಷ್ಟು ದೊಡ್ಡ ಅಂತರದ ಗೆಲುವು ಸಿಗುತ್ತಿತ್ತೇ ಹಾಗೂ ಗೆಲುವು ಬಿಜೆಪಿಗೆ ಸುಲಭದ ತುತ್ತಾಗಿರುತ್ತಿತ್ತೇ ಎಂಬ ಪ್ರಶ್ನೆಯನ್ನೂ ಫಲಿತಾಂಶ ಉದಾಹರಣೆ ಸಮೇತ ಮುಂದಿಟ್ಟಿದೆ. ಅಭಿವೃದಿಯ ಅಸ್ತ್ರದ ಜತೆಗೆ ಜಾತಿ ಲೆಕ್ಕಾಚಾರಕ್ಕಿಂತಲೂ ಹಿಂದುತ್ವ, ಸಂಘಟನೆ, ಕಾರ್ಯಕರ್ತರ ವಿಶ್ವಾಸ-ಗೌರವ, ಸಂಘಪರಿವಾರದ ವಿಶ್ವಾಸಾರ್ಹತೆ ಉಳಿಸಿಕೊಳ್ಳುವುದು ಮುಖ್ಯ ಎಂಬುದನ್ನೂ ಉಡುಪಿ ಕ್ಷೇತ್ರ ಸೇರಿದಂತೆ ಕೆಲವು ಕ್ಷೇತ್ರಗಳ ಗೆಲುವು ಸಾಬೀತು ಪಡಿಸಿವೆ.
ಬಿಜೆಪಿ ತನ್ನ ಕೋಟೆಯನ್ನು ಭದ್ರ ಪಡಿಸಿಕೊಳ್ಳಲು ಎಲ್ಲ ರೀತಿಯ ಸಂಘಟಿತ ಪ್ರಯತ್ನ ನಡೆಸಿ ಯಶ ಸಾಧಿಸಿದೆ. ಕಾಂಗ್ರೆಸ್ ಸಾಂ ಕ ಹೋರಾಟ ನೀಡುವಲ್ಲಿ ಸ್ವಲ್ಪ ಎಡವಿದೆ.
– ರಾಜು ಖಾರ್ವಿ ಕೊಡೇರಿ