ಹೀಗಿರುವ ಪೌರಕಾರ್ಮಿಕರೇ ಹೆಚ್ಚುವರಿ ಕೆಲಸಗಳನ್ನು ಮಾಡುವ ಮೂಲಕ ಸ್ವಚ್ಛತೆಗಾಗಿ ಶ್ರಮಿಸುತ್ತಿದ್ದಾರೆ.
Advertisement
ನಗರದಲ್ಲಿ ಮುಂಬರುವ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರ ಪರ್ಯಾಯ ಮಹೋತ್ಸವ ಉಡುಪಿ ಅಣಿಯಾಗುತ್ತಿದೆ. ಇದಕ್ಕಾಗಿ ನಗರಸಭೆ ಹೆಚ್ಚುವರಿಯಾಗಿ ಹೊರಗುತ್ತಿಗೆ ಪೌರಕಾರ್ಮಿಕರನ್ನು ನೇಮಿಸಿಕೊಂಡಿದೆ.
ಡ್ರೈನೇಜ್ ವ್ಯವಸ್ಥೆ ಸರಿಪಡಿಸಲು, ತ್ಯಾಜ್ಯ ಸಂಗ್ರಹ ಇನ್ನಿತರ ಕೆಲಸಗಳಿಗೆ ಹೊರಗುತ್ತಿಗೆಯಲ್ಲಿಯೂ ಕೆಲವು ಮಂದಿ
ಪೌರಕಾರ್ಮಿಕರು ತೊಡಗಿಸಿಕೊಂಡಿದ್ದಾರೆ.
Related Articles
Advertisement
ಇದನ್ನೂ ಓದಿ:ಪ್ಯಾಂಗಾಂಗ್ ಸರೋವರಕ್ಕೆ ಸೇತುವೆ ನಿರ್ಮಿಸುತ್ತಿದೆ ಚೀನಾ! ಉಪಗ್ರಹ ಚಿತ್ರದಿಂದ ಸ್ಪಷ್ಟ
ಪರ್ಯಾಯ ಸ್ವಚ್ಛತಾ ಕಾರ್ಯಕ್ಕೆ 100 ಮಂದಿ ಪರ್ಯಾಯ ಸ್ವಚ್ಛತಾ ಕಾರ್ಯದ ಸಲುವಾಗಿ ನಗರಸಭೆ ವ್ಯವಸ್ಥಿತ ಯೋಜನೆ ರೂಪಿಸಿದೆ. 100 ಮಂದಿ ಪೌರಕಾರ್ಮಿಕರನ್ನು ತಾತ್ಕಾಲಿಕವಾಗಿ ಹೊರಗುತ್ತಿಗೆಯಲ್ಲಿ ನೇಮಿಸಿಕೊಳ್ಳಲಾಗಿದೆ ಜ. 4 ರಿಂದ 15 ದಿನಗಳವರೆಗೆ ಇವರು ನಗರದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ. ಕೃಷ್ಣ ಮಠದ ರಥ ಬೀದಿ, ರಾಜಾಂಗಣ, ಪಾರ್ಕಿಂಗ್, ರಾಯಲ್ ಗಾರ್ಡನ್ ಪಾರ್ಕಿಂಗ್, ಮಠಕ್ಕೆ ಹೋಗುವ ರಸ್ತೆಗಳಾದ ತೆಂಕಪೇಟೆ, ಬಡಗುಪೇಟೆ, ಸರ್ವಿಸ್ ಮತ್ತು ಸಿಟಿ ಬಸ್ ನಿಲ್ದಾಣದಿಂದ ಮಠಕ್ಕೆ ಹೋಗುವ ರಸ್ತೆಗಳು ಹಾಗೂ ಹೆಚ್ಚಿನ ಜನಸಂದಣಿಯಿಂದ ಕೂಡಿರುವ ಸರ್ವಿಸ್ ಮತ್ತು ಸಿಟಿ ಬಸ್ ನಿಲ್ದಾಣ, ಪರ್ಯಾಯ ಮಹೋತ್ಸವದ ಮೆರವಣಿಗೆ ರಸ್ತೆಗಳು ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಹಗಲೂ ಮತ್ತು ರಾತ್ರಿ ಸಮಯಗಳಲ್ಲಿ ನಿರ್ವಹಿಸಬೇಕಾಗಿರುತ್ತದೆ. ಇದರಂತೆ 100 ಜನ ಪೌರಕಾರ್ಮಿಕರನ್ನು ತಲಾ 50 ಜನರ 2 ತಂಡಗಳನ್ನಾಗಿ ವಿಭಾಗಿಸಿ ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಸ್ವಚ್ಛತೆ ಕೆಲಸಗಳನ್ನು ನಡೆಸಲಾಗುತ್ತದೆ. ಉದ್ದದ ಹಿಡಿ ಪೊರಕೆ, ಮೆಟಲ್ ಟ್ರೇ, ಪ್ಲಾಸ್ಟಿಕ್ ಬುಟ್ಟಿ, ಪ್ಲಾಸ್ಕ್, ಮಾಸ್ಕ್, ಗ್ಲೌಸ್, ಗುರುತಿನ ಚೀಟಿ, ರೇಡಿಯಂ ಜಾಕೆಟ್ ತಳ್ಳುಗಾಡಿ ಮತ್ತು 1 ಲಕ್ಷ ರೂ ವೆಚ್ಚದಲ್ಲಿ ಫಿನಾಯಿಲ್, ಬೈಟೆಕ್ಸ್, ಬ್ಲೀಚಿಂಗ್ ಪೌಡರ್ ಒದಗಿಸಲಾಗುತ್ತದೆ. ನಗರದ 34 ಕಡೆಗಳಲ್ಲಿ ಮೊಬೈಲ್ ಟಾಯ್ಲೆಟ್ ಬ್ಲಾಕ್‌ಗಳನ್ನು ಅಳವಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಗರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ
ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಪೌರಕಾರ್ಮಿಕರ ಕೊರತೆ ಮತ್ತು ನೇಮಕಾತಿ ಸಂಬಂಧಿಸಿ ಈಗಾಗಲೆ ನಗರಸಭೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇವೆ. ಸರಕಾರದ ಮಟ್ಟದಲ್ಲಿಯೂ ಈ ಬಗ್ಗೆ ಪರಿಶೀಲನೆಯಾಗಬೇಕಿದೆ. ಪರ್ಯಾಯೋತ್ಸವ ಹಿನ್ನೆಲೆಯಲ್ಲಿ ನಗರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸ್ವಚ್ಛತಾ ಕಾರ್ಯಕ್ಕೆ ಹೆಚ್ಚುವರಿ ಹೊರಗುತ್ತಿಗೆಯಲ್ಲಿ ಪೌರ ಕಾರ್ಮಿಕರನ್ನು ನೇಮಿಸಲಾಗುತ್ತದೆ.
– ಸುಮಿತ್ರಾ ನಾಯಕ್, ಅಧ್ಯಕ್ಷೆ , ಉಡುಪಿ ನಗರಸಭೆ