Advertisement

ಉಡುಪಿ: ಸಿಟಿ ಸೆಂಟರ್‌ ವಾಣಿಜ್ಯ ಸಮುಚ್ಚಯ ಉದ್ಘಾಟನೆ

12:30 AM Feb 10, 2019 | |

ಉಡುಪಿ: ಉಡುಪಿ ಡೆವಲಪರ್ನವರಿಂದ ನಗರದ ಜಾಮಿಯಾ ಮಸೀದಿ ಎದುರು ನಿರ್ಮಾಣಗೊಂಡಿರುವ ಸಿಟಿ ಸೆಂಟರ್‌ ವಾಣಿಜ್ಯ ಸಮುಚ್ಚಯವನ್ನು ಬಿ.ಎಂ. ಅಬ್ಟಾಸ್‌ ಅವರು ಶನಿವಾರ ಉದ್ಘಾಟಿಸಿದರು.

Advertisement

ಜಾಮಿಯಾ ಮಸೀದಿಯ ಧರ್ಮಗುರು ಮೌಲಾನಾ ರಶೀದ್‌ ಅಹ್ಮದ್‌ ಅವರು ಆಶೀರ್ವಚನ ನೀಡಿ ‘ಜಮಾಲುದ್ದೀನ್‌ ಅವರು ಸಿಟಿ ಸೆಂಟರ್‌ ನಿರ್ಮಿಸಿ ಉಡುಪಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಇದೊಂದು ಪ್ರಮುಖ ಸಾಧನೆ’ ಎಂದು ಹೇಳಿದರು.

ಶಾಸಕ ಕೆ.ರಘುಪತಿ ಭಟ್ ಅವರು ಮಾತನಾಡಿ, ಇದು ಉಡುಪಿ ನಗರದ ಪ್ರಥಮ ಮಾಲ್‌ ಆಗಿದ್ದು ನಗರಕ್ಕೂ ಶೋಭೆ ತರಲಿದೆ. ಮಾಲ್‌ನಲ್ಲಿ ಈಗಾಗಲೇ ಬ್ರಾಂಡೆಡ್‌ ಕಂಪೆನಿಗಳು ಮಳಿಗೆ ತೆರೆದಿರುವುದರಿಂದ ಮಾಲ್‌ಗೆಗರಿಮೆ ಬಂದಂತಾಗಿದೆ. ಇತರ ದೊಡ್ಡ ನಗರಗಳಂತೆ ಉಡುಪಿ ಯಲ್ಲಿಯೂ ಸ್ಪರ್ಧಾತ್ಮಕ ಬೆಲೆಯಲ್ಲಿ ಗುಣಮಟ್ಟದ ವಸ್ತು ಗಳನ್ನು ಖರೀದಿಸಲು ಸಾಧ್ಯವಾಗ ಲಿದೆ. ಖಾಸಗಿಯವರ ಸಹಭಾಗಿತ್ವ ವಿದ್ದಾಗ ಅಭಿವೃದ್ಧಿ ವೇಗವಾಗಿ ಸಾಗುತ್ತದೆ ಎಂದು ಹೇಳಿದರು.

ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ನಗರಸಭೆ ಸದಸ್ಯ ಟಿ.ಜಿ. ಹೆಗ್ಡೆ, ವಿಜಯ ಬ್ಯಾಂಕ್‌ ಡಿಜಿಎಂ ರವಿಚಂದ್ರನ್‌ ಕೆ.ಆರ್‌., ಅಬ್ದುಲ್‌ ಜಲೀಲ್‌ ಸಾಹೇಬ್‌ ಉದ್ಯಾವರ, ಬಡಗಬೆಟ್ಟು ಕ್ರೆ.ಕೋ-ಆಪ್‌ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಶಬನ್‌ ಸಾಹೇಬ್‌, ಇಬ್ರಾಹಿಂ ಸಾಹೇಬ್‌ ಸಾಗರ, ಡಾ| ಟಿಎಂಎ ಪೈ ಆಸ್ಪತ್ರೆ ಉಡುಪಿಯ ಡಾ| ಅಫ‌್ಜಲ್‌ ಪಿ. ಮೊಹಮ್ಮದ್‌, ನ್ಯಾಯವಾದಿ ಲಕ್ಷ್ಮಣ್‌ ಶೆಣೈ, ನೈನಾ ಫ್ಯಾನ್ಸಿಯ ಮಹಮ್ಮದ್‌ ಮೌಲಾ, ಸಿಟಿ ಸೆಂಟರ್‌ನ ಆಡಳಿತ ನಿರ್ದೇಶಕ ಜಮಾಲುದ್ದೀನ್‌ ಉಪಸ್ಥಿತರಿದ್ದರು. ಚೇತನ್‌ ಶೆಟ್ಟಿ ಕಾರ್ಯಕ್ರಮ ನಿರ್ವಹಿಸದರು. ಮೈ ಸ್ಪೇಸ್‌ನ ಆಡಳಿತ ನಿರ್ದೇಶಕ ಶ್ರೀಧರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕನಸು ನನಸು
ಉಡುಪಿ ಬಿಲ್ಡರ್ ಅಸೋಸಿಯೇ ಶನ್‌ ಅಧ್ಯಕ್ಷ ಜೆರ್ರಿ ವಿನ್ಸೆಂಟ್‌ ಡಯಾಸ್‌ ಅವರು ಮಾತನಾಡಿ ಉಡುಪಿಯಲ್ಲಿ ಸಿಟಿ ಸೆಂಟರ್‌ ಆರಂಭವಾಗಿರು ವುದರಿಂದ ಉಡುಪಿ ನಗರದ ಜನರ ಕನಸು ನನಸಾಗಿದೆ. ಜಮಾಲುದ್ದೀನ್‌ ಅವರು ಧೈರ್ಯದಿಂದ ಸಾಧನೆ ಮಾಡಿದ್ದಾರೆ. ಧೈರ್ಯವಿದ್ದರೆ ಮಾತ್ರ ಉದ್ಯಮ, ಜೀವನದಲ್ಲಿ ಯಶಸ್ವಿ ಯಾಗಲು ಸಾಧ್ಯ. ಈ ಮಾಲ್‌ ಯುವ ಜನತೆಯನ್ನು ಕೂಡ ಆಕರ್ಷಿಸಲಿದೆ ಎಂದು ಹೇಳಿದರು. 
 

Advertisement
Advertisement

Udayavani is now on Telegram. Click here to join our channel and stay updated with the latest news.

Next