Advertisement

ಉಡುಪಿ ಸಿಟಿ ಬಸ್‌ ನಿಲ್ದಾಣ: ಕತ್ತಲೆಯಿಂದ ಮುಕ್ತಿಯತ್ತ…

06:35 AM Jun 04, 2018 | Team Udayavani |

ಉಡುಪಿ: ಉಡುಪಿ ನಗರಸಭೆಯ ಅಧೀನದಲ್ಲಿ ನಿರ್ವಹಣೆ ಯಲ್ಲಿರುವ ಉಡುಪಿ ಸಿಟಿ ಬಸ್‌ ನಿಲ್ದಾಣ ದಲ್ಲಿದ್ದ ಹೈಮಾಸ್ಟ್‌ ದೀಪವು ಕೆಟ್ಟು ಹೋಗಿ ಸುಮಾರು ಒಂದು ತಿಂಗಳ ಬಳಿಕ ರಿಪೇರಿ ಕಾರ್ಯ ನಡೆದಿದ್ದು ಕತ್ತಲೆಯಿಂದ ಮುಕ್ತಿ ಸಿಕ್ಕುವ ಹಂತದಲ್ಲಿದೆ.

Advertisement

ಸಿಟಿ ಬಸ್‌ ನಿಲ್ದಾಣದ ಮಧ್ಯಭಾಗದಲ್ಲಿ ಹೈಮಾಸ್ಟ್‌ ಕಂಬವಿದ್ದು, ಇದರಲ್ಲಿ 6 ಉರಿಯುವ ವಿದ್ಯುತ್‌ ದೀಪಗಳಿದೆ. ಮೊದಲು ಎಲ್ಲ ದೀಪಗಳು ಉರಿಯುತ್ತ ಲಿದ್ದು, ಕ್ರಮೇಣ ಒಂದೊಂದೇ ದೀಪ ಹಾಳಾಗುತ್ತಾ ಹೋಗಿದೆ. ಕಳೆದೊಂದು ತಿಂಗಳಿನಿಂದ ರಾತ್ರಿಯಾದ ಬಳಿಕ ಸೂಕ್ತ ವಾದ ಬೆಳಕಿನ ವ್ಯವಸ್ಥೆ ಇಲ್ಲಿಲ್ಲದೆ ಬಸ್‌ಗಾಗಿ ಕಾಯುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದವು.

ನಗರಸಭೆ ಗಮನಕ್ಕೆ ತಂದರೂ, ತಡವಾಗಿ ಎಚ್ಚೆತ್ತುಕೊಂಡಿದ್ದಾರೆ ಎಂದು ಪರಿಸರದ ವ್ಯಾಪಾರಸ್ಥರೊಬ್ಬರು ತಿಳಿಸಿದ್ದಾರೆ.

ದಾರಿದೀಪ, ಚರಂಡಿ ನಿರ್ವಹಣೆಯಲ್ಲಿ ನಗರಸಭೆ ಆಡಳಿತವು ಸಂಪೂರ್ಣ ವಿಫ‌ಲವಾಗಿದೆ. ನಗರದಲ್ಲಿ ಈ ಬಾರಿಯ ಮಳೆಗಾಲದ ಆರಂಭದಲ್ಲಾದ ಅವಘಡ ಕಣ್ಣ ಮುಂದಿದೆ. ಇನ್ನು ಮಳೆಗಾಲಕ್ಕೆ ದಾರಿದೀಪ ಕೈಕೊಡುವುದು ಸಾಮಾನ್ಯ ವಾಗಿದೆ. ಅದನ್ನು ಕೂಡಲೇ ಸರಿಪಡಿಸುವುದು ನಗರಸಭೆಯ ಕರ್ತವ್ಯ. ಇಲ್ಲದಿದ್ದರೆ ಕಳ್ಳರು ಕೈಚಳಕ ತೋರಿಸುತ್ತಾರೆ, ನಡೆದಾಡು ವವರಿಗೂ ಪರದಾಟ ತಪ್ಪಿದ್ದಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next