ಉಡುಪಿ : ಉಡುಪಿಯ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿಗಳು ಬಾಕಿಯಿರುವ ವೇತನ ಪಾವತಿಗೆ ಆಗ್ರಹಿಸಿ ಪ್ರತಿಭಟನೆ ಶುರು ಮಾಡಿದ್ದಾರೆ.
ಕಳೆದ ಮೂರು ತಿಂಗಳಿನಿಂದ ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ಆಸ್ಪತ್ರೆ ಸುಮಾರು 200 ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ವೈದ್ಯರು,ನರ್ಸ್ ಸೇರಿದಂತೆ ಎಲ್ಲಾ ವಿಭಾಗದ ಸಿಬ್ಬಂದಿಗಳು ವೇತನ ಪಾವತಿಗೆ ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಕದ್ರಿ: ತಬಲ ಕಲಾವಿದ ಸುರೇಶ್ ದಂಪತಿ ಆತ್ಮಹತ್ಯೆ
ಕಳೆದ ಅಕ್ಟೋಬರ್ ನಿಂದ ಪಿಎಫ್ ಐಯನ್ನೂ ಕೂಡ ತಡೆದಿಟ್ಟಿದ್ದಾರೆ. ಬಾಕಿ ವೇತನವನ್ನು ಪಾವತಿಸುವ ಬಗ್ಗೆ ಯಾವ ಮಾಹಿತಿಯನ್ನು ನೀಡುತ್ತಿಲ್ಲ. ಕೆಲಸ ಮುಂದುವರೆಸಿ ಎಂದು ಹೇಳುತ್ತಿದ್ದಾರೆ. ವೇತನ ಪಾವತಿಸದೆ ಕೆಲಸವನ್ನು ಎಷ್ಟು ತಿಂಗಳವರೆಗೆ ಮುಂದುವರೆಸಬೇಕೆನ್ನುವುದು ಪ್ರತಿಭಟನಾ ನಿರತರ ಆಳಲು.
ಇನ್ನು ಪ್ರತಿಭಟನೆಯ ಸುಳಿವು ಇಲ್ಲದೆ ದೂರದೂರಿನಿಂದ ಬಂದ ಗರ್ಭಿಣಿ ಮಹಿಳೆಯರು ವೈದರಿಲ್ಲದೆ ಪರದಾಟ ನಡೆಸುತ್ತಿದ್ದಾರೆ. ಮುಂಜಾನೆಯಿಂದ ಯಾವುದೇ ಚಿಕಿತ್ಸೆಯೂ ಇಲ್ಲದೆ, ಯಾವುದೇ ಪ್ರತಿಕ್ರಿಯೆವೂ ಸಿಗದೆ ಗರ್ಭಿಣಿಯರು ಕಾಯುತ್ತಾ ಕೂತಿದ್ದಾರೆ.