Advertisement
ಹೆತ್ತಮ್ಮನಿಂದ ದೂರ: 1970ರ ಮೇ 1ರಂದು ಉಡುಪಿಯ ಬಾಸೆಲ್ ಮಿಶನ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಯಾವುದೋ ಕಾರಣದಿಂದ ಮಗುವನ್ನು ತ್ಯಜಿಸಿ ತೆರಳಿದ್ದರು. ಆಗ ಸ್ವಿಟ್ಸರ್‌ಲ್ಯಾಂಡ್‌ನಿಂದ ಬಂದು ಕೇರಳದ ಕಣ್ಣೂರು ಜಿಲ್ಲೆಯ ತಲಶೆÏàರಿಯಲ್ಲಿ ಅನಾಥಾಶ್ರಮವನ್ನು ನಡೆಸುತ್ತಿದ್ದ ಜರ್ಮನ್ ಮಿಶನರಿ ದಂಪತಿ ಫ್ರಿಟ್ಸ್ ಗುಗ್ಗರ್ -ಎಲಿಜಬೆತ್ ಗುಗ್ಗರ್, ಬಾಸೆಲ್ ಮಿಶನ್ ಆಸ್ಪತ್ರೆಯನ್ನು ಸಂಪರ್ಕಿಸಿ ಆ ಮಗುವನ್ನು ಪಡೆದುಕೊಂಡಿದ್ದರು.
Related Articles
Advertisement
ರಾಜಕೀಯವಾಗಿ ನಿಕ್ ಗುಗ್ಗರ್ 2002ರಿಂದ ಒಂದೊಂದೇ ಹೆಜ್ಜೆ ಇರಿಸಿ ಮುನ್ನಡೆ ಸಾಧಿಸಿದ್ದಾರೆ. 2002ರಲ್ಲಿ ವಿಂಟರ್‌ತೂರ್‌ನ ಪ್ಯಾರಿಶ್ ಕೌನ್ಸಿಲ್‌ಗೆ (ಚರ್ಚ್‌ಗೆ ಸಂಬಂಧಿಸಿದ ಮಂಡಳಿ) ಆಯ್ಕೆಯಾದ ಅವರು ವಿಂಟರ್‌ತೂರ್ ನಗರ ಸಂಸ್ಥೆಗೆ 2010ರಲ್ಲಿ ಆಯ್ಕೆಯಾದರು. 2017ರಲ್ಲಿ ನ್ಯಾಶ ನಲ್ ಕೌನ್ಸಿಲ್ ಆಫ್ ಸ್ವಿಟ್ಸರ್‌ಲ್ಯಾಂಡ್‌ಗೆ ಪ್ರವೇಶ ಪಡೆದಿದ್ದಾರೆ. ವಿದೇಶಾಂಗ ವ್ಯವಹಾರ ಸಚಿವರಿಗೆ ಸಲಹೆ ನೀಡುವ ವಿದೇಶಾಂಗ ವ್ಯವಹಾರ ಮಂಡಳಿ ಸದಸ್ಯರಾಗಿ ನಿಕ್ ಗುಗ್ಗರ್ ಪಾತ್ರ ವಹಿಸುತ್ತಾರೆ. ಸ್ವಿಟ್ಸರ್‌ಲ್ಯಾಂಡ್‌ನಲ್ಲಿ ಏಳು ಕಾರ್ಯನಿರ್ವಾಹಕ ಸಚಿವರ ತಂಡ ಆಡಳಿತ ನಡೆಸುತ್ತದೆ. ಇವರಲ್ಲಿ ಒಬ್ಬರು ವರ್ಷಕ್ಕೆ ಒಬ್ಬರಂತೆ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ನಿಕ್ ಗುಗ್ಗರ್ ಪತ್ನಿ ಬಿಯಟ್ರಿಸ್ ಜೋಸಿ. ಈ ದಂಪತಿಗೆ ಇಬ್ಬರು ಪುತ್ರರು, ಒಬ್ಬಳು ಪುತ್ರಿ ಇದ್ದಾಳೆ. ಸದ್ಯವೇ ಭಾರತಕ್ಕೆ ನಿಕ್ ಗುಗ್ಗರ್
ನಿಕ್ ಗುಗ್ಗರ್ ಅವರು ಜ. 7 ರಂದು ಭಾರತಕ್ಕೆ ಆಗಮಿಸಲಿ ದ್ದಾರೆ. ಜ. 12ರ ವರೆಗೆ ಭಾರತ ಸರಕಾರದ ಅತಿಥಿಯಾಗಿ ಸಭೆ ಗಳಲ್ಲಿ ಪಾಲ್ಗೊಳ್ಳುವರು. ಭಾರತ ಮತ್ತು ಸ್ವಿಸ್ ದೇಶದ ನಡುವೆ ಒಪ್ಪಂದ ಏರ್ಪಟ್ಟು 70 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿ ವಾಲಯ ಏರ್ಪಡಿಸಿರುವ ಕಾರ್ಯ ಕ್ರಮವಿದು. ನಿಕ್ ಗುಗ್ಗರ್ ಅವರು ಇದುವರೆಗೆ ಆರು ಬಾರಿ ಭಾರತಕ್ಕೆ ಬಂದಿದ್ದಾರೆ. ಈ ಸಲ ಸಮಯಾ ಭಾವದ ಕಾರಣ ಉಡುಪಿಗೆ ಬರುತ್ತಿಲ್ಲ. ಈ ಬೇಸಗೆಯಲ್ಲಿ ಅವರು ಉಡುಪಿಗೆ ಬರುವ ಸಾಧ್ಯತೆ ಇದೆ. ಮಗನಿಗೆ ಉಡುಪಿ ಎಂದರೆ ಅಭಿಮಾನ
ನನ್ನ ಅಜ್ಜಿ ಟ್ರೂಡಿ ಕರ್ಕಡರು ಉಡುಪಿ ಬಾಸೆಲ್ ಮಿಶನರಿಯಲ್ಲಿ ಕಾರ್ಯನಿರ್ವಹಿಸಿದ್ದರು. ಇವರಿಗೂ ನಿಕ್ ಗುಗ್ಗರ್ ತಂದೆ-ತಾಯಿಗಳಿಗೂ ಸ್ನೇಹವಿತ್ತು. ನಾನು 1986ರಲ್ಲಿ ಸ್ವಿಟ್ಸರ್‌ಲ್ಯಾಂಡ್‌ಗೆ ಪಿಯುಸಿ, ಪದವಿ ಶಿಕ್ಷಣಾರ್ಥ ತೆರಳಿದ್ದೆ. 1988ರಲ್ಲಿ ನಿಕ್ ಗುಗ್ಗರ್ ತಂದೆ-ತಾಯಂದಿರ ಸಂಪರ್ಕ ಒದಗಿತು. ಅಂದಿನಿಂದಲೂ ನನಗೆ ನಿಕ್ ಗುಗ್ಗರ್ ಮನೆಯವರ ಸಂಪರ್ಕವಿದೆ, ನಾವು ಕುಟುಂಬ ಸ್ನೇಹಿತರು. ಐದಾರು ವರ್ಷಗಳ ಹಿಂದೆ ಉಡುಪಿಗೆ ಫ್ರಿಟ್ಸ್ ಗುಗ್ಗರ್ ಮತ್ತು ಎಲಿಜಬೆತ್ ಗುಗ್ಗರ್ ಬಂದಿದ್ದಾಗ ನಮ್ಮ ಉಡುಪಿ ಮನೆಯಲ್ಲಿದ್ದರು. ಆಗ ಅವರು “ನಿಕ್ ಗುಗ್ಗರ್‌ಗೆ ಭಾರತದ ಮೇಲೆ, ವಿಶೇಷವಾಗಿ ಉಡುಪಿಯ ಮೇಲೆ ಅಭಿಮಾನವಿದೆ’ ಎಂದು ಹೇಳಿದ್ದರು. ಉಡುಪಿಯಲ್ಲಿ ಜನಿಸಿದ ಮಗುವೊಂದು ಸ್ವಿಟ್ಸರ್‌ಲ್ಯಾಂಡ್ ಸಂಸತ್ತಿಗೆ ಪ್ರವೇಶ ಪಡೆದದ್ದು ನನಗೆ ಬಹಳ ಸಂತೋಷ ತಂದಿದೆ. ನಿಕ್ ಗುಗ್ಗರ್ 1980ರ ದಶಕದಲ್ಲಿ ಒಮ್ಮೆ ಉಡುಪಿ ಮಿಶನ್ ಆಸ್ಪತ್ರೆಗೆ ಬಂದು ತನ್ನ ಜನನದ ಬಗ್ಗೆ ವಿಚಾರಿಸಿದ್ದರಂತೆ.
– ಹೈಡಿ ಶಿರಿ
(ಹೈಡಿ ಶಿರಿ, ಉಡುಪಿ ಮಿಶನ್ ಕಂಪೌಂಡ್ ನಿವಾಸಿ. ನಿಕ್ ಗುಗ್ಗರ್ ಉಡುಪಿಯ ಸಂಪರ್ಕ ಉಳಿಸಿಕೊಳ್ಳಲು ಮುಖ್ಯ ಕಾರಣರು. ಹಿಂದೂಸ್ಥಾನ್ ಸಾಮಿಲ್ ಮಾಲಕರಾಗಿದ್ದ ದಿ| ಸುವಾರ್ತಪ್ಪ ಕರ್ಕಡ ಮತ್ತು ದಿ| ಟ್ರೂಡಿ ಕರ್ಕಡರ ಮೊಮ್ಮಗಳು) – ಮಟಪಾಡಿ ಕುಮಾರಸ್ವಾಮಿ