Advertisement

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

12:52 AM Apr 19, 2024 | Team Udayavani |

ಹೊಸದಿಲ್ಲಿ: ವಿಶ್ವದ ಖ್ಯಾತ ಆಹಾರೋತ್ಪನ್ನ ಕಂಪೆನಿ ನೆಸ್ಲೆ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಭಾರತದಲ್ಲಿ ವಿತರಿಸುವ ಶಿಶು ಆಹಾರವಾದ ಪ್ರತೀ ಸಿರಿಲ್ಯಾಕ್‌ ಪೊಟ್ಟಣದಲ್ಲಿ ಸಕ್ಕರೆ ಪ್ರಮಾಣವನ್ನು 3 ಗ್ರಾಮ್‌ನಷ್ಟು ಹೆಚ್ಚಿಸಿದೆ ಎಂದು “ಪಬ್ಲಿಕ್‌ ಐ’ ಸಂಸ್ಥೆಯ ವರ ದಿ ಆರೋಪಿಸಿದೆ. ಈ ಅಧ್ಯಯನ ವರದಿಯು ಕೇಂದ್ರ ಆರೋಗ್ಯ ಸಚಿವಾಲಯದ ಕೈಸೇರಿದೆ. ಈ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಲಾಗುವುದು ಎಂದು ಸಚಿವಾಲಯ ಹೇಳಿದೆ ಎಂದು ಮೂಲಗಳು ತಿಳಿಸಿವೆ.

Advertisement

ಆರೋಪವೇನು?
ಭಾರತದಲ್ಲಿ ಮಾರಾಟವಾಗುವ 15 ವಿಧದ ಸಿರಿಲ್ಯಾಕ್‌ಗಳಲ್ಲಿ ಸಕ್ಕರೆ ಪ್ರಮಾಣ 3 ಗ್ರಾಮ್‌ ಜಾಸ್ತಿಯಿದೆ. ಆದರೆ ಅಮೆರಿಕ, ಜರ್ಮನಿ, ಯೂರೋಪ್‌ಗ್ಳಲ್ಲಿ ಈ ಪರಿಸ್ಥಿತಿ ಇಲ್ಲ ಎಂದು ಆರೋಪಿಸಲಾಗಿದೆ. ಇದು ಅಪಾಯಕಾರಿ, ಮಕ್ಕಳನ್ನು ಸಕ್ಕರೆ ಚಟಕ್ಕೀಡು ಮಾಡುತ್ತದೆ, ಮುಂದೆ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ಕಳವಳ ವ್ಯಕ್ತ ಪಡಿಸಿದ್ದಾರೆ.

ಶೇ.30 ಸಕ್ಕರೆ ಪ್ರಮಾಣ ಕಡಿಮೆ: ನೆಸ್ಲೆ
ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೆಸ್ಲೆ ಇಂಡಿಯಾ ಲಿ.ಯ ವಕ್ತಾರರೊಬ್ಬರು, ಕಳೆದ ಐದು ವರ್ಷಗಳಲ್ಲಿ ನಮ್ಮ ಶಿಶು ಆಹಾರಗಳಲ್ಲಿ ಸಕ್ಕರೆ ಪ್ರಮಾಣವನ್ನು ಶೇ. 30ರಷ್ಟು ಕಡಿಮೆ ಮಾಡಲಾಗಿದೆ. ಇದರ ಪರಿಶೀಲನೆ ಮುಂದುವರಿಯುತ್ತದೆ, ಸಕ್ಕರೆ ಪ್ರಮಾಣವನ್ನು ತಗ್ಗಿಸಲು ಉತ್ಪನ್ನಗಳನ್ನು ಪರಿಷ್ಕರಿಸಲಾಗುತ್ತದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next