Advertisement

Road Mishap; ಪಿಕ್‌ ಅಪ್‌ಗೆ ಬೈಕ್‌ ಢಿಕ್ಕಿ: ಸವಾರನಿಗೆ ಗಂಭೀರ ಗಾಯ

09:31 PM Apr 08, 2024 | Team Udayavani |

ಮಂಗಳೂರು: ಪಿಕಪ್‌ ವಾಹನಕ್ಕೆ ಬೈಕ್‌ ಢಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡ ಘಟನೆ ಸೋಮವಾರ ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಬಳಿ ನಡೆದಿದೆ.

Advertisement

ಕೇರಳ ಮೂಲದವರಾಗಿದ್ದು ನಗರದಲ್ಲಿ ಎಂಬಿಎ ಓದುತ್ತಿದ್ದ ಮಹಮ್ಮದ್‌ ಹನೀಫ್‌ (21) ಗಾಯಗೊಂಡವರು. ಮಧ್ಯಾಹ್ನ ಕುಂಟಿಕಾನ ಕಡೆಯಿಂದ ಬಂದ ಪಿಕಪ್‌ ಕೆಪಿಟಿ ಕೆಳಭಾಗದ ಟರ್ನ್ನಲ್ಲಿ ಯೂಟರ್ನ್ ಆಗುತ್ತಿದ್ದಾಗ ಕೆಪಿಟಿ ಕಡೆಯಿಂದ ಕುಂಟಿಕಾನದತ್ತ ತೆರಳುತ್ತಿದ್ದ ಬೈಕ್‌ ಢಿಕ್ಕಿಯಾಗಿದೆ.

ಬೈಕ್‌ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ದೃಶ್ಯ ಸಿಸಿ ಟಿವಿ ಕೆಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next