Advertisement

ಗ್ರಾ ಉಡುಪಿ ಕ್ಷೇತ್ರ: ಬಿಜೆಪಿ ಪ್ರಣಾಳಿಕೆ ಬಿಡುಗಡೆ

07:05 AM May 06, 2018 | Team Udayavani |

ಉಡುಪಿ: ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುವುದು ಖಚಿತ. ಉಡುಪಿಯಲ್ಲಿ ಈ ಹಿಂದೆ ಬಿಜೆಪಿ ಆಡಳಿತವಿದ್ದಾಗ ಅನುಷ್ಠಾನಗೊಳಿಸಿರುವ ರೀತಿಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸ ಲಾಗುವುದು. ಮರುಳು, ಕುಡಿಯುವ ನೀರು ಸಮಸ್ಯೆ ಪರಿಹರಿಸಲಾಗುವುದು, ಬ್ರಹ್ಮಾವರ ತಾಲೂಕು ಘೋಷಣೆಯನ್ನು ಅನುಷ್ಠಾನಕ್ಕೆ ತರಲಾಗುವುದು, ಮೀನುಗಾರರ ಸಮಸ್ಯೆಗಳಿಗೂ ಮುಕ್ತಿ ದೊರೆಯುವಂತೆ ಮಾಡಲಾಗುವುದು ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಕೆ.ರಘುಪತಿ ಭಟ್‌ ಹೇಳಿದ್ದಾರೆ.

Advertisement

ಮೇ 5ರಂದು ಉಡುಪಿಯಲ್ಲಿ ಮಾಜಿ ಸಂಸದ, ಬಿಜೆಪಿ ಪ್ರಣಾಳಿಕಾ ರಾಜ್ಯ ಸಮಿತಿಯ ಸದಸ್ಯ ಜಯಪ್ರಕಾಶ್‌ ಹೆಗ್ಡೆ ಅವರು ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಣಾಳಿಕೆ ಬಿಡುಗಡೆಗೊಳಿಸಿದ ಅನಂತರ ಭಟ್‌ ಅವರು ಮಾತನಾಡಿದರು.ಸರಳೀಕೃತ ಮರಳುನೀತಿ ಮರಳುನೀತಿಯನ್ನು ಸರಕಾರ ಜಟಿಲಗೊಳಿಸಿದ್ದರಿಂದಲೇ ಮರಳು ಸಮಸ್ಯೆ ಉಂಟಾಗಿದೆ. ಇದನ್ನು ಸರಿಪಡಿಸಲು ಮರಳುನೀತಿ ಸರಳೀಕೃತಗೊಳಿಸಲಾಗು ವುದು. ನಾನ್‌ ಸಿಆರ್‌ಝೆಡ್‌ ಪ್ರದೇಶಕ್ಕೆ ಪ್ರತ್ಯೇಕ ಮರಳು ನೀತಿ ಜಾರಿಗೆ ತರಲಾಗು ವುದು. ಜನರಿಗೆ ಕಡಿಮೆ ಬೆಲೆಗೆ ಮರಳು ದೊರೆಯುವಂತೆ ಮಾಡಲಾಗುವುದು. ಸಿಆರ್‌ಝೆಡ್‌ ನಿಯಮ ಸರಳೀಕೃತ ಗೊಳಿಸಲಾಗುವುದು.

ಮೀನುಗಾರರಿಗೆ ಡೀಸೆಲ್‌
ಈ ಹಿಂದೆ ನಮ್ಮ ಸರಕಾರ ಇದ್ದಾಗ ಮೀನುಗಾರರಿಗೆ ವಿತರಣಾ ಕೇಂದ್ರ ದಲ್ಲಿಯೇ ಡೀಸೆಲ್‌ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿತ್ತು. ಆದರೆ ಈಗಿನ ಸರಕಾರ ಹೊಸ ಪದ್ಧತಿ ಜಾರಿಗೆ ತಂದು ಸಮಸ್ಯೆ ಸೃಷ್ಟಿಸಿದೆ. ಹಾಗಾಗಿ ಈ ಹಿಂದಿನ ಪದ್ಧತಿಯನ್ನೇ ಮತ್ತೆ ಜಾರಿಗೆ ತರಲಾಗುವುದು. ಮಲ್ಪೆ 3ನೇ ಹಂತದ ಬಂದರು ಅಭಿವೃದ್ಧಿ ನಮ್ಮ ಸರಕಾರದ ಅವಧಿಯಲ್ಲೇ ನಡೆದಿತ್ತು. ಮುಂದೆ ನಾಲ್ಕನೇ ಹಂತದ ಅಭಿವೃದ್ಧಿ ನಡೆಸಲಾಗುವುದು. ಮಲ್ಪೆಯಲ್ಲಿ ಮಹಿಳಾ ಒಣ ಮೀನುಗಾರರರು ಈಗ ಬಳಕೆ ಮಾಡುತ್ತಿರುವ ಜಾಗದಿಂದ ಅವರನ್ನು ಎಬ್ಬಿಸದೆ ಅವರ ಅನುಮತಿ ನವೀಕರಣ ಮಾಡಿಸಿಕೊಡಲಾಗುವುದು ಎಂದರು. 

ನೀರಾವರಿ, ಆರೋಗ್ಯ, ಕ್ರೀಡೆ 
ಸೀತಾನದಿಗೆ ಒಟ್ಟು 5 ಕಿಂಡಿ ಅಣೆಕಟ್ಟುಗಳನ್ನು ಇತರ ನದಿಗಳಿಗೂ ಅವಶ್ಯ ಇರುವಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಲಾಗುವುದು, ಕೆರೆಗಳ ಹೂಳೆತ್ತಿ ಅಭಿವೃದ್ಧಿಪಡಿಸಲಾಗುವುದು. ಜಿಲ್ಲಾಸ್ಪತ್ರೆ ಯನ್ನು ಮೇಲ್ದರ್ಜೆಗೇರಿಸಲಾಗುವುದು, ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ (200 ಬೆಡ್‌ಗಳು) ಜಿಲ್ಲಾ ಸರ್ಜನ್‌ ನೇತೃತ್ವದಲ್ಲಿ ಸರಕಾರಿ ನಿರ್ವಹಣೆಯೊಂದಿಗೆ ಸೂಪರ್‌ ಸ್ಪೆಷಾಲಿಟಿ ಸೌಲಭ್ಯಗಳೊಂದಿಗೆ ಸಂಪೂರ್ಣ ಉಚಿತ ಸೇವೆ, ಉಡುಪಿಗೆ ಇಎಸ್‌ಐ ಆಸ್ಪತ್ರೆ ಮಂಜೂರು ಮಾಡಲಾಗುವುದು. ಬೀಡಿನಗುಡ್ಡೆಯಲ್ಲಿ ಸುಸಜ್ಜಿತ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣ, ಜಿಲ್ಲಾ ರಂಗಮಂದಿರ ನಿರ್ಮಾ ಣಕ್ಕೆ ವಿಶೇಷ ಆದ್ಯತೆ, ಉದ್ಯೋಗ ಮೇಳದ ಮೂಲಕ ಉದ್ಯೋಗ ಕಲ್ಪಿಸಲಾಗುವುದು.

ನಗರದಲ್ಲಿ ಸೌಲಭ್ಯ
ನಗರಸಭೆಯನ್ನು ಭ್ರಷ್ಟಾಚಾರ ಮುಕ್ತ, ಜನಸ್ನೇಹಿಯನ್ನಾಗಿ ಮಾಡಲಾಗು ವುದು. ಉದ್ಯಮ ಪರವಾನಿಗೆ ಸರಳೀಕರಣ ಗೊಳಿಸಲಾಗುವುದು, ನಿವೇಶನ ರಹಿತ ಅರ್ಹ ಬಡವರಿಗೆ ವಸತಿ ಸಂಕೀರ್ಣ ನಿರ್ಮಿಸಿ ಸ್ವಂತ ವಸತಿ ಮಾಡಿಕೊಡಲಾಗುವುದು. ದಾರಿದೀಪಗಳ ನಿರ್ವಹಣೆಗೆ ಸರಳ ವಿಧಾನ ಅನುಸರಿಸಲಾಗುವುದು. ಕಸ ನಿರ್ವಹಣೆ ಚುರುಕುಗೊಳಿಸಲಾಗುವುದು. ಮಾಹಿತಿ ತಂತ್ರಜ್ಞಾನ ಕೇಂದ್ರ (ಹಬ್‌) ನಿರ್ಮಿಸಲಾಗುವುದು. ರೈಲ್ವೆ ಲೆವೆಲ್‌ ಕ್ರಾಸಿಂಗ್‌ಗಳಲ್ಲಿ ಮೇಲ್ಸೇತುವೆ  ನಿರ್ಮಾಣ, ಪ.ಜಾತಿ, ಪಂಗಡದವರ ಆರೋಗ್ಯ ವಿಮೆಯನ್ನು ಒಂದು ಲಕ್ಷಕ್ಕೆ ಹೆಚ್ಚಿಸಲಾಗುವುದು.
 
ಬಹ್ಮಾವರ ಪುರಸಭೆ ಮೇಲ್ದರ್ಜೆಗೆ 
ಬ್ರಹ್ಮಾವರ ಪುರಸಭೆಯನ್ನು ಮೇಲ್ದರ್ಜೆ ಗೇರಿಸಲಾಗುವುದು, ಮಿನಿ ವಿಧಾನಸೌಧ, ತಾಲೂಕು ಆಸ್ಪತ್ರೆ ಮತ್ತು ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಒತ್ತು ನೀಡಲಾಗು ವುದು. ಬ್ರಹ್ಮಾವರ ತಾಲೂಕು ಘೋಷಣೆ ಮಾತ್ರ ಆಗಿದೆ. ಯಾವುದೇ ಕಚೇರಿ, ಸೌಲಭ್ಯಗಳಾಗಿಲ್ಲ. ಇದೆಲ್ಲವನ್ನು ಒದಗಿಸಿಕೊಟ್ಟು ಪರಿಪೂರ್ಣವಾಗಿ ತಾಲೂಕು ಅನುಷ್ಠಾನಕ್ಕೆ ಬರುವಂತೆ ಮಾಡಲಾಗುವುದು.

Advertisement

ಸ್ಥಳೀಯರನ್ನೊಳಗೊಂಡ ಮಲ್ಪೆ ಅಭಿವೃದ್ಧಿ ಮಲ್ಪೆ ಅಭಿವೃದ್ಧಿ ಸಮಿತಿಯನ್ನು ಮಾರ್ಪಾಡು ಮಾಡಿ ಅದರ ಜವಾಬ್ದಾರಿಯನ್ನು ಖಾಸಗಿಯವರಿಂದ ಸ್ಥಳೀಯ ಭಜನಮಂಡಳಿಗಳನ್ನೊಳಗೊಂಡ ನಿರ್ವಹಣಾ ಸಮಿತಿಗೆ ವಹಿಸಿಕೊಡಲಾಗುವುದು ಬಿಜೆಪಿ ಪ್ರಣಾಳಿಕೆಯಲ್ಲಿವೆ. ಸಮಾರಂಭದಲ್ಲಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಬಿಜೆಪಿ ನಗರಾಧ್ಯಕ್ಷ ಪ್ರಭಾಕರ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ದಿನಕರ ಶೆಟ್ಟಿ ಹೆರ್ಗ, ಯಶ್‌ಪಾಲ್‌ ಸುವರ್ಣ, ಪ್ರವೀಣ್‌ ಶೆಟ್ಟಿ, ಮನೋಹರ ಕಲ್ಮಾಡಿ, ಶ್ಯಾಮಲಾ ಕುಂದರ್‌, ಮಹೇಶ್‌ ಠಾಕೂರ್‌ ಮೊದಲಾದವರು ಉಪಸ್ಥಿತರಿದ್ದರು. ರಾಘವೇಂದ್ರ ಕಿಣಿ ಕಾರ್ಯಕ್ರಮ  ನಿರ್ವಹಿಸಿದರು.

ರಸ್ತೆ, ನೀರು, ಭೂಸ್ವಾಧೀನ ಪ್ರಕ್ರಿಯೆ 
ಮಣಿಪಾಲ – ಅಂಬಾಗಿಲು ರಸ್ತೆ, ಹಳೆ ತಾಲೂಕು ಕಚೇರಿ- ಕೊರಂಗ್ರಪಾಡಿ ರಸ್ತೆ, ಬೀಡಿನಗುಡ್ಡೆ-ಅಲೆವೂರು ರಸ್ತೆ, ಬ್ರಹ್ಮಗಿರಿ-ಬನ್ನಂಜೆ ರಸ್ತೆ, ಬ್ರಹ್ಮಾವರ-ಕಳತ್ತೂರು ಸಂತೆಕಟ್ಟೆ ರಸ್ತೆ, ಮಣಿಪಾಲ ಅಲೆವೂರು-ಕೊರಂಗ್ರಪಾಡಿ ಉಡುಪಿ ರಿಂಗ್‌ ರೋಡ್‌ ಮೊದಲಾದವುಗಳನ್ನು ಚತುಷ್ಪಥ ರಸ್ತೆಗಳನ್ನಾಗಿ ಅಭಿವೃದ್ದಿ ಪಡಿಸಲಾಗುವುದು. 10 ಅಡಿ ಕಾರಿಡಾರ್‌ ನಿರ್ಮಿಸಿ ವಾರಾಹಿ ನೀರಾವರಿ ಯೋಜನೆಯನ್ನು ವೈಜ್ಞಾನಿಕ ರೀತಿಯಲ್ಲಿ ಅನುಷ್ಠಾನಗೊಳಿಸಿ, ವಾರಾಹಿಯಲ್ಲಿಯೇ ನೀರು ಶುದ್ದೀಕರಣ ಘಟಕ ಅಳವಡಿಸಿ ಪೈಪ್‌ಲೈನ್‌ ಹಾದು ಹೋಗುವ 14 ಗ್ರಾ.ಪಂ.ಗಳಿಗೂ ಶುದ್ಧ ನೀರು ಕೊಟ್ಟು ಉಡುಪಿಗೆ ನೀರು ವಿತರಿಸಲಾಗುವುದು. ಮಲ್ಪೆ-ಮಣಿಪಾಲ, ಪರ್ಕಳ 169ಎ ಹೆದ್ದಾರಿ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆ ಮೊದಲಾದವುಗಳನ್ನು ನಡೆಸಿ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು. ನೀಲಾವರ, ಉಪ್ಪೂರು, ಜೋಮು ಗ್ರಾಮಗಳ ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶೀಘ್ರ ಅನುಷ್ಠಾನ  ಪ್ರಣಾಳಿಕೆಯ ಮುಖ್ಯ ಅಂಶ. 

Advertisement

Udayavani is now on Telegram. Click here to join our channel and stay updated with the latest news.

Next