Advertisement
ಬೈಲೂರಿನ ಪ್ರಭಾವತಿ ಅವರು ಮೇ 9ರಂದು ಮಡಿಕೇರಿ, ಮೈಸೂರು ಕಡೆ ಹೋಗಿದ್ದರು. ಮೇ 11ರಂದು ಅವರು ಮೈಸೂರಿನಲ್ಲಿದ್ದಾಗ ಅವರ ತಂಗಿಯ ಮಗ ಅಭಿಷೇಕ್ ಕರೆ ಮಾಡಿ ಮನೆಯ ಮೇಲಿನ ಅಂತಸ್ತಿನ ಬಾಗಿಲಿನ ಚಿಲಕವನ್ನು ಹೊರಗಡೆಯಿಂದ ಮುರಿದು ಯಾರೋ ಒಳಗೆ ನುಗ್ಗಿರುವ ಬಗ್ಗೆ ತಿಳಿಸಿದ್ದರು. ಬಳಿಕ ಪ್ರಭಾವತಿ ಮನೆಗೆ ಬಂದು ಪರಿಶೀಲಿಸಿದಾಗ 1,74,200 ರೂ.ಮೌಲ್ಯದ ಚಿನ್ನಾಭರಣ ಹಾಗೂ 3,000 ರೂ. ಕಳವಾಗಿರುವುದು ತಿಳಿದು ಬಂತು. ಪ್ರಭಾವತಿ ನೀಡಿರುವ ದೂರಿನಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ: 76 ಬಡಗಬೆಟ್ಟು ಗ್ರಾಮದ ಬೈಲೂರಿನಲ್ಲಿರುವ ಶ್ರೀ ಧೂಮಾವತಿ ದೈವಸ್ಥಾನದ ಕಾಣಿಕೆ ಡಬ್ಬಿ ಒಡೆದು ಸಾವಿರಾರು ರೂ. ಕಳವು ಮಾಡಿದ ಬಗ್ಗೆ ದೂರು ದಾಖಲಾಗಿದೆ. ಗರ್ಭಗುಡಿಯ ಬಾಗಿಲಿನ ಚಿಲಕ ಒಡೆದು, ಒಳಗಿದ್ದ ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು 50,000 ರೂ. ಅನ್ನು ಕದ್ದು, ಡಬ್ಬಿಯನ್ನು ದೈವಸ್ಥಾನದ ಅಂಗಳದಲ್ಲಿರುವ ಬಾವಿಕಟ್ಟೆಯಲ್ಲಿ ಹಾಕಿದ್ದರು. ದೈವಸ್ಥಾನದ ಕಾರ್ಯದರ್ಶಿ ಅರುಣ್ ನೀಡಿದ ದೂರಿನ ಅನ್ವಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Articles
Advertisement