Advertisement

“Udupi ಆಟೋ ಎಕ್ಸ್‌ಪೋ-2023′ ಸಮಾರೋಪ

12:29 AM Dec 31, 2023 | Team Udayavani |

ಉಡುಪಿ: ಜಿಲ್ಲಾ ಆಟೋಮೊಬೈಲ್‌ ಡೀಲರ್ ಅಸೋಸಿಯೇಶನ್‌, ಉಡುಪಿ ಚೇಂಬರ್ ಆಫ್ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀಸ್‌ ಆಶ್ರಯದಲ್ಲಿ ಮಣಿಪಾಲ ಆಟೋ ಕ್ಲಬ್‌ ಸಹಕಾರದಲ್ಲಿ ಎಂಜಿಎಂ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಲಾದ “ಉಡುಪಿ ಆಟೋ ಎಕ್ಸ್‌ಪೋ-2023′ ಸಮಾರೋಪ ಶನಿವಾರ ಜರಗಿತು.

Advertisement

ಕಾಂಚನ್‌ ಹ್ಯುಂಡೈಯ ಎಂಡಿ ಪ್ರಸಾದರಾಜ್‌ ಕಾಂಚನ್‌ ಮಾತನಾಡಿ, ಜಿಲ್ಲೆ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವುದಕ್ಕೆ ಇಲ್ಲಿ ನಡೆದ ಆಟೋ ಎಕ್ಸ್‌ಪೋ ಸಾಕ್ಷಿಯಾಗಿದೆ.

ಮಹಾನಗರಗಳಲ್ಲಿ ನಡೆಯುತ್ತಿದ್ದ ಎಕ್ಸ್‌ಪೋ ಉಡುಪಿಗೂ ಬಂದಿದೆ. ಸುಮಾರು 15 ವರ್ಷಗಳ ಹಿಂದೆ ತಿಂಗಳಿಗೆ 300 ಕಾರು, 300ರಿಂದ 400 ಬೈಕ್‌ ಮಾರಾಟವಾಗುತ್ತಿದ್ದ ಜಿಲ್ಲೆಯಲ್ಲಿ ಪ್ರಸ್ತುತ ತಿಂಗಳಿಗೆ 1,000 ಕಾರು, 3,000 ಬೈಕ್‌ಗಳು ಮಾರಾಟವಾಗುತ್ತಿದೆ. ಹೀಗಾಗಿ ಜಿಲ್ಲೆ ಆರ್ಥಿಕವಾಗಿ ಸಾಕಷ್ಟು ಮುಂದುವರಿಯುತ್ತಿದೆ ಎಂದರು.

ಪ್ರಸಾದ್‌ ನೇತ್ರಾಲಯ ಸೂಪರ್‌ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಕೃಷ್ಣಪ್ರಸಾದ್‌ ಕೂಡ್ಲು ಅವರು, ವಾಹನ ಚಲಾಯಿಸುವ ಪ್ರತಿಯೊಬ್ಬರೂ ಕಣ್ಣಿನ ದೃಷ್ಟಿ ಚೆನ್ನಾಗಿದೆಯೇ ಎಂದು ಪರೀಕ್ಷೆ ನಡೆಸಿಕೊಂಡು ಸೂಕ್ತ ಚಿಕಿತ್ಸೆ ಪಡೆದು ಮುಂದುವರಿದಾಗ ಹೆಚ್ಚಿನ ಅಪಘಾತ, ಅವಘಡಗಳನ್ನು ತಡೆಯಬಹುದು ಎಂದರು.

ಶಾಸಕ ಗುರ್ಮೆ ಸುರೇಶ್‌ ಶೆಟ್ಟಿಯವರು ಲಕ್ಕಿಡ್ರಾ ವಿಜೇತರನ್ನು ಆಯ್ಕೆ ಮಾಡಿದರು. ಜಿಲ್ಲಾ ಆಟೋಮೊಬೈಲ್‌ ಡೀಲರ್ ಅಸೋಸಿಯೇಶನ್‌ ಕಾರ್ಯದರ್ಶಿ ಕಾಶಿನಾಥ್‌ ನಾಯಕ್‌ ಅಧ್ಯಕ್ಷತೆ ವಹಿಸಿದ್ದರು.

Advertisement

ನಗರಸಭೆ ಸದಸ್ಯೆ ಗೀತಾ ಶೇಟ್‌, ಯುಸಿಸಿಐ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ ನಾಯಕ್‌, ಡೆಂಟಾ ಕೇರ್‌ನ ಡಾ| ವಿಜಯೇಂದ್ರ ವಸಂತ್‌, ಮಣಿಪಾಲ ಆಟೋ ಕ್ಲಬ್‌ನ ಸ್ಥಾಪಕಾಧ್ಯಕ್ಷ ಡಾ| ನಿಶಾಂತ್‌ ಬಿ. ಭಟ್‌, ಅಧ್ಯಕ್ಷ ಡಾ| ಅಫ‌jಲ್‌ ಪಿ.ಎಂ. ಉಪಸ್ಥಿತರಿದ್ದರು.

ಎಕ್ಸ್‌ಪೋದಲ್ಲಿ ಭಾಗವಹಿಸಿದ ಎಲ್ಲ ವಾಹನಗಳ ಕಂಪೆನಿಗಳು ಮತ್ತು ಇತರ ಆಟೋಮೊಬೈಲ್‌ ಕ್ಷೇತ್ರದ ಉದ್ಯಮಗಳ ಮುಖ್ಯಸ್ಥರು/ಪ್ರತಿನಿಧಿಗಳನ್ನು ಅಭಿನಂದಿಸಲಾಯಿತು. ಯುಸಿಸಿಐ ಕಾರ್ಯದರ್ಶಿ ಲಕ್ಷ್ಮೀಕಾಂತ ಬೆಸ್ಕೂರ್‌ ಸ್ವಾಗತಿಸಿದರು. ಪ್ರಶಾಂತ ಶೆಟ್ಟಿ ಹಾವಂಜೆ ನಿರೂಪಿಸಿ, ಸತೀಶ್‌ ಎಂ. ಭಟ್‌ ವಂದಿಸಿದರು.

“ಉಡುಪಿ ರತ್ನ ಪ್ರಶಸ್ತಿ’ ಪ್ರದಾನ
ಕಿದಿಯೂರು ಹೊಟೇಲ್ಸ್‌ ಪ್ರೈ.ಲಿ.ನ ಎಂಡಿ ಭುವನೇಂದ್ರ ಕಿದಿಯೂರು, ಎಂಜಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಮಲ್ಪೆ ಲಕ್ಷಿ ¾àನಾರಾಯಣ ಸಾಮಗ, ಬ್ರಹ್ಮಾವರ ಜಿಎಂ ವಿದ್ಯಾನಿಕೇತನ ವಿದ್ಯಾಸಂಸ್ಥೆಯ ಚೆಯರ್‌ಮನ್‌ ಪ್ರಕಾಶ್ಚಂದ್ರ ಶೆಟ್ಟಿ, ಡಾ| ಕೃಷ್ಣಪ್ರಸಾದ್‌ ಕೂಡ್ಲು, ಶಿಕ್ಷಣ ತಜ್ಞ ಡಾ| ಅನಂತಪದ್ಮನಾಭ ಆಚಾರ್‌, ಉದ್ಯಮಿ ಪ್ರಸಾದರಾಜ್‌ ಕಾಂಚನ್‌ ಅವರನ್ನು “ಉಡುಪಿ ರತ್ನ ಪ್ರಶಸ್ತಿ’ ಪ್ರದಾನ ಮಾಡಿ ಸಮ್ಮಾನಿಸಲಾಯಿತು.

ಲಕ್ಕಿ ಡ್ರಾ ಬಹುಮಾನ
ಆಟೋ ಎಕ್ಸ್‌ಪೋ-2023 ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ನೀಡಲಾಗಿದ್ದ ಕೂಪನ್‌ನ ಲಕ್ಕಿ ಡ್ರಾ ಫ‌ಲಿತಾಂಶ ನಡೆಸಲಾಯಿತು. ಪ್ರಥಮ-ದೇವದಾಸ ಎಂ. ಶೆಟ್ಟಿ ಕುಂಜಿಬೆಟ್ಟು (5 ಗ್ರಾಂ), ದ್ವಿತೀಯ-ಅಭಿಮನ್ಯು ರೈ ಉಡುಪಿ (3 ಗ್ರಾಂ), ತೃತೀಯ-ಕೆ.ಕೆ. ಪೂಜಾರಿ ಪರ್ಕಳ (1 ಗ್ರಾಂ) ಚಿನ್ನದ ನಾಣ್ಯವನ್ನು ವಿಜೇತರಿಗೆ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next