Advertisement
15 ಗುರ್ಜಿಗಳನ್ನು ರಥಬೀದಿಯಲ್ಲಿ ನೆಡಲಾಗುತ್ತದೆ. ಇದರಲ್ಲಿ ಎರಡು ಮಂಟಪ ಮತ್ತು ಏಳು ಗುರ್ಜಿಗಳು ಕೃಷ್ಣಮಠಕ್ಕೆ ಸಂಬಂಧಿಸಿದವು.
Related Articles
Advertisement
ನಗರದಲ್ಲಿ ಹುಲಿ ವೇಷ ತಂಡಗಳು ಅಷ್ಟಮಿಗೆ ಹುಲಿ ಕುಣಿತ ಪ್ರದರ್ಶಿಸಲು ಸಜ್ಜುಗೊಳ್ಳುತ್ತಿವೆ. ನಗರ, ಗ್ರಾಮಾಂತರ ಭಾಗದ ಖ್ಯಾತ ಹುಲಿವೇಷಧಾರಿಗಳ ತಂಡದ ಪೋಸ್ಟರ್‌ಗಳು ರಾರಾಜಿಸುತ್ತಿವೆ. ವಿವಿಧ ಸಂಘ, ಸಂಸ್ಥೆಗಳು ಕೃಷ್ಣ ವೇಷ ಸ್ಪರ್ಧೆ ಮತ್ತು ಹುಲಿ ಕುಣಿತ ಸ್ಪರ್ಧೆ ಆಯೋಜಿಸಲು ತಯಾರಿ ನಡೆಸಿವೆ.
ಭಕ್ತರು, ಪ್ರವಾಸಿಗರು
ಶ್ರೀಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿ ಉತ್ಸವ ಕಣ್ತುಂಬಿಕೊಳ್ಳಲು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಆಗಮಿಸುವ ಸಾಧ್ಯತೆ ಇದೆ. 4ನೇ ಶನಿವಾರ, ರವಿವಾರ ರಜೆ ಇರುವುದರಿಂದ ಮತ್ತು ಆ. 26, 27 ಹೆಚ್ಚುವರಿ ರಜೆ ಇದ್ದಲ್ಲಿ ಸ್ಥಳೀಯರು ಸಹಿತ, ಹೊರ ಜಿಲ್ಲೆ, ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆ ಇದೆ. ಈಗಾಗಲೇ ಬಹುತೇಕ ಹೊಟೇಲ್, ಛತ್ರ, ಲಾಡ್ಜ್ಗಳಲ್ಲಿ ದೂರದ ಊರಿನ ಭಕ್ತರು ಕೊಠಡಿಗಳನ್ನು ಕಾದಿರಿಸಿದ್ದಾರೆ.
ನಗದು ಬಹುಮಾನ
ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಮುದ್ದುಕೃಷ್ಣ, ರಂಗೋಲಿ, ಚಿತ್ರಕಲೆ ಸಹಿತ ಮೊದಲಾದ ಸ್ಪರ್ಧೆಗಳನ್ನು ಕೃಷ್ಣಮಠದಲ್ಲಿ ಆಯೋಜಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಪರ್ಯಾಯ ಮಠದ ವತಿಯಿಂದ ನಗದು ಬಹುಮಾನವನ್ನು ಪೌರಾಣಿಕ, ಹುಲಿವೇಷ, ಜಾನಪದ ನೃತ್ಯಗಳಿಗೆ ಕೊಡಲಾಗುತ್ತಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಾಸೋತ್ಸವದ ನಿಮಿತ್ತ ಆ. 1ರಿಂದಲೇ ವಿವಿಧ ಕಾರ್ಯಕ್ರಮ, ಸ್ಪರ್ಧೆ ಇತ್ಯಾದಿ ಆರಂಭಗೊಂಡಿದೆ.