Advertisement
ಭಂಡಾರಕೇರಿ ಮಠದಲ್ಲಿ ಮಂಗಳವಾರ ಜರಗಿದ ಭಾಗವತ ನೀರಾ ಜನೋತ್ಸವ ಹಾಗೂ ಶ್ರೀ ವಿದ್ಯೇಶತೀರ್ಥ ಶ್ರೀಪಾದರ 45ನೇ ಚಾತುರ್ಮಾಸ ಸಮಾರೋಪ ಸಮಾರಂಭದಲ್ಲಿ ಪುತ್ತಿಗೆ ಶ್ರೀಗಳು ಆಶೀರ್ವಚನ ನೀಡಿದರು. ಶ್ರೀವಿದ್ಯೇಶತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, 1,008 ಮನೆ ಗಳಿಗೆ ಭಾಗವತ ತಲುಪಿಸುವ ಗುರಿ ಹೊಂದಿದ್ದು, ಈ ವರ್ಷದ ಅಂತ್ಯದೊಳಗೆ ಗುರಿ ತಲುಪುವ ಪ್ರಯತ್ನ ನಡೆದಿದೆ. ಆಧ್ಯಾತ್ಮಿಕವಾಗಿ ಸಮಾಜಮುಖೀ ಸೇವೆಗಳು ಹೆಚ್ಚೆಚ್ಚು ನಡೆಯಬೇಕು ಎಂದರು.
70ನೆಯ ಸಂವತ್ಸರದ ಅಂಗವಾಗಿ ಶ್ರೀವಿದ್ಯೇಶತೀರ್ಥ ಶ್ರೀಪಾದರು ಪರ್ಯಾಯ ಪುತ್ತಿಗೆ ಶ್ರೀಪಾದರ ಮಹತ್ವಾಕಾಂಕ್ಷೆಯ ಸ್ವರ್ಣ ಪಾರ್ಥಸಾರಥಿ ರಥ ನಿರ್ಮಾಣಕ್ಕೆ 70 ಚಿನ್ನದ ನಾಣ್ಯಗಳನ್ನು ಸಮರ್ಪಿಸಿದರು. ಒಟ್ಟು 418 ಮನೆಗಳಲ್ಲಿ ನಡೆದ ಭಾಗವತ ನೀರಾಜನ ಸಮರ್ಪಣೆ ದ್ಯೋತಕವಾಗಿ ಚಾತುರ್ಮಾಸ ವ್ರತ ಸಮಿತಿಯಿಂದ ಭಂಡಾರಕೇರಿ ಶ್ರೀಗಳಿಗೆ ನಡೆದ ನಾಣ್ಯ ತುಲಾಭಾರದಲ್ಲಿ 15 ಗ್ರಾಂ ಚಿನ್ನ, 418 ಗ್ರಾಂ ಬೆಳ್ಳಿಯನ್ನು ಸಮರ್ಪಿಸಲಾಯಿತು.