Advertisement

Udupi: ಅ.24-26:ಪ್ರಾಚ್ಯವಿದ್ಯಾಸಮ್ಮೇಳನದಲ್ಲಿ ವಿಶ್ವವಿದ್ಯಾನಿಲಯ ಕುಲಪತಿಗಳ ಸಮಾಗಮ

01:07 AM Oct 22, 2024 | Team Udayavani |

ಉಡುಪಿ: ಶ್ರೀ ಕೃಷ್ಣಮಠ ಶ್ರೀ ಪರ್ಯಾಯ ಪುತ್ತಿಗೆ ಮಠದ ಸಹಯೋಗದಲ್ಲಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ಭಾರತೀಯ ವಿದ್ವತ್‌ ಪರಿಷತ್‌ ಆಶ್ರಯದಲ್ಲಿ ಅ.24ರಿಂದ 26ರ ವರೆಗೆ ನಡೆಯಲಿರುವ 51ನೇ ಅಖೀಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ದೇಶದ ವಿಶ್ವವಿದ್ಯಾನಿಲಯಗಳ ಕುಲಪತಿಗಳ ಸಮ್ಮೇಳನವೂ ನಡೆಯಲಿದೆ.

Advertisement

ಹೊಸದಿಲ್ಲಿ ಕೇಂದ್ರೀಯ ಸಂಸ್ಕೃತ ವಿವಿಯ ಕುಲಪತಿ ಪ್ರೊ| ಶ್ರೀನಿವಾಸ ವರಖೇಡಿ ಅವರ ಅಧ್ಯಕ್ಷತೆಯಲ್ಲಿ ಈ ಸಮ್ಮೇಳನ ಕೃಷ್ಣಮಠದ ಪರಿಸರದಲ್ಲಿ ಸಂಪನ್ನಗೊಳ್ಳಲಿದೆ. ಕರ್ನಾಟಕ ಸಂಸ್ಕೃತ ವಿ.ವಿ.ಯ ಕುಲಪತಿ ಡಾ| ಅಹಲ್ಯಾ ಎಸ್‌., ಉಜ್ಜಿನಿ ಮಹರ್ಷಿ ಪಾಣಿನಿ ಸಂಸ್ಕೃತಿ ವಿ.ವಿ. ಕುಲಪತಿ ಪ್ರೊ| ವಿಜಯ ಕುಮಾರ್‌ ಸಿ.ಜಿ., ತಿರುಪತಿ ನ್ಯಾಷನಲ್‌ ಸಂಸ್ಕೃತ ವಿ.ವಿ. ಕುಲಪತಿ ಪ್ರೊ| ಕೃಷ್ಣಮೂರ್ತಿ ಜಿ.ಎಸ್‌.ಆರ್‌., ದರ್ಬಾಂಗ್‌ ಕಾಮೇಶ್ವರ ಸಿಂಗ್‌ ಸಂಸ್ಕೃತ ವಿ.ವಿ. ಕುಲಪತಿ ಪ್ರೊ| ಲಕ್ಷ್ಮೀ ನಿವಾಸ್‌ ಪಾಂಡೆ, ಕಾಲಡಿಯ ಶ್ರೀ ಶಂಕರಾಚಾರ್ಯ ವಿ.ವಿ.ಯ ಕುಲಪತಿ ಪ್ರೊ| ಕೆ.ಕೆ. ಗೀತಾಕುಮಾರಿ, ರಾಮ್‌ಠೇಕ್‌ನ ಕವಿಕುಲ ಗುರು ಕಾಳಿದಾಸ ಸಂಸ್ಕೃತ ವಿ.ವಿ.ಕುಲಪತಿ ಪ್ರೊ| ಹರೇರಾಮ್‌ ತ್ರಿಪಾಠಿ, ಉತ್ತರಾ ಖಂಡ್‌ ಸಾಂಸ್ಕೃತ ವಿವಿ ಕುಲಪತಿ ಪ್ರೊ| ದಿನೇಶ್‌ ಚಂದ್ರಶಾಸ್ತ್ರಿ , ಶ್ರೀ ಸೋಮನಾಥ ಸಂಸ್ಕೃತ ವಿ.ವಿ. ಕುಲಪತಿ ಪ್ರೊ| ಸುಕಾಂತ್‌ ಕುಮಾರ್‌ ಸೇನಾಪತಿ, ತಿರುಪತಿ ಶ್ರೀ ವೆಂಕಟೇಶ್ವರ ವೈದಿಕ ವಿ.ವಿ. ಕುಲಪತಿ ಪ್ರೊ| ರಾಣಿ ಸದಾಶಿವ ಮೂರ್ತಿ, ಅಸ್ಸಾಂನ ಕುಮಾರ್‌ ಭಾಸ್ಕರವರ್ಮ ಸಂಸ್ಕೃತಿ ಆ್ಯಂಡ್‌ ಏಂಶಿಯಂಟ್‌ ಸ್ಟಡೀಸ್‌ ವಿ.ವಿ. ಕುಲಪತಿ ಪ್ರೊ| ಪ್ರಹ್ಲಾದ್‌ ಆರ್‌. ಜೋಷಿ, ಮಹರ್ಷಿ ವಾಲ್ಮೀಕಿ ಸಂಸ್ಕೃತ ವಿ.ವಿ. ಕುಲಪತಿ ಪ್ರೊ| ರಮೇಶ್ಚಂದ್ರ ಭಾರದ್ವಾಜ್‌ ಹಾಗೂ ಸಂಪೂರ್ಣಾನಂದ ಸಂಸ್ಕೃತ ವಿವಿ ಕುಲಪತಿ ಪ್ರೊ| ಬಿಹಾರಿ ಲಾಲ್‌ಶರ್ಮ ಸಹಿತವಾಗಿ ವಿಶ್ರಾಂತ ಕುಲಪತಿಗಳು ಪಾಲ್ಗೊಳ್ಳ ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next