Advertisement

Udupi: ಕೃಷಿ ಪಂಪ್‌ಸೆಟ್‌ಗೆ ಶೇ.99 ಆಧಾರ್‌ ಜೋಡಣೆ

01:10 AM Sep 25, 2024 | Team Udayavani |

ಉಡುಪಿ: ಕೃಷಿ ಪಂಪ್‌ಸೆಟ್‌ ಸಂಬಂಧಿಸಿ ರಾಜ್ಯ ಸರಕಾರ ಪ್ರತೀ ವರ್ಷ ವಿದ್ಯುತ್‌ ಕಂಪೆನಿಗಳಿಗೆ ನೀಡುತ್ತಿರುವ ವಿದ್ಯುತ್‌ ಸಹಾಯಧನ ಮತ್ತು ವಿದ್ಯುತ್‌ ಬಳಕೆಗೂ ಹೋಲಿಕೆ ಆಗುತ್ತಿದೇಯೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಮತ್ತು ಅಕ್ರಮ ಪಂಪ್‌ಸೆಟ್‌ಗಳಿಗೆ ಕಡಿವಾಣ ಹಾಕಲು ಪಂಪ್‌ಸೆಟ್‌ಗಳ ಆರ್‌.ಆರ್‌. ನಂಬರ್‌ಗಳಿಗೆ ಆಧಾರ್‌ ಲಿಂಕ್‌ ಯೋಜನೆ ರೂಪಿಸಿತ್ತು. ಆರಂಭದಲ್ಲಿ ಕೆಲವು ಕೃಷಿಕರ ಆಕ್ಷೇಪವಿದ್ದರೂ ಜಿಲ್ಲೆಯಲ್ಲಿ ಶೇ. 99ರಷ್ಟು ಆಧಾರ್‌ ಲಿಂಕ್‌ ಪೂರ್ಣಗೊಂಡಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ಒಟ್ಟು 86,716 ಪಂಪ್‌ಸೆಟ್‌ಗಳಲ್ಲಿ 85,864 ಪಂಪ್‌ಸೆಟ್‌ಗಳಿಗೆ ಆಧಾರ್‌ ಜೋಡಣೆಯಾಗಿದೆ. ಇನ್ನೂ 852 ಪಂಪ್‌ಸೆಟ್‌ಗಳು ಬಾಕಿ ಇದೆ. ಸರಕಾರ ಸೆ. 23 ಕೊನೆಯ ದಿನವೆಂದು ತಿಳಿಸಿದ್ದು, ಜಿಲ್ಲೆಯಲ್ಲಿ ನೋಂದಣಿ ಪ್ರಕ್ರಿಯೆ ಕೊನೆಗೊಂಡಿಲ್ಲ ಪ್ರಸ್ತುತ ಆಧಾರ್‌ ಜೋಡಣೆ ಪ್ರಕ್ರಿಯೆ ಸ್ವೀಕರಿಸಲಾಗುತ್ತಿದೆ. ಉಡುಪಿ ಶೇ. 97, ಕುಂದಾಪುರ, ಕಾರ್ಕಳ ಶೇ. 99 ಪ್ರಗತಿಯಾಗಿದೆ ಎಂದು ಮೆಸ್ಕಾಂ ಅಧೀಕ್ಷಕ ಎಂಜಿನಿಯರ್‌ ದಿನೇಶ್‌ ಉಪಾಧ್ಯ ತಿಳಿಸಿದ್ದಾರೆ.

ಆರಂಭದಲ್ಲಿ ಆಧಾರ್‌ ಲಿಂಕ್‌ ಮಾಡಲು ಶುಲ್ಕ, ಠೇವಣಿ, ಹಳೆ ಬಾಕಿ ವಸೂಲಿ ಸಹಿತ ಮೊದಲಾದ ಕಾರಣಗಳಿಂದ ಜಿಲ್ಲೆಯಲ್ಲಿ ಹೆಚ್ಚಿನ ಕೃಷಿಕರು ಆದಾರ್‌ ಲಿಂಕ್‌ಗೆ ವಿರೋಧ ವ್ಯಕ್ತಪಡಿಸಿದ್ದರು.

ಪ್ರಸ್ತುತ ಶುಲ್ಕ, ಠೇವಣಿ ಇಲ್ಲದೆ ಆಧಾರ್‌ ಜೋಡಣೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಯೋಜನೆ ಉದ್ದೇಶ ಒಳ್ಳೆಯದೇ ಆಗಿದ್ದರೂ ಈ ಪ್ರಕ್ರಿಯೆ ಇನ್ನಷ್ಟು ಸರಳಗೊಳಿಸಬೇಕು. ಹೆಚ್ಚಿನ ರೈತರು ಜೋಡಣೆಗೆ ಮುಂದಾಗಿಲ್ಲ. ಈ ಬಗ್ಗೆ ಜಿಲ್ಲಾ ಕೃಷಿಕ ಸಂಘ ಶೀಘ್ರ ಚರ್ಚೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ ಕೃಷಿಕ ಸಂಘದ ರಾಮಕೃಷ್ಣ ಶರ್ಮ ಬಂಟಕಲ್ಲು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next