Advertisement

ಉಡುಪಿ: ಗುರುವಾರ 300 ಕೋವಿಡ್ ಸೋಂಕು ದೃಢ

01:41 AM Sep 18, 2020 | mahesh |

ಉಡುಪಿ: ಸರಕಾರಿ ವೈದ್ಯಾಧಿಕಾರಿಗಳು ಮುಷ್ಕರ ನಿರತರಾದ ಕಾರಣ ಸ್ಪಷ್ಟ ಅಂಕಿ-ಅಂಶಗಳು ಗುರುವಾರವೂ ಬಿಡುಗಡೆಗೊಂಡಿಲ್ಲ. ಆದರೆ ಮೂಲಗಳ ಪ್ರಕಾರ ಸೆ. 15ರಿಂದ 17ರ ವರೆಗೆ ಒಟ್ಟು ಸುಮಾರು 300 ಪಾಸಿಟಿವ್‌ ಪ್ರಕರಣಗಳಿವೆ.

Advertisement

ಕುರ್ಲೊಟ್ಟು: 31 ಪಾಸಿಟಿವ್‌ ಪ್ರಕರಣ
ವೇಣೂರು: ಹೊಸಂಗಡಿ ಗ್ರಾ.ಪಂ. ವ್ಯಾಪ್ತಿಯ ಕುರ್ಲೊಟ್ಟು ವ್ಯಾಪ್ತಿಯಲ್ಲಿ ಒಂದೇ ದಿನ 31 ಮಂದಿಗೆ ಕೊರೊನಾ ಪಾಸಿಟಿವ್‌ ಪತ್ತೆಯಾಗಿದೆ. ಜ್ವರ ಕಾಣಿಸಿಕೊಂಡಿದ್ದ ಮಹಿಳೆ ಮತ್ತು ಒಬ್ಬ ಪುರುಷ ಆಸ್ಪತ್ರೆ ಯಲ್ಲಿ ಮೃತಪಟ್ಟಿದ್ದು, ಅವರಿಗೆ ಕೊರೊನಾ ಪಾಸಿಟಿವ್‌ ಪತ್ತೆಯಾಗಿತ್ತು. ಇದರಿಂದ ಭಯಗೊಂಡ ಜನ ಸ್ವ ಇಚ್ಛೆಯಿಂದ ಸಾಮೂಹಿಕವಾಗಿ ಕೊರೊನಾ ಪರೀಕ್ಷೆಯನ್ನು ಮಾಡಿಸಿದ್ದು, ಮಹಿಳೆ, ಪುರುಷ ಹಾಗೂ ಮಕ್ಕಳು ಸೇರಿದಂತೆ ಈ ಪ್ರದೇಶದ 31 ಮಂದಿಗೆ ಕೋವಿಡ್ ಪಾಸಿಟಿವ್‌ ಪತ್ತೆಯಾಗಿದೆ.

ಅವರಲ್ಲಿ ಹೆಚ್ಚಿನವರಿಗೆ ಜ್ವರ ಕಾಣಿಸಿಕೊಂ ಡಿದೆ. ಬೆಳ್ತಂಗಡಿ ತಾಲೂಕು ವೈದ್ಯಾಧಿಕಾರಿಗಳು ಹಾಗೂ ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬಂದಿ ಭೇಟಿ ನೀಡಿ ಸೂಕ್ತ ಮಾರ್ಗ ದರ್ಶನ ನೀಡಿದ್ದಾರೆ. ಪ್ರತೀ ದಿನ ಮನೆಗಳಿಗೆ ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಿದ್ದಾರೆ.

ಮೂಡುಬಿದಿರೆ ಶಾಸಕರಿಗೆ ಪಾಸಿಟಿವ್‌
ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌ ಅವರು ಕೊರೊನಾ ಬಾಧಿತರಾಗಿ ದ್ದಾರೆ. ಇದನ್ನು ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next