Advertisement
ಉಡುಪಿ ಸಮೀಪದ ಮಣಿಪುರ ನಿವಾಸಿಯಾದ ಇವರು ಮಾ. 17ರಂದು ದುಬಾೖಯಿಂದ ಮರಳಿದ್ದರು. ಮಾ. 27ರಂದು ಕಾರ್ಕಳ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಮಾ. 29ರಂದು ಇವರಿಗೆ ಕೊರೊನಾ ವೈರಸ್ ಇರುವುದು ಪತ್ತೆಯಾಗಿತ್ತು. ಬಳಿಕ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ, ಎ. 1ರಂದು ಉಡುಪಿ ಡಾ| ಟಿಎಂಎ ಪೈ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ದುಬಾೖಯಿಂದ ಬಂದ ಬಳಿಕ 10 ದಿನಗಳ ಕಾಲ ವಿವಿಧ ಕಡೆ ಸಂಚರಿಸಿದ ಪರಿಣಾಮ ಸುಮಾರು 200 ಜನರ ಸಂಪರ್ಕಕ್ಕೆ ಒಳಗಾಗಿದ್ದರು. ಇವ ರೆಲ್ಲರಿಗೂ ಆಸ್ಪತ್ರೆ ಕ್ವಾರಂಟೈನ್ ಮೂಲಕ ನಿಗಾ ವಹಿಸಿದ್ದು, ಎಲ್ಲರ ಗಂಟಲು ದ್ರವದ ಮಾದರಿ ನೆಗೆಟಿವ್ ಬಂದಿದೆ. ಇವರಿಗೆ ಮನೆಯಲ್ಲಿ ನಿಗಾ ವಹಿಸಲು ಸೂಚಿಸಲಾಗಿದೆ.
14 ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಹೊಸ ಪ್ರಕರಣಗಳು ದಾಖಲಾಗಿಲ್ಲ. 17 ಮಂದಿ ಐಸೊಲೇಶನ್
ಮಂಗಳವಾರ 8 ಮಂದಿ ಪುರುಷರಿಗೆ ಮತ್ತು ಇಬ್ಬರು ಮಹಿಳೆಯರಿಗೆ ತೀವ್ರ ಉಸಿರಾಟದ ಸಮಸ್ಯೆ ಆಗಿದ್ದು, 6 ಮಂದಿ ಪುರುಷರು ಮತ್ತು ಓರ್ವ ಮಹಿಳೆಗೆ ಕೊರೊನಾ ಶಂಕೆ ವ್ಯಕ್ತವಾಗಿದ್ದು, ಒಟ್ಟು 17 ಮಂದಿಯನ್ನು ಐಸೊಲೇಶನ್ ವಾರ್ಡ್‌ಗೆ ದಾಖಲು ಮಾಡಲಾಗಿದೆ. ಪ್ರಸಕ್ತ 38 ಮಂದಿ ಐಸೊಲೇಶನ್ ವಾರ್ಡ್‌ನಲ್ಲಿದ್ದಾರೆ. ಮಂಗಳವಾರ 8 ಸಹಿತ ಈವರೆಗೆ 194 ಮಂದಿ ಐಸೊಲೇಶನ್ ವಾರ್ಡ್‌ನಿಂದ ಬಿಡುಗಡೆಯಾಗಿದ್ದಾರೆ.
Related Articles
Advertisement
ಮಂಗಳವಾರ 11 ಜನರು ಹೆಸರು ನೋಂದಾಯಿಸಿದ್ದಾರೆ. 105 ಮಂದಿ 28 ದಿನಗಳ, 23 ಮಂದಿ 14 ದಿನಗಳ ನಿಗಾ ಮುಗಿಸಿದ್ದಾರೆ. ಪ್ರಸ್ತುತ 101 ಜನರು ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ. ಮಂಗಳವಾರ 9 ಮಂದಿ ಆಸ್ಪತ್ರೆ ಕ್ವಾರಂಟೈನ್‌ಗೆ ದಾಖಲಾಗಿದ್ದು, 19 ಮಂದಿ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ 27 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ.
ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿಹೊರ ಜಿಲ್ಲೆ ಮತ್ತು ರಾಜ್ಯಗಳಿಗೆ ಹೋಗಲು ಅನುಮತಿ ಪಡೆಯುವ ಸಲುವಾಗಿ ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿಗೆ ಬರುವ ಬದಲು ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ತುರ್ತು ಚಿಕಿತ್ಸೆ, ಅಗತ್ಯ ಸೇವೆ ಇತ್ಯಾದಿಗಳಿಗೆ ಅಗತ್ಯ ದಾಖಲೆಗಳೊಂದಿಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 12ರ ವರೆಗೆ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.