ಉಡುಪಿ: ಮುಂಬಯಿಯಿಂದ ತಿರುವನಂತಪುರಕ್ಕೆ ಹೋಗುತ್ತಿದ್ದ ನೇತ್ರಾವತಿ ಎಕ್‌ಪ್ರಸ್ ರೈಲಿನಲ್ಲಿ ಪ್ರಯಾಣಿಕನೊಬ್ಬ ಸಾಗಿಸುತ್ತಿದ್ದ 24,99,500 ರೂ. ಹಣ ವನ್ನು ರೈಲ್ವೇ ರಕ್ಷಣಾ ದಳ ಪೊಲೀಸರು ಪತ್ತೆಹಚ್ಚಿದ್ದಾರೆ.
ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಭಟ್ಕಳ ನಿವಾಸಿ ಫಹಾದ್ ಬಂಧಿತ ಆರೋಪಿ. ಸೋಮವಾರ ಮುಂಜಾನೆ ಕರ್ತವ್ಯದಲ್ಲಿದ್ದ ಆರ್‌ಎಎಫ್ಒ ಎಎಸ್‌ಐ ಯು.ಡಿ. ಸುಧೀರ್ ಶೆಟ್ಟಿ ಜನರಲ್ ಕೋಚ್ ತಪಾಸಣೆ ಮಾಡುತ್ತಿದ್ದಾಗ ಹಣ ಪತ್ತೆಯಾಯಿತು.
ಇಂದ್ರಾಳಿ ನಿಲ್ದಾಣಕ್ಕೆ ರೈಲು ತಲುಪಿದ ಬಳಿಕ ಚುನಾವಣ ನೀತಿಸಂಹಿತೆ ಹಿನ್ನೆಲೆಯಲ್ಲಿ ಚುನಾವಣ ಕೋಶಕ್ಕೆ ಮಾಹಿತಿ ನೀಡಲಾಯಿತು. ಫ್ಲೈಯಿಂಗ್ ಸ್ಕ್ವಾಡ್ ಎಫ್‌ಎಸ್ಟಿ ಮತ್ತು ಐಟಿ ಇಲಾಖೆ ಸಹಾಯಕ ನಿರ್ದೇಶಕರು ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ ವೀಡಿಯೋ ಚಿತ್ರೀಕರಣದೊಂದಿಗೆ ಹಣ ಎಣಿಕೆ ಮಾಡಲಾಯಿತು.