ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕಳೆದ ಕೆಲವು ದಿನಗಳಿಂದ ಪ್ರತಿ ದಿನವೂ ಕೋವಿಡ್ 19 ಸೋಂಕಿತರ ಸಂಖ್ಯೆ ಶತಕ ದಾಟಿ ಸಾಗುತ್ತಿದೆ. ಇಂದೂ ಜಿಲ್ಲೆಯಲ್ಲಿ 182 ಜನರಿಗೆ ಕೋವಿಡ್ ಸೋಂಕು ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ ನಾಲ್ಕುವರೆ ಸಾವಿರ ದಾಟಿದೆ.
ಜಿಲ್ಲೆಯಲ್ಲಿ ಇಂದು 807 ಜನರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 625 ವರದಿಗಳ ಫಲಿತಾಂಶ ನೆಗೆಟಿವ್ ಆಗಿದೆ. ಉಳಿದ 182 ಜನರ ವರದಿ ಫಲಿತಾಂಶ ಪಾಸಿಟಿವ್ ಆಗಿದೆ.
ಇಂದಿನ ಸೋಂಕು ಪ್ರಕರಣಗಳ ಪೈಕಿ ಉಡುಪಿಯಲ್ಲಿ 75, ಕುಂದಾಪುರದಲ್ಲಿ 55 ಮತ್ತು ಕಾರ್ಕಳದಲ್ಲಿ 51 ಪ್ರಕರಣಗಳು ದೃಢವಾಗಿದೆ. 107 ಪುರುಷರು ಮತ್ತು 75 ಮಹಿಳೆಯರಲ್ಲಿ ಇಂದು ಸೋಂಕು ಪತ್ತೆಯಾಗಿದೆ.
ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 4672 ಆಗಿದ್ದು, ಇಂದು 50 ಮಂದಿ ಬಿಡುಗಡೆಯಾಗಿದ್ದಾರೆ. ಸದ್ಯ 1943 ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆಯಲ್ಲಿಂದು ಓರ್ವ ಮಹಿಳೆ ಕೋವಿಡ್ -19 ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದಾರೆ, ಉಡುಪಿ ತಾಲೂಕಿನ ಎಲ್ಲೂರಿನ 54 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಇಂದು ಒಟ್ಟು 977 ಜನರ ಗಂಟಲು ದ್ರವ ಮಾದರಿ ಸಂಗ್ರಹ ಮಾಡಲಾಗಿದೆ. ಇದುವರೆಗೆ ಒಟ್ಟು 33378 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿದ್ದು, ಅದರಲ್ಲಿ 28088 ಜನರ ವರದಿ ನೆಗಟಿವ್ ಮತ್ತು 4674 ಜನರ ಮಾದರಿ ವರದಿ ಪಾಸಿಟಿವ್ ಆಗಿದೆ. ಉಳಿದ 616 ವರದಿಗಳ ಫಲಿತಾಂಶ ಇನ್ನೂ ಬಾಕಿಯಿದೆ.