Advertisement

ತಮಿಳುನಾಡಿನಲ್ಲಿ ತಂದೆಯ ಸಂಪುಟಕ್ಕೆ ಪುತ್ರನ ಎಂಟ್ರಿ ; ಉದಯನಿಧಿ ಬಲ

04:01 PM Dec 14, 2022 | Team Udayavani |

ಚೆನ್ನೈ : ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪುತ್ರ 45 ರ ಹರೆಯದ ಉದಯ ನಿಧಿ ಅವರು ಬುಧವಾರ ಸಚಿವರಾಗಿ ತಮಿಳುನಾಡು ರಾಜ್ಯಪಾಲ ಆರ್. ಎನ್. ರವಿ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು.

Advertisement

ಡಿಎಂಕೆ ಶಾಸಕ ಮತ್ತು ಪಕ್ಷದ ಯುವ ವಿಭಾಗದ ಕಾರ್ಯದರ್ಶಿ ಯಾಗಿರುವ 45 ರ ಹರೆಯದ ಉದಯನಿಧಿ ಸ್ಟಾಲಿನ್ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳ ಸಮ್ಮುಖದಲ್ಲಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು.

ಡಿಎಂಕೆ ಯುವ ಘಟಕದ ಲೋಗೋ ಇದ್ದ ಬಿಳಿ ಶರ್ಟ್ ಧರಿಸಿ, ಅದರ ಮೇಲೆ, ಉದಯನಿಧಿ ಅವರು ತಮ್ಮ ತಂದೆ, ಪಕ್ಷದ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರಂತೆ ವಿಶಿಷ್ಟ ಶೈಲಿಯಲ್ಲಿ ತಮಿಳು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 10 ನಿಮಿಷದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಗಿಯಿತು. ಉದಯ ನಿಧಿ ಅವರನ್ನು ರಾಜ್ಯ ಸಚಿವರು ಮತ್ತು ಪಕ್ಷದ ಹಿರಿಯ ನಾಯಕರು ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next