Advertisement
ಈ ಮೂಲಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪತಿಗೆ ನೆರವಾಗು ತ್ತಿದ್ದಾರೆ. ಅದು ಹೇಗೆ ಬಲ್ಲಿರಾ? ಸಚಿವ ಏಕನಾಥ ಶಿಂಧೆಯವರ ಜತೆಗೆ ತೆರಳಿರುವ ಶಾಸಕರ ಪತ್ನಿಯರನ್ನು ಸಂಪರ್ಕಿಸುವ ಯತ್ನವನ್ನು ಅವರು ಆರಂಭಿಸಿದ್ದಾರೆ.
Related Articles
Advertisement
ಕೇಂದ್ರದ ನಿರ್ಧಾರವನ್ನು ಮಹಾ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಆಕ್ಷೇಪಿಸಿ ದ್ದಾರೆ. “ಕಾಶ್ಮೀರ ಪಂಡಿತರಿಗೆ ಸಿಆರ್‌ಪಿಎಫ್ ಭದ್ರತೆ ನೀಡಬೇಕಾಗಿತ್ತು. ಭಿನ್ನಮತೀಯ ಶಾಸಕರಿಗೆ ಅಲ್ಲ’ ಎಂದಿದ್ದಾರೆ. ಅವರಿಗೆ ಪಕ್ಷದ ಬಾಗಿಲು ಮುಚ್ಚಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರು ಸೋಲುವಂತೆ ಮಾಡುತ್ತೇವೆ ಎಂದು ಸವಾಲು ಹಾಕಿದ್ದಾರೆ.
ಶಿಂಧೆಗೆ ಸಿಎಂ ಹುದ್ದೆ ಆಫರ್: ಭಿನ್ನಮತೀಯ ಶಾಸಕರು ಗುವಾಹಾಟಿಯಲ್ಲಿ ಬಂಧಿಗಳಾಗಿದ್ದಾರೆ ಎಂದು ಹೇಳಿರುವ ಸಚಿವ ಆದಿತ್ಯ ಠಾಕ್ರೆ ಹೊಸ ಮಾಹಿತಿ ಬಹಿರಂಗಪಡಿಸಿದ್ದಾರೆ. ಮೇ 30ರಂದು ನಡೆದಿದ್ದ ಸಭೆಯಲ್ಲಿ ಸಿಎಂ ಉದ್ಧವ್ ಠಾಕ್ರೆ ಅವರು ಏಕನಾಥ ಶಿಂಧೆಗೆ ಸಿಎಂ ಹುದ್ದೆಯನ್ನು ನೀಡುವ ಬಗ್ಗೆ ಭರವಸೆ ನೀಡಿದ್ದರು ಎಂದಿದ್ದಾರೆ. ಈ ಸಂಚಿನಲ್ಲಿ ಬಿಜೆಪಿ ಇಲ್ಲ ಎಂದಾದರೆ, ಗುವಾಹಾಟಿಯಲ್ಲಿ ಭಿನ್ನಮತೀಯರನ್ನು ಅವರೇಕೆ ಭೇಟಿಯಾಗುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.