ಮುಂಬಯಿ: “ಬನ್ನಿ, ನಾವೆಲ್ಲರೂ ಸೇರಿ ಮಹಾರಾಷ್ಟ್ರದಲ್ಲಿ ಜತೆಯಾಗಿ ವಿಧಾನಸಭೆ ಚುನಾವಣೆ ಎದುರಿಸೋಣ’- ಹೀಗೆಂದು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಿಜೆಪಿಗೆ ಮತ್ತು ಸಿಎಂ ಏಕನಾಥ ಶಿಂಧೆ ಬಣದ ಶಾಸಕರಿಗೆ ಸವಾಲು ಹಾಕಿದ್ದಾರೆ.
ಮುಂಬಯಿಯಲ್ಲಿ ಶುಕ್ರವಾರ ಮಾತ ನಾಡಿದ ಅವರು, “ವಿಶ್ವಾಸಮತವನ್ನು ಎದುರಿಸದೆ ರಾಜೀನಾಮೆ ನೀಡಿದ್ದೇನೆ. ಅದೇ ರೀತಿ ಮುಖ್ಯಮಂತ್ರಿ ಏಕನಾಥ ಶಿಂಧೆ ಸರಕಾರ ವನ್ನು ವಿಸರ್ಜಿಸಿ ಚುನಾವಣೆ ಘೋಷಣೆ ಮಾಡಲಿ. ನಾವೆ ಲ್ಲರೂ ಒಟ್ಟಾಗಿ ಜನರ ಮುಂ ದೆ ನಿಂತು ಹೊಸತಾಗಿ ಜನಾ ದೇಶ ಪಡೆದು ಕೊಳ್ಳೋಣ’ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಏಕನಾಥ ಶಿಂಧೆ ಸಹಿತ 16 ಶಾಸಕರನ್ನು ಅನರ್ಹಗೊಳಿ ಸುವ ಬಗ್ಗೆ ವಿಧಾನಸಭೆಯ ಸ್ಪೀಕರ್ ಅತ್ಯಂತ ತ್ವರಿತವಾಗಿ ನಿರ್ಧಾರ ಕೈಗೊ ಳ್ಳಬೇಕು. ವಿಳಂಬ ಮಾಡಿದರೆ ಅವರ ವಿರುದ್ಧ ಮತ್ತೂಮ್ಮೆ ಸುಪ್ರೀಂಕೋರ್ಟ್ ನಲ್ಲಿ ದಾವೆ ಹೂಡುತ್ತೇವೆ. ಸದ್ಯ 16 ಮಂದಿ ಶಾಸಕರಿಗೆ ನೀಡಲಾಗಿರುವ ಜೀವದಾನ ಕೇವಲ ತಾತ್ಕಾಲಿಕ ಎಂದಿ ದ್ದಾರೆ. ವಿಶ್ವಾಸಮತಕ್ಕೆ ಮೊದಲೇ ಉದ್ಧ ವ್ ಠಾಕ್ರೆ ನೇತೃತ್ವದ ಸರಕಾರ ರಾಜೀ ನಾಮೆ ನೀಡಿದ್ದರಿಂದ ಅದನ್ನು ಪುನಃಸ್ಥಾಪಿಸಲು ಸಾಧ್ಯವಾಗದು ಎಂದ ಸುಪ್ರೀಂಕೋರ್ಟ್ ಕೋರ್ಟ್ ತೀರ್ಮಾ ನಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಪಾಲರು ನಡೆದುಕೊಂಡು ರೀತಿ ಯಿಂದಾಗಿ ಹೀಗಾಗಿದೆ ಎಂದರು. ಸದ್ಯ ಅಧಿಕಾರದಲ್ಲಿ ಇರುವ ಸರಕಾರ ಅನೈ ತಿಕವಾದದ್ದು ಎಂದು ಟೀಕಿಸಿದರು.
ಒತ್ತಡ ಸಲ್ಲದು: ಶಾಸಕರನ್ನು ಅನರ್ಹತೆಗೊಳಿಸುವ ವಿಚಾ ರದಲ್ಲಿ ಸ್ಪೀಕರ್ ಮೇಲೆ ಒತ್ತಡ ಹೇರುವುದು ಸಲ್ಲದು. ಅದು ನಮ್ಮ ಮುಕ್ತ ಮತ್ತು ನ್ಯಾಯ ಸಮ್ಮತವಾಗಿರುವ ಕಾನೂನು ವ್ಯವಸ್ಥೆಯಲ್ಲಿ ಇಲ್ಲವೆಂದು ನಾಗಪುರದಲ್ಲಿ ಮಾತನಾಡಿದ ಡಿಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಸ್ಪೀಕರ್ ರಾಹುಲ್ ನರ್ವೇಕರ್ ಸೂಕ್ತ ಸಂದರ್ಭದಲ್ಲಿ ಅನರ್ಹತೆಯ ವಿಚಾರದ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಕ್ರಮ ಕೈಗೊಳ್ಳಬಹುದಿತ್ತು: ಸ್ಪೀಕರ್ ಆಗಿದ್ದ ನಾನಾ ಪಟೋಲೆ ರಾಜೀನಾಮೆ ಬಳಿಕ ಉದ್ಧವ್ ವಿರುದ್ಧ ಬಂಡಾಯವೆದ್ದ 16 ಶಾಸಕರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುತ್ತಿದ್ದರೆ ಅವರನ್ನು ಅನರ್ಹ ಗೊಳಿಸಹುದಿತ್ತು ಎಂದು ಎನ್‌ಸಿಪಿ ಮುಖಂಡ ಅಜಿತ್ ಪವಾರ್ ಹೇಳಿ ದ್ದಾರೆ. ಸಿಎಂ ಆಗಿದ್ದ ಉದ್ಧವ್ ಠಾಕ್ರೆ ಜತೆಗೆ ಚರ್ಚೆ ನಡೆಸದೆ ಪಟೋಲೆ ರಾಜೀ ನಾಮೆ ನೀಡಿದ್ದರು. ಅವರು ಇರುತ್ತಿದ್ದರೆ, ಪರಿಸ್ಥಿತಿ ನಿಭಾಯಿಸ ಬಹುದಾಗಿತ್ತು ಎಂದರು.