Advertisement

ಸಿಎಂ ಸ್ಥಾನ ಉಳಿಸಿಕೊಂಡ ಉದ್ಧವ್‌ ಠಾಕ್ರೆ

08:00 AM May 15, 2020 | Sriram |

ಮುಂಬೈ: ಮಹಾರಾಷ್ಟ್ರ ಸಿಎಂ ಸ್ಥಾನವನ್ನು ಉದ್ಧವ್‌ ಠಾಕ್ರೆ ಉಳಿಸಿಕೊಂಡಿದ್ದಾರೆ. ಠಾಕ್ರೆ ಸೇರಿದಂತೆ 9 ಮಂದಿ ಅಭ್ಯರ್ಥಿಗಳು ವಿಧಾನಪರಿಷತ್‌ಗೆ ಆಯ್ಕೆಯಾಗಿರುವ ಬಗ್ಗೆ ಘೋಷಣೆ ಮಾಡಲಾಗಿದೆ. ಹೀಗಾಗಿ ಅವರು ನಿರಾತಂಕವಾಗಿ ಆಡಳಿತ ಸೂತ್ರ ಮುನ್ನಡೆಸಲು ಅವಕಾಶ ಸಿಕ್ಕಂತಾಗಿದೆ.

Advertisement

2019ರ ನ.28ರಂದು ಪ್ರಮಾಣ ವಚನ ಸ್ವೀಕರಿಸಿದ್ದ ಉದ್ಧವ್‌ 27ರೊಳಗೆ ವಿಧಾನ ಪರಿಷತ್‌ ಅಥವಾ ಶಾಸಕರಾಗಬೇಕಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಪರಿಷತ್‌ ಚುನಾವಣೆ ಕೂಡ ಮುಂದೂಡಲಾಗಿತ್ತು. ರಾಜ್ಯಪಾಲರ ಕೋಟಾದಲ್ಲಿ ಸಿಎಂರನ್ನು ನೇಮಕ ಮಾಡುವ ಬಗ್ಗೆ ಮಹಾರಾಷ್ಟ್ರ ವಿಕಾಸ ಅಘಾಡಿ ಸಂಪುಟ ಶಿಫಾರಸು ಮಾಡಿದ್ದರೂ, ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಅದರ ಬಗ್ಗೆ ಮೌನ ವಹಿಸಿದ್ದರು.

ಇದರಿಂದ ಕ್ರುದ್ಧರಾಗಿದ್ದ ಸಿಎಂ ಉದ್ಧವ್‌ ನೇರವಾಗಿ ಪ್ರಧಾನಿ ಫೋನ್‌ ಮಾಡಿ ತಮ್ಮ ನೇತೃತ್ವದ ಸರ್ಕಾರ ಉರುಳಿಸುವ ಯತ್ನ ನಡೆಯುತ್ತಿದೆ ಎಂದು ದೂರಿದ್ದರು. ನಂತರ ಪರಿಷತ್‌ ಚುನಾವಣೆಗೆ ಅವಕಾಶ ಕಲ್ಪಿಸಲಾಯಿತು. ಠಾಕ್ರೆ ಜತೆಗೆ ಪರಿಷತ್‌ ಉಪಸಭಾಪತಿ ನೀಲಂ , ಬಿಜೆಪಿಯಿಂದ ರಂಜಿತ್‌ಸಿನ್ಹಾ ಮೊಹಿತ್‌ ಪಾಟೀಲ್‌, ಗೋಪಿಚಂದ್‌ ಪಡಲ್ಕರ್‌, ಪ್ರವೀಣ್‌ , ರಮೇಶ್‌ ಕಾರಾದ್‌, ಎನ್‌ಸಿಪಿಯಿಂದ ಶಶಿಕಾಂತ್‌ ಶಿಂಧೆ, ಅಮೂಲ್‌ ಮಿಟ್ಕರಿ ಹಾಗೂ ಕಾಂಗ್ರೆಸ್‌ನಿಂದ ರಾಜೇಶ್‌ ರಾಥೋಡ್‌ ಪರಿಷತ್‌ಗೆ ಆಯ್ಕೆಯಾಗಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next