Advertisement

ಉದ್ಧವ್ ಠಾಕ್ರೆ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ

04:40 PM Dec 21, 2021 | Team Udayavani |

ಬ್ಯಾಡಗಿ : ಎಂಇಎಸ್‌ ಪುಂಡರಿಗೆ ತಕ್ಕ ಶಿಕ್ಷೆ ವಿಧಿಸಿ ಗಡಿಪಾರುವಂತೆ ಆಗ್ರಹಿಸಿ ಪಟ್ಟಣದಲ್ಲಿ ಸೋಮವಾರ ಬೀರೇಶ್ವರ ಪಂಚ ಕಮಿಟಿ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯವ ವೇದಿಕೆ ಸದಸ್ಯರು ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

Advertisement

ಪಟ್ಟಣದ ಬೀರೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪಟ್ಟಣದ ಹಳೆ ಪುರಸಭೆ, ಮುಖ್ಯ ರಸ್ತೆ ಮೂಲಕ ಸುಭಾಷ್‌ ಸರ್ಕಲ್‌ ತಲುಪಿತು. ಸುಭಾಷ್‌ ಸರ್ಕಲ್‌ನಲ್ಲಿ ತಮ್ಮ ಆಕ್ರೋಶ ಹೊರ ಹಾಕಿದ ಸದಸ್ಯರು, ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಭಾವಚಿತ್ರಕ್ಕೆ ಚಪ್ಪಲಿ ಏಟು ನೀಡಿ ನಂತರ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕುರುಬ ಸಮಾಜದ ಮುಖಂಡ ಚಿಕ್ಕಪ್ಪ ಹಾದಿಮನಿ, ರಾಜ್ಯದಲ್ಲಿ ಶಾಂತಿ ಕದಡುವ ಕೆಲಸಕ್ಕೆ ಎಂಇಎಸ್‌ ಪುಂಡರು ಹಾಗೂ ಮಹಾರಾಷ್ಟ್ರ ಸಿಎಂ ಕೈ ಹಾಕಿದ್ದಾರೆ. ಶಾಂತಿಪ್ರಿಯ ಕನ್ನಡಿಗರ ಸ್ವಾಭಿಮಾನ ಕೆಣಕುವ ಮೂಲಕ ತಮ್ಮ ಅವನತಿಗೆ ತಾವೇ ಮುನ್ನುಡಿ ಬರೆದುಕೊಳ್ಳುತ್ತಿದ್ದಾರೆ ಎಂದರು.

ರವಿ ಕಂಬಳಿ ಮಾತನಾಡಿದರು. ನಂತರ ಪ್ರತಿಭಟನಾಕಾರರು ತಹಶೀಲ್ದಾರ್‌ ಕಚೇರಿಗೆ ತೆರಳಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಶ್ರೀಕಾಂತ ಉಜನಿ, ರಾಮಣ್ಣ ಉಕ್ಕುಂದ, ಮಲ್ಲೇಶಪ್ಪ ಬಣಕಾರ,‌ ಬಸವರಾಜ ಕಂಬಳಿ, ಯಮನೂರಪ್ಪ ಉಜನಿ, ಮಂಜುನಾಥ ಹೆಬಸೂರ, ಸಣ್ಣ ಕುಬೇರ ಆಡಿನವರ, ರೇವಣೆಪ್ಪ ಉ‌ಜನಿ, ಸೋಮಣ್ಣ ಬರಡಿ, ಚಂದ್ರು ಉಜನಿ, ಲೋಹಿತ್‌ ಆನ್ವೇರಿ, ಬಿ.ಎಂ. ಜಗಾಪುರ, ಮಾಲತೇಶ ಆಡಿನವರ ಸೇರಿದಂತೆ ಸಮಾಜದ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next