Advertisement

ಉದ್ಯಾವರ: ಪ್ರಭಾರ ಪಿಡಿಒ ಬದಲಾವಣೆ ವಿರುದ್ಧ ಪ್ರತಿಭಟನೆ

11:17 PM Jun 01, 2020 | Sriram |

ಉದ್ಯಾವರ: ಉದ್ಯಾವರ ಗ್ರಾ.ಪಂ. ನಿರ್ಣಯಕ್ಕೆ ವಿರುದ್ಧವಾಗಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭಾರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಡಿಒ ಹುದ್ದೆಗೆ ಮತ್ತೋರ್ವ ಪ್ರಭಾರ ಪಿಡಿಒ ನೇಮಕಾತಿ ವಿರುದ್ಧ ಜನಪ್ರತಿನಿಧಿಗಳು ಪಂಚಾಯತ್‌ ಕಾರ್ಯಾಲಯ ತೆರೆಯಲು ಬಿಡದೆ ಪ್ರತಿಭಟನೆ ನಡೆಸಿದರು.

Advertisement

ಪಂಚಾಯತ್‌ ಜನಪ್ರತಿನಿಧಿಗಳ ಆಡಳಿತಾ ವಧಿಯು ಮುಗಿಯುತ್ತಾ ಬಂದಿದ್ದು, ಈ ಸಂದರ್ಭ ಪಿಡಿಒ ಬದಲಾಯಿಸಿದಲ್ಲಿ ಆಡಳಿತಾತ್ಮಕ ಮತ್ತು ಗ್ರಾಮದ ಅಭಿವೃದ್ಧಿ ಕುಂಠಿತವಾಗಲಿದೆ ಎಂಬ ನೆಲೆಯಲ್ಲಿ ಪಂಚಾಯತ್‌ ನಿರ್ಣಯ ಕೈಗೊಂಡು ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಈ ನಡುವೆಯೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಮತ್ತೋರ್ವ ಪ್ರಭಾರ ಪಿಡಿಒ ಕರ್ತವ್ಯ ನಿಭಾಯಿಸುವಂತೆ ಮಾಡಿದ್ದು ಜನಪ್ರತಿನಿಧಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಆ ನಿಟ್ಟಿನಲ್ಲಿ ಪಂಚಾಯತ್‌ ಕಚೇರಿ ತೆರೆಯಲು ಜನಪ್ರತಿನಿಧಿಗಳು ಬಿಡಲಿಲ್ಲ. ಮಧ್ಯಾಹ್ನದವರೆಗೂ ಯಾವುದೇ ಇಲಾಖಾಧಿಕಾರಿಗಳು ಭೇಟಿ ನೀಡಲಿಲ್ಲ. ಬಳಿಕ ಇ.ಒ. ಮೋಹನ್‌ರಾಜ್‌ ಸ್ಥಳಕ್ಕಾಗಮಿಸಿ ಮಾತುಕತೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಅನಂತರ ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಸ್ಥಳಕ್ಕಾಗಮಿಸಿ ಸಮಸ್ಯೆ ಸರಿಪಡಿಸುವ ಭರವಸೆಯನ್ನು ನೀಡಿದರು.

ಜಿ.ಪಂ. ಅಧ್ಯಕ್ಷ ದಿನಕರ ಬಾಬು ಪ್ರತಿಕ್ರಿಯಿಸಿ, ಜಿ.ಪಂ. ಸಿ.ಎಸ್‌. ಅವರಿಗೆ ಸಮಸ್ಯೆ ಬಗ್ಗೆ ಮನವರಿಕೆ ಮಾಡಲಾಗಿದೆ ಎಂದರು.

ಸಮಸ್ಯೆ ಸಚಿವರಿಗೆ ವರ್ಗಾವಣೆ
ದಿನಕರ ಬಾಬು ನೇತೃತ್ವದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿ ಮಾಡಿ ಸಮಸ್ಯೆಯನ್ನು ಗಮನಕ್ಕೆ ತರಲಾಗಿದ್ದು, ಸ್ಪಂದಿಸಿದ ಸಚಿವರು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಸರಿಪಡಿಸುವ ಭರವಸೆ ನೀಡಿದ ಬಳಿಕ ಜನಪ್ರತಿನಿಧಿಗಳು ಪ್ರತಿಭಟನೆ ಕೈಬಿಟ್ಟರು.ತಾ.ಪಂ. ಸದಸ್ಯೆ ರಜನಿ ಆರ್‌. ಅಂಚನ್‌, ಉದ್ಯಾವರ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಸುಗಂಧಿ ಶೇಖರ್‌, ಉಪಾಧ್ಯಕ್ಷ ರಿಯಾಜ್‌ ಪಳ್ಳಿ, ಸದಸ್ಯರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next