ಮಣಿಪಾಲ: ಉದಯವಾಣಿ ಆನ್‌ಲೈನ್ ವಿಭಾಗದಿಂದ ನೂತನವಾಗಿ ನಿರ್ಮಿಸಿದ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ನಡೆಯುವ ಸರಣಿ ಕಾರ್ಯಕ್ರಮಗಳನ್ನು ಶನಿವಾರ ಅಯೋಧ್ಯೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಗಳಾಗಿರುವ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಉದ್ಘಾಟಿಸಿದರು.
ಗೀತಾಜಯಂತಿ ಪರ್ವಕಾಲದಲ್ಲಿ ಉದಯವಾಣಿ ಆನ್‌ಲೈನ್ ವಿಭಾಗದಿಂದ ಸ್ಟುಡಿಯೋ ನಿರ್ಮಾಣವಾಗಿ ಸಮಾಜಕ್ಕೆ ಸಮರ್ಪಣೆಯಾಗಿದೆ. ಉದಯವಾಣಿಯು 1970ರ ಜನವರಿ 1ರಂದು ಆರಂಭಗೊಂಡು ಜನಮಾನಸದ ಹೆಮ್ಮೆಯ ಪತ್ರಿಕೆಯಾಗಿ ಬೆಳೆದುಬಂದಿದೆ. ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನೂ ಪಡೆದುಕೊಂಡಿದೆ.
ಆನ್‌ಲೈನ್ ವಿಭಾಗದಿಂದಲೂ ಇನ್ನಷ್ಟು ಜನಪ್ರಿಯವಾಗಲಿ ಎಂದು ಸ್ವಾಮೀಜಿ ಶುಭ ಹಾರೈಸಿದರು.
ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ. ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಸತೀಶ್ ಯು. ಪೈ ಮತ್ತು ಆಡಳಿತ ನಿರ್ದೇಶಕ, ಸಿಇಒ ವಿನೋದ ಕುಮಾರ್ ಉಪಸ್ಥಿತರಿದ್ದರು.