Advertisement
“ಉದಯವಾಣಿ’ಯು ವ್ಯಾಕ್ಸಿನೇಶನ್ ಕುರಿತು ಬುಧವಾರ ಆಯೋಜಿಸಿದ ಫೋನ್ ಇನ್ ಕಾರ್ಯಕ್ರಮದಲ್ಲಿ ಓದುಗರ ಪ್ರಶ್ನೆಗಳಿಗೆ ಉತ್ತರಿಸಿದ ಜಿಲ್ಲಾ ಕೊರೊನಾ ಲಸಿಕೆ ಅಧಿಕಾರಿ ಡಾ|ಎಂ.ಜಿ.ರಾಮ ಮತ್ತು ಮಣಿಪಾಲ ಕೆಎಂಸಿ ಸಮುದಾಯ ಆರೋಗ್ಯ ವಿಭಾಗದ ಪ್ರಾಧ್ಯಾಪಕ ಡಾ|ಅಶ್ವಿನಿಕುಮಾರ್, ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳ ಪೂರೈಕೆ ಕೆಲವೇ ಸಮಯದಲ್ಲಿ ಸರಿಯಾದೀತು ಎಂದರು.
ಮೊದಲ ಡೋಸ್ ಪಡೆದವರು ಅವಧಿ ಮುಗಿಯಿ ತೆಂದು ಆತಂಕ ಪಡಬೇಡಿ. ಮೂರು ತಿಂಗಳಾದ ಬಳಿಕ ಎರಡನೇ ಡೋಸ್ ಪಡೆದರೆ ಮತ್ತಷ್ಟು ಉತ್ತಮ ಎಂಬ ಅಭಿಪ್ರಾಯವಿದೆ. ಲಸಿಕೆ ಪೂರೈಕೆಯಲ್ಲಿ ನಿರ್ವಹಣೆ ಮತ್ತು ತಾಂತ್ರಿಕ ಆಯಾಮ ಎಂಬುದಿರುತ್ತವೆ. ನಿರ್ವಹಣೆ ಆಯಾಮದಡಿ ಒಮ್ಮೆಲೆ ಸೋಂಕು ಹಬ್ಬುವಾಗ ಆದಷ್ಟು ಶೀಘ್ರ ಪಡೆಯಲಿ ಎಂದು ಸಮಯ ನಿಗದಿಪಡಿಸಲಾಗುತ್ತದೆ. ಅದು ಮೊದಲನೇ ಡೋಸ್ ಕೊಟ್ಟ ಮೇಲೆ 6 ರಿಂದ 8 ವಾರ ಇರಬಹುದು. ಹಾಗೆಯೇ ತಾಂತ್ರಿಕ ಆಯಾಮವೆಂದರೆ, ನಿಜವಾಗಲೂ ಎರಡನೇ ಡೋಸ್ ಪಡೆಯಬಹುದಾದ ಅವಧಿ. ಯಾವುದರಿಂದಲೂ ನಷ್ಟವಿಲ್ಲ ಎಂದವರು ಡಾ|ಅಶ್ವಿನಿಕುಮಾರ್.
Related Articles
Advertisement
ಸುಮ್ಮನೆ ಹೋಗಬೇಡಿಎರಡನೆಯ ಡೋಸ್ ಲಸಿಕೆ ಪಡೆಯು ವವರು ಸಮೀಪದ ಸರಕಾರಿ ಆಸ್ಪತ್ರೆಗಳಲ್ಲಿ ಅಥವಾ ಆಶಾ ಕಾರ್ಯಕರ್ತೆಯರಲ್ಲಿ ವಿಚಾರಿಸಿ ತೆರಳಬೇಕು. ಕೋವಿಶೀಲ್ಡ್ ಪ್ರಥಮ ಡೋಸ್ ಪಡೆದು 56 ದಿನ ಮೀರಿದವರಿಗೆ ಲಸಿಕೆ ಲಭ್ಯವಿದ್ದರೆ ಆಶಾ ಕಾರ್ಯಕರ್ತೆಯರ ಮೂಲಕ ಮಾಹಿತಿ ನೀಡುವ ವ್ಯವಸ್ಥೆ ಬುಧವಾರದಿಂದ ಜಾರಿಗೆ ಬಂದಿದೆ. ಯಾರೂ ಸುಮ್ಮನೇ ಲಸಿಕಾ ಕೇಂಂದ್ರದಲ್ಲಿ ಕಾಯಬಾರದೆಂಬುದು ಇದರ ಉದ್ದೇಶ. ಲಾಕ್‌ಡೌನ್ ಬಳಿಕ ಲಸಿಕೆ ಲಭ್ಯವಿದ್ದಾಗಲೂ ಪಡೆಯ ಬಹುದು ಎಂದು ಡಾ|ಎಂ.ಜಿ.ರಾಮ ಹೇಳಿದರು. ಎರಡೂ ವ್ಯಾಕ್ಸಿನ್ ಉತ್ತಮವೇ
ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆಯಲ್ಲಿ ಯಾವುದು ಉತ್ತಮ ಎಂಬ ಪ್ರಶ್ನೆಗೆ ಉತ್ತರಿಸಿದ ಡಾ| ರಾಮ ಮತ್ತು ಡಾ|ಅಶ್ವಿನಿಕುಮಾರ್, ಎರಡೂ ಉತ್ತಮವೇ. ಎರಡೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಸದ್ಯ ಎಂಟು ತಿಂಗಳ ಪ್ರಯೋಗ ಮಾತ್ರ ನಡೆದಿದ್ದು, ಅಧ್ಯಯನ ಪ್ರಕಾರ ಎರಡು ಡೋಸ್‌ಗಳು 1 ವರ್ಷದವರೆಗೆ ವೈರಾಣುವಿನಿಂದ ರಕ್ಷಣೆ ಒದಗಿಸುತ್ತವೆ. ವ್ಯಾಕ್ಸಿನ್ ಪಡೆದ ಬಳಿಕ ಪಾಸಿಟಿವ್ ಬಂದರೂ ಸಾವು ಉಂಟಾಗದು ಎಂದು ಅಧ್ಯಯನದಿಂದ ತಿಳಿದುಬಂದಿದೆ. ಲಸಿಕೆ ಪಡೆಯುವಾಗ ತಡವಾದರೂ ಹೆದರಿಕೊಳ್ಳಬೇಕಿಲ್ಲ. ಸ್ಪುಟ್ನಿಕ್ ಲಸಿಕೆ ಸಾಂಕೇತಿಕವಾಗಿಯಷ್ಟೆ ಬಂದಿದೆ. ಮುಂದೆ ಸಾಕಷ್ಟು ಸಂಖ್ಯೆಯಲ್ಲಿ ಬರಲಿದೆ ಎಂದರು. ಒಬ್ಬರಿಗೆ ಬೇರೆ ಬೇರೆ ವ್ಯಾಕ್ಸಿನ್: ಪ್ರಯೋಗದಲ್ಲಿ ಮೊದಲ ಡೋಸ್ ಪಡೆದ ವ್ಯಾಕ್ಸಿನ್ ಬದಲಾಗಿ ಬೇರೊಂದನ್ನು ಪಡೆಯಬಹುದೇ ಎಂಬುದಿನ್ನೂ ಅಧ್ಯಯನ ಹಂತದಲ್ಲಿದೆ. ಕೊರೊನಾ ನಿರ್ವಹಣೆ
ಕೊರೊನಾ ನಿರ್ವಹಣೆ (ಯಾರಿಗೆ ಹೋಮ್ ಐಸೊಲೇಶನ್ ಸಾಕು? ಯಾರಿಗೆ ಕೋವಿಡ್ ಕೇರ್ ಸೆಂಟರ್ ಅಗತ್ಯ? ಯಾರಿಗೆ ಆಸ್ಪತ್ರೆ ಚಿಕಿತ್ಸೆ ಬೇಕು?) ಎಂಬ ವಿಷಯದಲ್ಲಿ ಫೋನ್ ಇನ್ ಕಾರ್ಯಕ್ರಮ ಮೇ 14ರ ಸಂಜೆ 4ರಿಂದ 5 ಗಂಟೆ ವರೆಗೆ ಜರಗಲಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ ಮತ್ತು ಉಡುಪಿ ಡಾ| ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಶಶಿಕಿರಣ್ ಉಮಾಕಾಂತ್ ಭಾಗವಹಿಸಲಿದ್ದಾರೆ. ಫೋನ್ ಮಾಡಬೇಕಾದ ದೂರವಾಣಿ ಸಂಖ್ಯೆ
0820 2205000 ಉದಯವಾಣಿ ಫೇಸ್‌ಬುಕ್‌ನಲ್ಲಿ ಕಾರ್ಯಕ್ರಮದ ನೇರಪ್ರಸಾರ ಇರುತ್ತದೆ. ಆನ್‌ಲೈನ್ ಬುಕ್ಕಿಂಗ್ ನಿಯಮ
ಆನ್‌ಲೈನ್ ಬುಕ್ಕಿಂಗ್‌ನಲ್ಲಿ ಸಮಸ್ಯೆಯಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಕೊವಿನ್ ಆ್ಯಂಡ್ ಕೋಲ್ಡ್ ಚೈನ್ ಮ್ಯಾನೇಜರ್ ಆರತಿ. ಕೆ, ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿದ ಮಾತ್ರಕ್ಕೆ ಲಸಿಕೆ ಸಿಗದು. ಲಾಗಿನ್ ಆದ ಬಳಿಕ ಒಟಿಪಿ ಸಂಖ್ಯೆ ಬರುತ್ತದೆ. ಆಧಾರ್ ಅಥವಾ ಪಾನ್‌ಕಾರ್ಡ್ ನಮೂದಿಸಿ ರಿಜಿಸ್ಟರ್ ಮಾಡಿದಾಗ ಲಸಿಕಾ ಕೇಂದ್ರ ನಿಗದಿಯಾಗುತ್ತದೆ. ಅದೇ ದಿನ ಅದೇ ಕೇಂದ್ರಕ್ಕೆ ಹೋಗಬೇಕು. ಉಡುಪಿ ಜಿಲ್ಲೆಯ ನಾಲ್ಕು ಲಸಿಕಾ ಕೇಂದ್ರಗಳಲ್ಲಿ ಈಗ ನಿತ್ಯ 600 ಡೋಸ್‌ಗಳನ್ನು ನೀಡುತ್ತಿರುವುದರಿಂದ ಬೇಗ ಬುಕ್ಕಿಂಗ್ ಪೂರ್ಣಗೊಳ್ಳುತ್ತಿದೆ. ಶೀಘ್ರವೇ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಲಭ್ಯವಾಗಲಿದೆ ಎಂದರು. ಲಸಿಕೆ ಉಷ್ಣಾಂಶ 2-8 ಡಿಗ್ರಿ
ಒಂದು ಬಾಕ್ಸ್‌ನ್ನು ತೆರೆದರೆ ನಾಲ್ಕು ಗಂಟೆಯೊಳಗೆ 10 ಲಸಿಕೆಯನ್ನು ಕೊಡಬೇಕು. ಲಸಿಕೆ 2-8 ಡಿಗ್ರಿ ಉಷ್ಣಾಂಶದಲ್ಲಿರುತ್ತದೆ. ಇದೇ ಕಾರಣಕ್ಕಾಗಿ ಕೆಲವೊಮ್ಮೆ ಕಾಯಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ. ಉಷ್ಣಾಂಶ ನಿರ್ವಹಣೆ ಕಷ್ಟವೆಂದೇ ಇನ್ನೂ ಮನೆ ಮನೆಗೆ ಲಸಿಕೆ ನೀಡುವ ಕ್ರಮ ಆರಂಭವಾಗಿಲ್ಲ ಎಂಬುದು ಪರಿಣತರ ಅಭಿಪ್ರಾಯ.