Advertisement

ಮುಖ್ಯಮಂತ್ರಿ ಬದಲಾದರೂ ಅವರ ಧೋರಣೇ ಬದಲಾಗಿಲ್ಲ : ರಾಜೇಂದ್ರ ಕೇರಕರ್

04:19 PM Sep 04, 2021 | Team Udayavani |

ಪಣಜಿ : ಮಹದಾಯಿ ನದಿ ನೀರಿನ ಹೆಚ್ಚಿನ ನೀರನ್ನು ಪಡೆದುಕೊಳ್ಳಲು ಕರ್ನಾಟಕವು ಸತತವಾಗಿ ತನ್ನ ಪ್ರಯತ್ನವನ್ನು ಮುಂದುವರೆಸಿದೆ. ಕರ್ನಾಟಕದಲ್ಲಿ ಸರ್ಕಾರ ಬದಕಲಾದರೂ,ಮುಖ್ಯಮಂತ್ರಿ ಬದಲಾದರೂ, ಅವರ ಧೋರಣೆ ಮಾತ್ರ ಎಂದಿಗೂ ಬದಲಾಗಿಲ್ಲ. ಇದರಿಂದಾಗಿಯೇ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರವರ ಮಹದಾಯಿ ಯೋಜನೆಯನ್ನು ಪೂರ್ಣಗೊಳಿಸಲು ನೂತನ ಮುಖ್ಯಮಂತ್ರಿ ಬೊಮ್ಮಾಯಿ ಕೂಡ ಚರ್ಚೆ ಮುಂದುವರೆಸಿದ್ದಾರೆ ಎಂದು ಗೋವಾ ರಾಜ್ಯ ಪರಿಸರ ಹೋರಾಟಗಾರರಾದ ರಾಜೇಂದ್ರ ಕೇರಕರ್ ಹೇಳಿದ್ದಾರೆ.

Advertisement

ಇದನ್ನೂ ಓದಿ : ವಿದ್ಯುತ್ ಬಿಲ್ ನಲ್ಲಿ ಅಕ್ರಮವೆಸಗಿದ ಮೂವರ ಅಮಾನತು: ಸಚಿವ ಸುನಿಲ್ ಕುಮಾರ್

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು,ಪ್ರಸಕ್ತ ಮಳೆಗಾಲದಲ್ಲಿಯೂ ಕೂಡ ಮಹದಾಯಿ ನದಿಯಿಂದ ಬರುವ ಶೇ 60 ರಷ್ಟು ನೀರನ್ನು ಮಲಪ್ರಭೆಗೆ ತಿರುಗಿಸಿಕೊಳ್ಳಲು ಕರ್ನಾಟಕ ಸಂಪೂರ್ಣ ಯಶಸ್ವಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಣಕುಂಬಿ ಬಳಿ ಕಳಸಾ ನಾಲೆಯಿಂದ ಬೃಹತ್ ಪ್ರಮಾಣದ ನೀರು ಹರಿದು ಹೋಗುತ್ತಿರುವುದು ಸ್ಪಷ್ಟವಾಗುತ್ತದೆ. ಸದ್ಯ ಮಳೆ ಕಡಿಮೆಯಾದರೂ ಕೂಡ ಹೆಚ್ಚಿನ ಪ್ರಮಾಣದ ನೀರು ಮಲಪ್ರಭಾ ನದಿ ಸೇರುತ್ತಿದೆ. ಮಳೆಗಾಲದ ಸಂದರ್ಭದಲ್ಲಿಯೂ ಮಹದಾಯಿ ನದಿಯಿಂದ ಎಷ್ಟು ಪ್ರಮಾಣದ ನೀರು ಮಲಪ್ರಭೆ ಸೇರುತ್ತಿದೆ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : 7 ಗಂಟೆಯಲ್ಲಿ 101 ಮಹಿಳೆಯರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ: ಸರ್ಜನ್ ವಿರುದ್ಧ ತನಿಖೆಗೆ ಆದೇಶ

Advertisement
Advertisement

Udayavani is now on Telegram. Click here to join our channel and stay updated with the latest news.

Next