ಪಣಜಿ : 2022 ರಲ್ಲಿ ನಡೆಯಲಿರುವ ಗೋವಾ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಚುನಾವಣಾ ಪೂರ್ವ ಸಿದ್ಧತೆಯ ಸಲುವಾಗಿ ರಾಷ್ಟ್ರವಾಧಿ ಕಾಂಗ್ರೇಸ್ ಪಕ್ಷದ ಗೋವಾ ಪ್ರಭಾರಿ ಹಾಗೂ ಮಾಜಿ ಕೇಂದ್ರ ಮಂತ್ರಿ ಪ್ರಫುಲ್ ಪಟೇಲ್ ಗೋವಾಕ್ಕೆ ಆಗಮಿಸಿದ್ದಾರೆ.
ಇದನ್ನೂ ಓದಿ : ಸೆನ್ಸೆಕ್ಸ್, ನಿಫ್ಟಿ ಸಾರ್ವಕಾಲಿಕ ದಾಖಲೆಯ ವಹಿವಾಟು; 58 ಸಾವಿರ ಗಡಿ ದಾಟಿದ ಸೆನ್ಸೆಕ್ಸ್
ಗೋವಾ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಗೋವಾದಲ್ಲಿ ರಾಷ್ಟ್ರವಾಧಿ ಪಕ್ಷದ ಸಂಘಟನಾ ದೃಷ್ಠಿಯಿಂದ ರಾಜ್ಯದಲ್ಲಿ ವಿವಿದೆಡೆ ಕಾರ್ಯಕರ್ತರ ಸಭೆ ನಡೆಯಲಿದೆ ಎನ್ನಲಾಗಿದೆ. ಇಷ್ಟೇ ಅಲ್ಲದೆಯೇ ರಾಷ್ಟ್ರವಾಧಿ ಕಾಂಗ್ರೇಸ್ ಮತ್ತು ಇತರ ಪಕ್ಷದಗಳ ಮೈತ್ರಿಗೆ ಸಂಬಂಧಿಸಿದಂತೆಯೂ ಚರ್ಚೆ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಗೋವಾಕ್ಕೆ ಆಗಮಿಸಿದ ಪ್ರಫುಲ್ ಪಟೇಲ್ ರವರನ್ನು ಪಕ್ಷದ ಪ್ರದೇಶಾಧ್ಯಕ್ಷ ಜುಜೆ ಫಿಲಿಪ್ ಡಿಸೋಜಾ, ಪಕ್ಷದ ರಾಜ್ಯ ಪ್ರಮುಖರಾದ ಪ್ರಫುಲ್ ಹೆದೆ, ಪ್ರತಿಮಾ ನಾಯ್ಕ ಸ್ವಾಗತ ಕೋರಿದರು.
ಇದನ್ನೂ ಓದಿ : ದೇಶದಲ್ಲಿ ದಾಖಲಾತಿ ಶುಲ್ಕ ಇಲ್ಲದೇ ಇರುವುದು ಈ ಬ್ಯಾಂಕ್ ನಲ್ಲಿ ಮಾತ್ರ..!?