Advertisement
ಅದಮ್ಯ ಇಚ್ಛಾಶಕ್ತಿ ಹಾಗೂ ಕಲಿಯಬೇಕೆನ್ನುವ ಹಂಬಲವಿದ್ದರೆ ಗಾನಸರಸ್ವತಿಯೇ ಕಂಠದಲ್ಲಿ ನೆಲೆಗೊಳ್ಳುತ್ತಾಳೆ ಎಂಬುದಕ್ಕೆ ಶಿವಶಂಕರ್ ಗೇರುಕಟ್ಟೆ ಸಾಕ್ಷಿ. ಇವರು ಗೇರುಕಟ್ಟೆ ನಿವಾಸಿ ಶಿವಣ್ಣ ಆಚಾರ್ಯ ಮತ್ತು ಜಯಶ್ರೀ ದಂಪತಿಯ ಪ್ರಥಮ ಪುತ್ರ.
ಹಾಡುವುದೇ ತನ್ನ ಜೀವಾಳ ಎನ್ನುವ ಶಿವಶಂಕರ್ ಕೊರಿಂಜದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸಗೈಯುತ್ತಲೇ ಸಂಗೀತದ ಮೇಲೆ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಭಾವಗೀತೆ, ದೇಶಭಕ್ತಿಗೀತೆ, ಜಾನಪದ ಗೀತೆ, ಚಿತ್ರಗೀತೆಗಳು ಇವರ ಕಂಠದಲ್ಲಿ ಸುಶ್ರಾವ್ಯವಾಗಿ ಮೂಡಿಬರುತ್ತಿದ್ದವು. ಶಾಲೆಯಲ್ಲಿ ಕೇವಲ ಹವ್ಯಾಸವಾಗಿ ಹಾಡುತ್ತಿದ್ದ ಇವರ ಹಾಡಿನ ಪಯಣ ಪ್ರತಿಭಾ ಕಾರಂಜಿಯಿಂದ ಪ್ರಾರಂಭವಾಯಿತು. ವಿದ್ಯಾರ್ಥಿ ದೆಸೆಯಲ್ಲೇ ಗಾಯನ ಸ್ಪರ್ಧೆಯಲ್ಲಿ ಹಲವಾರು ಬಹು ಮಾನಗಳನ್ನು ತನ್ನ ಮುಡಿಗೇರಿಸಿ ಕೊಂಡಿದ್ದರು.
Related Articles
Advertisement
ಪ್ರಶಸ್ತಿ, ಗೌರವ2017ರಲ್ಲಿ ರಂಗಗೀತೆ ವಿಭಾಗ ಮತ್ತು 2018ರ ಭಾವಗೀತೆ ವಿಭಾಗದಲ್ಲಿ ದ.ಕ. ಜಿಲ್ಲೆಯನ್ನು ಪ್ರತಿನಿಧಿಸಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ, 2016ರಲ್ಲಿ ಮಂಗಳೂರು ಆಕಾಶವಾಣಿ ನಡೆಸಿದ 92.7 ಬಿಗ್ ಎಫ್.ಎಂ. ಗೋಲ್ಡನ್ ವಾಯ್ಸ…ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆೆ. ಶಿವಶಂಕರ್ ಶ್ರೀ ಶಂಕರ ಚಾನೆಲ್ ನಡೆಸಿದ ಭಜನ್ ಸಾಮ್ರಾಟ್ ರಿಯಾಲಿಟಿ ಶೋದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಉಜಿರೆ ಮತ್ತು ಬೆಳ್ತಂಗಡಿ ಜೆ.ಸಿ.ಐ. ಘಟಕಗಳು ನಡೆಸಿದ ಸ್ಟಾರ್ ಸಿಂಗರ್ ಸ್ಪರ್ಧೆಗಳೆರಡರಲ್ಲೂ ಪ್ರಥಮ ಸ್ಥಾನ ಪಡೆದಿದ್ದಾರಲ್ಲದೆ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಯುವ ಸಾಂಸ್ಕೃತಿಕ ಸಾಧಕ ಪುರಸ್ಕಾರ, ಜೆ.ಸಿ.ಐ. ಘಟಕದಿಂದ ಸಮ್ಮಾನ, ಕಲಾಕಾರ್ ಸಮ್ಮಾನ, ಗಾನ ಕೋಗಿಲೆ ಪ್ರಶಸ್ತಿಯನ್ನು ಕೂಡ ಮುಡಿಗೇರಿಸಿಕೊಂಡಿದ್ದಾರೆ. ನೇತ್ರಾವತಿ ನದಿ ಉಳಿವಿಗಾಗಿ ರಚಿಸಿದ್ದ ನೇತ್ರೆ ಎಂಬ ನಾಟಕಕ್ಕೆ ಹಿನ್ನೆಲೆ ಗಾಯನ ನೀಡಿದ್ದಾರೆ. ಎಂಜಿನಿಯರ್ ಆಗಿ ಕರ್ತವ್ಯ
ಸಿವಿಲ್ ಎಂಜಿನಿಯರಿಂಗ್ ಮುಗಿಸಿ ಕಂಪೆನಿಯೊಂದರಲ್ಲಿ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿ ಮತ್ತು ಪ್ರವೃತ್ತಿಯನ್ನು ಸರಿದೂಗಿಸಿಕೊಂಡು ಹೋಗುತ್ತಿರುವ ಶಿವಶಂಕರ್ ಇದೀಗ ಪುತ್ತೂರಿನ ವಿದುಷಿ ಸುಚಿತ್ರಾ ಹೊಳ್ಳ ಇವರಿಂದ ಸಂಗೀತ ತರಬೇತಿ ಪಡೆಯುತ್ತಿದ್ದು ಸಂಗೀತ ಕ್ಷೇತ್ರದಲ್ಲಿ ಪ್ರವೀಣನಾಗಬೇಕೆಂಬ ಬಯಕೆ ಹೊಂದಿದ್ದಾರೆ. ವೇದಿಕೆ ಯೆಂದರೆ ಭಯ ಪಡುತ್ತಿದ್ದ ನನಗೆ ಮೈಕ್ ಹಿಡಿದಾಗ ಏನೋ ಹೊಸ ಚೈತನ್ಯ ಸೃಷ್ಟಿಯಾ ದಂತೆ ಭಾಸವಾಗುತ್ತದೆ. ಅದುವೇ ನನಗೆ ನಿರ್ಭಯವಾಗಿ ಹಾಡಲು ಧೈರ್ಯ ನೀಡುವುದು ಎನ್ನುತ್ತಾರೆ ಶಿವಶಂಕರ್.