Advertisement

“ಉದಯವಾಣಿ’ ದೀಪಾವಳಿ ಧಮಾಕಾ: ಅದೃಷ್ಟಶಾಲಿಗಳ ಆಯ್ಕೆ

10:24 AM Dec 23, 2017 | |

ಉಡುಪಿ: “ಉದಯವಾಣಿ’ – ದೀಪಾವಳಿ ಧಮಾಕಾ 2017ರ ಅದೃಷ್ಟ ಶಾಲಿಗಳ ಆಯ್ಕೆಯನ್ನು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ ಅವರು ಶುಕ್ರವಾರ ಮಣಿಪಾಲದ ಉದಯವಾಣಿ ಕಚೇರಿಯಲ್ಲಿ ನಡೆಸಿಕೊಟ್ಟರು. 

Advertisement

ಟಿ.ಎ. ಪೈಯವರು ಮಣಿಪಾಲದಲ್ಲಿ ಕೆನರಾ ಮಿಲ್ಕ್ ಯೂನಿಯನ್‌ ಆರಂಭಿಸಿದ್ದರು. ಇದೇ ಮುಂದೆ ಹಾಲು ಉತ್ಪಾದಕರ ಒಕ್ಕೂಟವಾಗಿ ಪರಿವರ್ತನೆಗೊಂಡಿತು. ಹೀಗಾಗಿ ಮಣಿಪಾಲ, ವಿಶೇಷವಾಗಿ ಟಿ.ಎ. ಪೈ ಅವರ ಕಾರಣದಿಂದ ಈ ಹುದ್ದೆಯಲ್ಲಿದ್ದೇನೆ. ಟಿ.ಎ. ಪೈ ಅವರು ಮಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸ್ಕ್ಯಾಡ್ಸ್‌ ಸ್ಥಾಪಿಸಿದ್ದರು. ಇಲ್ಲಿಯೂ ನನಗೆ 6 ವರ್ಷ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಅವಕಾಶ ದೊರಕಿದೆ ಎಂದು ರವಿರಾಜ ಹೆಗ್ಡೆ ಹೇಳಿದರು. 

ಬೆಳಗ್ಗೆ ಸೂರ್ಯೋದಯದ ಹೊತ್ತಿಗೆ ನಂದಿನಿ ಹಾಲು ಮತ್ತು ಉದಯವಾಣಿ ಪತ್ರಿಕೆ ಇಲ್ಲದೆ ಇದ್ದರೆ ಜನರಿಗೆ ಸಹಜ ಸ್ಥಿತಿ ಇರುವುದಿಲ್ಲ, ಸಜ್ಜನಿಕೆ, ಸ್ವಂತಿಕೆ, ಸುಂದರ ಪುಟವಿನ್ಯಾಸ, ಮಣ್ಣಿನ ಸೊಗಡನ್ನು ಉಳಿಸಿಕೊಂಡ ಉದಯವಾಣಿ ಈ ಕಾರಣಕ್ಕಾಗಿಯೇ ಮನೆಮಾತಾಗಿದೆ. ಜತೆಗೆ ವಿಶೇಷ ಪುರವಣಿಗಳನ್ನೂ ಕೊಟ್ಟು ಜನಜಾಗೃತಿ ಮೂಡಿಸುತ್ತಿದೆ. ಈಗ ದೀಪಾವಳಿ ಧಮಾಕಾ ಓದುಗರಿಗೆ ನೀಡಿದ ಇನ್ನೊಂದು ಕೊಡುಗೆಯಾಗಿದೆ ಎಂದು ಹೆಗ್ಡೆ ಮೆಚ್ಚುಗೆ ಸೂಚಿಸಿದರು. 

ಗ್ರಾಹಕರಿಗೆ ಖರೀದಿ, ವ್ಯಾಪಾರಸ್ಥರಿಗೆ ವ್ಯವಹಾರ ದೀಪಾವಳಿಯ ವೈಶಿಷ್ಟ. ಇದು ಮುಖ್ಯ ಹಬ್ಬಗಳಲ್ಲಿ ಒಂದಾಗಿದ್ದು ಹೊಸತನವನ್ನು ಕೊಡುವ ಹಬ್ಬವಾಗಿದೆ. ಈ ಬಾರಿಯ ಉದಯವಾಣಿಯ ದೀಪಾವಳಿ ಧಮಾಕಕ್ಕೆ ಕರ್ನಾಟಕ, ಮುಂಬಯಿ, ಮಧ್ಯಪ್ರಾಚ್ಯ ದೇಶಗಳಿಂದ ಹೆಚ್ಚು ಪ್ರವೇಶಗಳು ಬಂದಿವೆ. ಓದುಗರೊಂದಿಗೆ ಸಂವಹನ ಕಾಪಿಟ್ಟು ಕೊಳ್ಳುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು “ಉದಯವಾಣಿ’ ಸಿಇಒ ವಿನೋದ ಕುಮಾರ್‌ ಹೇಳಿದರು. 

ಸಂಪಾದಕ ಬಾಲಕೃಷ್ಣ ಹೊಳ್ಳ ಉಪಸ್ಥಿತರಿದ್ದರು. ಬಿಸಿನೆಸ್‌ ಆ್ಯಂಡ್‌ ಡೆವಲಪ್‌ಮೆಂಟ್‌ ಡಿಜಿಎಂ ಸತೀಶ್‌ ಶೆಣೈ ಸ್ವಾಗತಿಸಿದರು. ಸುದರ್ಶನ ಶೇರಿಗಾರ್‌ (ಜಿಎಂ ಫೈನಾನ್ಸ್‌ ಆ್ಯಂಡ್‌ಅಕೌಂಟ್ಸ್‌), ಪೃಥ್ವಿರಾಜ್‌ ಕವತ್ತಾರು (ಸಹಾಯಕ ಸಂಪಾದಕ ತರಂಗ), ರಾಧಾಕೃಷ್ಣ (ಮಾರ್ಕೆಟಿಂಗ್‌  ಹೆಡ್‌ ಉಡುಪಿ) ಅತಿಥಿಗಳನ್ನು ಸ್ವಾಗತಿಸಿದರು. ನ್ಯಾಶನಲ್‌ ಹೆಡ್‌ (ಮೆಗಜಿನ್ಸ್‌ ಆ್ಯಂಡ್‌ ಸ್ಪೆಶಲ್‌ ಇನೀಶಿಯೇಟಿವ್ಸ್‌) ಆನಂದ್‌ ಕೆ. ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Advertisement

27 ಜನರಿಗೆ ಬಹುಮಾನ
ಬಂಪರ್‌ ಬಹುಮಾನಿತರು ಸುಬ್ರಹ್ಮಣ್ಯ ಅಡಿಗ ಬಳ್ಕೂರು 
ಒಟ್ಟು  27 ಜನರಿಗೆ ಬಹುಮಾನ ವಿತರಿಸಲಾಗುತ್ತಿದೆ. ಇದರಲ್ಲಿ ಒಬ್ಬರಿಗೆ ಬಂಪರ್‌ ಬಹುಮಾನ, ಒಬ್ಬರಿಗೆ ಪ್ರಥಮ ಬಹುಮಾನ, ಇಬ್ಬರಿಗೆ ದ್ವಿತೀಯ ಬಹುಮಾನ, ಮೂವರಿಗೆ ತೃತೀಯ ಬಹುಮಾನ, 20 ಜನರಿಗೆ ಸಮಾಧಾನಕರ ಬಹುಮಾನ ನೀಡಲು ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಯಿತು.

ಬಹುಮಾನಿತರ ವಿವರ
ಬಂಪರ್‌ ಬಹುಮಾನ: ಬಿ. ಸುಬ್ರಹ್ಮಣ್ಯ ಅಡಿಗ ಬಳ್ಕೂರು, ಕುಂದಾಪುರ ಪ್ರಥಮ ಬಹುಮಾನ: ಎಚ್‌. ಕೃಷ್ಣ ಕಾಮತ್‌ ಸಾಲಿಕೇರಿ ಬ್ರಹ್ಮಾವರ ದ್ವಿತೀಯ ಬಹುಮಾನ (ಇಬ್ಬರಿಗೆ): ಎ.ಎಸ್‌. ಶೆಣೈ ಮುಂಬಯಿ, ಕೆ.ಪಿ. ವಿಜಯಕುಮಾರ್‌ ಕೆದೂರು ತೃತೀಯ ಬಹುಮಾನ (ಮೂವರಿಗೆ): ಶೈಲಜಾ ರಾಜು ಹೊಸಪೇಟೆ, ಶರತ್‌ ಅಳಿಯೂರು, ಉಷಾ ಕುಮಾರಿ ಪುತ್ತೂರು

ವಿಶೇಷ ಬಹುಮಾನಗಳು (20 ಮಂದಿಗೆ)
1. ಪೂರ್ಣಿಮಾ ಬಂಗೇರ ಸಾಲಿಗ್ರಾಮ, 2. ಎ. ಅಬೂಬಕರ್‌ ವಿಟ್ಲ, 3. ಕುಮಾರ ರಾ. ಜಂತಲಿ ಹುಬÛಳ್ಳಿ, 4. ಕೆ. ನಾಗೇಶ ಕಾಮತ್‌ ಕಟಪಾಡಿ, 5. ವೈ.ಎನ್‌. ರಮೇಶ್‌ ರಾಣೆಬೆನ್ನೂರು,  6. ವಿಟuಲ ಎಂ. ಶೆಟ್ಟಿ  ಬ್ರಹ್ಮಾವರ, 7. ಲೀನಾ ವೇಗಸ್‌ ಬಜಾಲ್‌, 8. ಕಲ್ಪನಾ ಶಿರಸಿ, 9. ರಜನಿ ಕುಮಾರಿ ಪಾಂಡೇಶ್ವರ, 10. ಜಿ.ಎಸ್‌. ಸಂಕಪ್ಪ ಬೆಂಗಳೂರು, 11. ಕೀರ್ತನಾ ಪ್ರಭು ಕಾರ್ಕಳ, 12. ಮದನ್‌ ಕುಮಾರ್‌ ಮೈಸೂರು, 13. ಸಂಧ್ಯಾ ಆರ್‌. ಶೆಟ್ಟಿ ಭಟ್ಕಳ, 14. ಎ.ಎಸ್‌. ಜಯನ್‌ ಅಜ್ಜಾವರ ಸುಳ್ಯ, 15. ನಿರ್ಮಲಾ ಹೆಗಡೆ ಯಲ್ಲಾಪುರ, 16. ರಾಮಚಂದ್ರ ಭಟ್‌ ಯು. ಕಾಸರಗೋಡು, 17. ಸವಿತಾ ನಿಟ್ಟೂರು, 18. ಶ್ರೀಲತಾ ಭಾಗವತ್‌ ಶಿವಮೊಗ್ಗ, 19. ಕೆ. ಜಗದೀಶ್‌ ಗೌಡ ಬಂಟ್ವಾಳ, 20. ವಿಥಿಕಾ ಶೆಟ್ಟಿ  ಮೂಳೂರು

Advertisement

Udayavani is now on Telegram. Click here to join our channel and stay updated with the latest news.

Next