Advertisement
ದಿನ ಪತ್ರಿಕೆಯೊಂದು ಇದೇ ಮೊದಲಬಾರಿ ಗೋದಲಿ ಫೋಟೋ ಸ್ಪರ್ಧೆಯನ್ನು ನಡೆಸಿರುವುದು ಅಭಿನಂದನೀಯ. ಇದು ಸಮುದಾಯವನ್ನು ಒಂದುಗೂಡಿಸುವ ಕ್ರಮವಾಗಿದೆ. ಇದಕ್ಕೆ ಜನರೂ ಉತ್ತಮವಾಗಿ ಸ್ಪಂದಿಸಿದ್ದಾರೆ. ಯೇಸುಕ್ರಿಸ್ತರು ಮನುಕುಲಕ್ಕೆ ಕೊಟ್ಟ ಪ್ರೀತಿಯ ಸಂದೇಶ ಸ್ಪರ್ಧೆಯ ಮೂಲಕ ಪ್ರಚುರಪಡಿಸಲಾಗಿದೆ ಎಂದು ಉಡುಪಿಯ ಪ್ರಧಾನ ಧರ್ಮಗುರು ವಂ| ವಲೇರಿಯನ್ ಮೆಂಡೋನ್ಸಾ ಬಹುಮಾನ ವಿತರಿಸಿ ಮೆಚ್ಚುಗೆ ಸೂಚಿಸಿದರು.
‘ಉದಯವಾಣಿ’ಗೆ 50 ವರ್ಷಆಗುತ್ತಿರುವ ಸಂದರ್ಭ ದಿನ ಪತ್ರಿಕೆಗಳ ಲ್ಲಿಯೇ ಮೊದಲ ಬಾರಿ ಗೋದಲಿಸ್ಪರ್ಧೆಯನ್ನು ನಡೆಸಲು ನಿರ್ಧರಿಸಿದೆವು. ಕ್ರೈಸ್ತ ಸಮುದಾಯವು ಒಟ್ಟು ಸಮಾಜದ ಆಧಾರಸ್ತಂಭವಿದ್ದಂತೆ. ನಮ್ಮ ಪತ್ರಿಕೆ ಬೆಳೆಯುವಲ್ಲಿಯೂ ಸಮುದಾಯದ ಕೊಡುಗೆ ಅಪಾರವಿದೆ. ನಾವು ಸ್ಪರ್ಧೆಯನ್ನು ನಡೆಸಲು ನಿರ್ಧರಿಸಿದಾಗ ಮಂಗಳೂರು ಮತ್ತು ಉಡುಪಿ ಬಿಷಪ್ ಅವರು ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಸ್ಪರ್ಧೆಗೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆಗಳು ಬಂದವು. ಮುಂದಿನ ವರ್ಷ ಇನ್ನಷ್ಟು ಕ್ರಿಯಾಶೀಲವಾಗಿ ಸ್ಪರ್ಧೆಯನ್ನು ನಡೆಸಲಾಗುವುದು ಎಂದು ಅಧ್ಯಕ್ಷತೆ ವಹಿಸಿ ಪ್ರಸ್ತಾವನೆಗೈದ ಮಣಿಪಾಲ್ ಮೀಡಿಯ ನೆಟ್ವರ್ಕ್ ಲಿ. ಸಿಇಒ ವಿನೋದಕುಮಾರ್ ಹೇಳಿದರು.
Related Articles
Advertisement
ಬಹುಮಾನಿತರ ಪರವಾಗಿ ಮೂಡಬಿದಿರೆ ತೋಡಾರಿನ ಜಾನ್ ಮಿರಾಂಡ ಮತ್ತು ಮಂಗಳೂರು ಮಾರ್ನಮಿಕಟ್ಟೆಯ ಮೇರಿ ಅವರು ಮಾತನಾಡಿ ‘ಉದಯವಾಣಿ’ ನಡೆಸಿದ ಸ್ಪರ್ಧೆಯಿಂದ ಗೋದಲಿ ನಿರ್ಮಾಣದಲ್ಲಿ ಇನ್ನಷ್ಟು ಸೃಜನಶೀಲತೆಯನ್ನು ಕಾಪಿಟ್ಟುಕೊಳ್ಳುವಂತಾಯಿತು. ಹಿಂದಿನಿಂದಲೂ ಉದಯವಾಣಿಯನ್ನು ಓದಿ ಬೆಳೆದಿದ್ದೇವೆ. ಈಗ ಈ ಹೊಸ ಉಪಕ್ರಮ ಶ್ಲಾಘನೀಯ ಎಂದರು.
ಉದಯವಾಣಿ ಸಂಪಾದಕ ಅರವಿಂದ ನಾವಡ ವಿಜೇತರ ಪಟ್ಟಿ ವಾಚಿಸಿದರು. ಉಪಸಂಪಾದಕ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಉಡುಪಿ ಜಾಹೀರಾತು ವಿಭಾಗದ ಮುಖ್ಯಸ್ಥ ರಾಧಾಕೃಷ್ಣ ಕೊಡವೂರು ವಂದಿಸಿದರು.
ಬಹುಮಾನಿತರುಪ್ರಥಮ: ರವಿನ್ ಡಿ’ಸೋಜಾ, ಸಳ್ವಾಡಿ ಕುಂದಾಪುರ.
ದ್ವಿತೀಯ: ಜಾನ್ ಮಿರಾಂಡ, ತೋಡಾರು, ಮೂಡಬಿದಿರೆ, ಪಾವ್É ಲೋಬೋ, ಮೂಡಬಿದಿರೆ.
ತೃತೀಯ: ಸನ್ನಿ ಮಾರ್ನಮಿಕಟ್ಟೆ ಮಂಗಳೂರು, ಪ್ರಮೀಳಾ ಡಿ’ಕುನ್ನಾ ಮಂಚಿ ಬಂಟ್ವಾಳ, ಹ್ಯಾನ್ಸೆಲ್ ಡಿ’ಸೋಜಾ ನೇಜಾರು ಉಡುಪಿ.
ಪ್ರೋತ್ಸಾಹಕ: ಜಾನ್ಸನ್ ರೇಗೋ ಕುಡುಪು ಮಂಗಳೂರು, ಚಾರ್ಲಿ ಲೋಬೋ ಮೊಡಂಕಾಪು ಬಂಟ್ವಾಳ, ಜೆನ್ನಿಫರ್ ಡಿ’ಸೋಜಾ ಪೇತ್ರಿ, ಚೇರ್ಕಾಡಿ, ಚಂದ್ರಶೇಖರ್/ಪ್ರಕಾಶ್ ಡೆ’ಸಾ ಮಂಗಳೂರು.