“ಉದಯವಾಣಿ’ ಪತ್ರಿಕೆಯು ಉದಯ ಕಿಚನೆಕ್ಸ್ಟ್ ಸಹಯೋಗದಲ್ಲಿ ಆಯೋಜಿಸಿದ “ಮನೆ ಮನೆಯಲ್ಲಿ ಯಶೋದಾ ಕೃಷ್ಣ 2024′ ಫೋಟೊ ಸ್ಪರ್ಧೆಯ ವಿಜೇತರಿಗೆ ಡಯಾನಾ ಹೊಟೇಲ್‌ನ ಸಭಾಂಗಣದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಬಹುಮಾನ ವಿತರಣೆ ಅವರು ಮಾತನಾಡಿದರು.
Advertisement
ಪತ್ರಿಕೆಯು 6 ವರ್ಷಗಳಿಂದ ಇಂತಹ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರು ವುದು ನಿಜಕ್ಕೂ ಶ್ಲಾಘನಾರ್ಹ. ಇಂತಹ ಕಾರ್ಯಕ್ರಮಗಳಿಂದ ಮಕ್ಕಳಲ್ಲೂ ಸ್ಪರ್ಧಾತ್ಮಕ ಮನೋಭಾವ ಬರಲು ಸಾಧ್ಯವಿದೆ ಎಂದರು.
ಚೇರ್ಕಾಡಿಯ ರಾಷ್ಟ್ರೋತ್ಥಾನ ಪ.ಪೂ.ಕಾಲೇಜಿನ ಪ್ರಾಂಶುಪಾಲೆ ಭಾಗ್ಯಶ್ರೀ ಐತಾಳ್ ಕರಂಬಳ್ಳಿ ಮಾತನಾಡಿ, ಪತ್ರಿಕೆ ಆಯೋಜಿಸುತ್ತಿರುವ ಯಶೋದಾ ಕೃಷ್ಣ ಕಾರ್ಯಕ್ರಮ ಮಕ್ಕಳಲ್ಲಿ ಸಂಸ್ಕೃತಿಯ ಛಾಪು, ಧಾರ್ಮಿಕ ಮನೋಭಾವ ಮೂಡಿಸುತ್ತದೆ. ಕೃಷ್ಣ ತಾಯಿಯ ಮಮತೆಯಾಗಿ ಜಗತ್ತಿಗೆ ಪರಿಚಿತ. ಉತ್ತಮ ಸ್ನೇಹಿತನೂ ಹೌದು. ಯಶೋದೆ ಪ್ರೀತಿಯ ರೂಪ. ಕೃಷ್ಣನ ರೂಪವನ್ನು ಮನೆಗಳಲ್ಲಿ ಕಾಣುವಂತಹ ಅವಕಾಶ “ಉದಯವಾಣಿ’ಯಿಂದ ಓದುಗರಿಗೆ ಪ್ರಾಪ್ತವಾಗಿದೆ ಎಂದರು. ಭಾರತೀಯ ಸಂಸ್ಕೃತಿ ವಿಶ್ವದಲ್ಲೇ ಉನ್ನತ ವಾದ ಸಂಸ್ಕೃತಿಯಾಗಿದೆ. ಸಂಸ್ಕೃತಿಯನ್ನು ಸಂಸ್ಕಾರವನ್ನಾಗಿಸುವುದು ತಂದೆ-ತಾಯಿಯರ ಕರ್ತವ್ಯವಾಗಿದೆ. ಸಂಸ್ಕಾರ ಎಂದರೆ ಒಂದು ವಸ್ತುವನ್ನು ನಾವು ಚೆಂದಗಾಣಿಸುವುದು. ಸಂಸ್ಕಾರ, ಸಂಸ್ಕೃತಿಯನ್ನು ಮಕ್ಕಳಿಗೆ ಬಾಲ್ಯದಲ್ಲೇ ನೀಡಬೇಕು. ತಾಯಿ ಮಗುವಿಗೆ ನೀಡುವ ಪ್ರೀತಿ, ಸಂಸ್ಕಾರದಿಂದ ಮಕ್ಕಳಲ್ಲಿ ಉತ್ತಮ ನಡವಳಿಕೆ ಬರಲು ಸಾಧ್ಯ. ಆಚರಣೆ, ಸಂಪ್ರದಾಯದ ಹಿಂದಿನ ಉದ್ದೇಶಗಳನ್ನು ಮಕ್ಕಳಿಗೆ ತಿಳಿಸಬೇಕು. ಮಕ್ಕಳಿಗೆ ಸಂಪ್ರದಾಯ, ಸಂಸ್ಕೃತಿ ಆಚರಣೆಗಳ ಮೌಲ್ಯವನ್ನು ಎಳವೆಯಲ್ಲೇ ತಿಳಿಸಿ ಅವರನ್ನು ಉತ್ತಮ ಪ್ರಜೆಗಳನ್ನಾಗಿಸಬೇಕು ಎಂದರು.
Related Articles
Advertisement
“ಉದಯವಾಣಿ’ಯ ಮ್ಯಾಗಝಿನ್ ಮತ್ತು ಸ್ಪೆಷಲ್ ಇನೀಶಿಯೇಟಿವ್ಸ್ ಉಪಾ ಧ್ಯಕ್ಷ ರಾಮಚಂದ್ರ ಮಿಜಾರು ಸ್ವಾಗತಿಸಿ, ಯಶೋದಾ ಕೃಷ್ಣ ಚಿತ್ರಗಳು ತಾಯಿ-ಮಕ್ಕಳ ಸಂಬಂಧಗಳನ್ನು ಬೆಸೆಯುತ್ತದೆ. ಈ ಮೂಲಕ ಪರಂಪರೆ ಹಾಗೂ ಸಂಪ್ರದಾಯಗಳನ್ನು ಮಕ್ಕಳು ತಿಳಿದುಕೊಳ್ಳಲು ಸಾಧ್ಯವಿದೆ ಎಂದರು.
ವಿದುಷಿ ಲಕ್ಷ್ಮೀ ಗುರುರಾಜ್ ಮತ್ತು ವಿದುಷಿ ಪವನ ಬಿ. ಆಚಾರ್ ತೀರ್ಪುಗಾರರಾಗಿ ಸಹಕರಿಸಿದ್ದರು. ಉಡುಪಿ ಮಾರುಕಟ್ಟೆ ವಿಭಾಗದ ರೀಜನಲ್ ಮ್ಯಾನೇಜರ್ ರಾಧಾಕೃಷ್ಣ ಕೊಡವೂರು ಬಹುಮಾನಿತರ ಪಟ್ಟಿ ವಾಚಿಸಿದರು. ಸ್ಥಾನೀಯ ಸಂಪಾದಕ ಕೃಷ್ಣ ಭಟ್ ಅಳದಂಗಡಿ ವಂದಿಸಿದರು. ಹಿರಿಯ ವಾಣಿಜ್ಯ ವರದಿಗಾರ ಎಸ್.ಜಿ. ನಾಯ್ಕ ಸಿದ್ಧಾಪುರ ನಿರೂಪಿಸಿದರು.
ಬಹುಮಾನ ವಿಜೇತರುಶ್ರೀನಿಧಿ-ಶ್ರೀರಾಮ ಪೆರ್ಣಂಕಿಲ (ಪ್ರ.),ಸ್ವಾತಿ-ಲಕ್ಷ್ ಹುಲುವಳ್ಳಿ ಬ್ರಹ್ಮಾವರ, ವರ್ಷಾ- ವಿಯಾಂಶ್ ಮಲ್ಪೆ, ಸೌಮ್ಯಾ-ಅಥರ್ವ ಮಂಗಳೂರು(ದ್ವಿ.), ಸ್ವಾತಿ-ದುವಾನ್ ಉರ್ವ, ಚೈತ್ರಾ-ಆದಿನಿ ಕಾರ್ಕಳ, ಧನಶ್ರೀ-ಮಾಧವಿ ಮಂಗಳೂರು, ರೂಪಾ-ರೀತ್ ಕಡಬ, ಪೂಜಾ-ತ್ರಿಷಿ ಕಟೀಲು, ವಿನುತಾ-ಅಗಸ್ತ್ಯ ಅಜ್ಜರಕಾಡು (ತೃ), ಚೈತ್ರಾ-ರಕ್Ò ಉಳ್ಳಾಲ, ಸುಪ್ರೀತಾ-ಅವ್ಯನ್ ಕೋಟೇಶ್ವರ, ಸುಷ್ಮಾ – ಆರ್ಯ ಪುತ್ತೂರು, ಕವನಾ-ಅಕ್ಷೋಭ್ಯ ಕುಂಜಿಬೆಟ್ಟು, ಚಿತ್ರಾ-ಸಾಯಿವಿಷಿ¡ ಹಿರಿಯಡಕ, ಸೌಮ್ಯಶ್ರೀ-ಕೌಶಿ ಎರ್ಮಾಳು, ಸ್ವಾತಿ-ರಿತನ್ಯಾ ನಿಟ್ಟೂರು, ಶ್ವೇತಾ-ವ್ಯೋಮ್ ಸಿದ್ದಾಪುರ, ಶಿಬಾನಿ-ರುವಾನ್ ಬಿಜೈ, ನಿಧಿ-ಏಕಾಂಶ ಬೈಂದೂರು, ಮಲ್ಲಿಕಾ-ಕಿಯಾಂಶ್ ಸುಬ್ರ ಹ್ಮಣ್ಯ, ವಿಜಯಲಕ್ಷ್ಮೀ -ಆದ್ರಿತಿ ಮಂಗಳೂರು (ಪ್ರೋತ್ಸಾಹಕರ). ಮೊದಲ ಬಾರಿಗೆ ಪತ್ರಿಕೆಗೆ ಚಿತ್ರ ಕಳುಹಿಸಿ ಪ್ರಥಮ ಬಹುಮಾನ ಲಭಿಸಿರುವುದಕ್ಕೆ ಖುಷಿಯಿದೆ. ಮಗುವಿನ ಜತೆಗೆ ನಾನೂ ತಯಾ ರಾಗಬೇಕಿತ್ತು. ಬಳಿಕ ಫೋಟೋ ತೆಗೆದು ಕಳುಹಿಸಿದ್ದೇನೆ. ಮಕ್ಕಳು ಕೃಷ್ಣನಂತೆ, ತಾಯಿ ಯಶೋದೆಯಂತೆ ಕಾಣಲು ಪತ್ರಿಕೆ ಉತ್ತಮ ವೇದಿಕೆ ಒದಗಿಸಿದೆ. -ಶ್ರೀನಿಧಿ, ಪೆರ್ಣಂಕಿಲ ನಮ್ಮದು ಗ್ರಾಮಾಂತರ ಭಾಗದ ಪ್ರದೇಶವಾಗಿದೆ. ಆದರೂ 6 ಸಾವಿರಕ್ಕೂ ಅಧಿಕ ಚಿತ್ರಗಳಲ್ಲಿ ನಮ್ಮದು ಆಯ್ಕೆಯಾಗಿರುವುದು ನಿಜಕ್ಕೂ ಅಚ್ಚರಿ ಅನಿಸುತ್ತಿದೆ. ನಮಗೆ ಇದೊಂದು ಅವಿಸ್ಮರಣೀಯ ಕ್ಷಣವೂ ಆಗಿದೆ.
-ಮಲ್ಲಿಕಾ, ಸುಬ್ರಹ್ಮಣ್ಯ ತಾಯಿ-ಮಗುವನ್ನು ಜತೆಯಲ್ಲಿರಿಸಿ ಕೊಂಡು ಫೋಟೋಶೂಟ್ ಮಾಡಲು ಬಹಳಷ್ಟು ಕಷ್ಟಪಟ್ಟಿದ್ದೆವು. ಇದಕ್ಕಾಗಿ ಯೋಜನೆ ಮಾಡಿ ಸೂಕ್ತ ರೀತಿಯಲ್ಲಿ ಎಲ್ಲ ತಯಾರಿಗಳನ್ನು ಮಾಡಿಕೊಂಡಿರುವುದರಿಂದ ಬಹುಮಾನ ಲಭಿಸಲು ಸಹಾಯವಾಯಿತು.
-ವಿನುತಾ, ಅಜ್ಜರಕಾಡು ಪತ್ರಿಕೆಯಲ್ಲಿನ ಜಾಹೀರಾತು ಕಂಡು ಚಿತ್ರವನ್ನು ಕಳಿಸಿಕೊಟ್ಟೆವು. ಕೆಲವು ದಿನಗಳ ಬಳಿಕ ನಮ್ಮ ಚಿತ್ರ ಪತ್ರಿಕೆಯಲ್ಲಿ ಪ್ರಕಟಗೊಂಡಿರುವುದು ಕಂಡು ಅಚ್ಚರಿ ಜತೆಗೆ ಖುಷಿಯೂ ಆಯಿತು.
-ಶಿಬಾನಿ, ಮಂಗಳೂರು ಪತ್ರಿಕೆಗೆ ಈ ಹಿಂದೆಯೂ ಚಿತ್ರಗಳನ್ನು ಕಳುಹಿಸಿದ್ದೆ. ಆದರೆ ಪ್ರಕಟಗೊಂಡಿರಲಿಲ್ಲ. ಈ ಬಾರಿ ಬಹುಮಾನ ಸಿಕ್ಕಿರುವುದು ಖುಷಿ ನೀಡಿದೆ. ಇದೊಂದು ಉತ್ತಮ ಅವಕಾಶ .
-ಅನಿತಾ, ಹಿರಿಯಡಕ ಪತ್ರಿಕೆಯಲ್ಲಿ ಚಿತ್ರ ಕಂಡು ನಮ್ಮಷ್ಟೇ ನಮ್ಮ ತಂದೆ-ತಾಯಿ ಕೂಡ ಖುಷಿ ಪಟ್ಟಿದ್ದಾರೆ. ಅಲ್ಲದೆ ಹಲವಾರು ಮಂದಿ ನಮಗೆ ಶುಭಾಶಯ ತಿಳಿಸಿದ್ದು, ನಮಗೆ ಮತ್ತಷ್ಟು ಸಂತಸ ತಂದಿದೆ.
-ವರ್ಷಾ, ಮಲ್ಪೆ ಮಗು ಪ್ರಶಸ್ತಿ ತೆಗೆದುಕೊಳ್ಳುವುದನ್ನು ನೋಡುವುದೇ ಸಂತಸ. ಬಹುಮಾನ ಸಿಗುವ ನಿರೀಕ್ಷೆ ಇರಲಿಲ್ಲ. ಆದರೆ ಬಹುಮಾನ ಬಂದಿರುವುದಕ್ಕೆ ಮತ್ತಷ್ಟು ಸಂತೋಷಗೊಂಡಿದ್ದೇನೆ. -ಸ್ವಾತಿ, ಬ್ರಹ್ಮಾವರ