Advertisement
“ಖಾಸಗಿ ಭೂಮಿಗಳಲ್ಲಿ ಶ್ರೀಗಂಧ ಮರಗಳನ್ನು ಬೆಳೆಸಲು ಉತ್ತೇಜನ ನೀಡಲೆಂದೇ ಶ್ರೀಗಂಧದ ಮರಗಳ ಕಡಿತ, ಸಾಗಣೆ ಮತ್ತು ಮಾರಾಟ ಪ್ರಕ್ರಿಯೆಗಳನ್ನು ಸರಳೀಕರಿಸಲು ಶ್ರೀಗಂಧ ನೀತಿಯನ್ನು ರೂಪಿಸ ಲಾಗುವುದು’ ಎಂದು ಮುಖ್ಯ ಮಂತ್ರಿ ಬೊಮ್ಮಾಯಿ ಅವರು 2022-23ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದರು.
Related Articles
Advertisement
ಪ್ರದೇಶಗಳ ಘೋಷಣೆ :
ರಾಜ್ಯದಲ್ಲಿ ಹೊಸದಾಗಿ ಉತ್ತಾರೆ ಗುಡ್ಡ ವನ್ಯಜೀವಿ ಧಾಮ, ಬಂಕಾಪುರ ವನ್ಯಜೀವಿ ಧಾಮ, ಅರಸೀಕೆರೆ ಕರಡಿ ಧಾಮ, ಹಿರೆಸೂಲೇಕೆರೆ ಕರಡಿ ಮೀಸಲು ಪ್ರದೇಶ, ಚಿಕ್ಕಸಂಗಮ ಪಕ್ಷಿ ಸಂರಕ್ಷಣ ಪ್ರದೇಶ, ಮುಂಡಿಗೆ ಕೆರೆ ಮತ್ತು ಪಕ್ಷಿ ಸಂರಕ್ಷಣ ಪ್ರದೇಶ, ಬೋನಾಳ ಪಕ್ಷಿ ಸಂರಕ್ಷಣ ಮೀಸಲು ಪ್ರದೇಶಗಳನ್ನು ಹೊಸ ಸಂರಕ್ಷಿತ ಪ್ರದೇಶಗಳೆಂದು ಘೋಷಿಸುವ ಪ್ರಸ್ತಾವಗಳಿಗೆ ಸಂಪುಟ ಸಮ್ಮತಿಸಿದೆ.
ಡಿ.19ರಿಂದ ಅಧಿವೇಶನ :
ಡಿಸೆಂಬರ್ 19ರಿಂದ 30ರ ವರೆಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನ ಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನ ನಡೆಸಲು ಸಚಿವ ಸಂಪುಟ ತೀರ್ಮಾನಿಸಿದೆ.
ಜಿಲ್ಲಾ ವರ್ಗಾವಣೆಗೆ ಒಪ್ಪಿಗೆ:
ರಾಜ್ಯದ ಎಲ್ಲಾ ಸರಕಾರಿ ಇಲಾಖೆ ಗಳ ಸಿ ಮತ್ತು ಡಿ ದರ್ಜೆ ನೌಕರರು ಒಂದೇ ಕಡೆ ಕನಿಷ್ಠ 7 ವರ್ಷ ಸೇವೆ ಸಲ್ಲಿಸಿದ್ದರೆ ಪತಿ- ಪತ್ನಿ ಪ್ರಕರಣದಲ್ಲಿ ಅಂತರ್ ಜಿಲ್ಲಾ ವರ್ಗಾ ವಣೆಗೆ ಅವಕಾಶ ಮಾಡಿ ಕೊಡಲು ಸಚಿವ ಸಂಪುಟ ಸಭೆ ತೀರ್ಮಾನಿ ಸಿದೆ. ಶಿಕ್ಷಣ ಇಲಾಖೆ ಯಲ್ಲಿ ಕನಿಷ್ಠ 5 ವರ್ಷ, ಗೃಹ ಇಲಾಖೆಯಲ್ಲಿ 7 ವರ್ಷ ಒಂದೇ ಕಡೆ ಸೇವೆ ಸಲ್ಲಿಸಿದ ಅನಂತರ ಪತಿ-ಪತ್ನಿ ಪ್ರಕರಣದಲ್ಲಿ ವರ್ಗಾ ವಣೆಗೆ ಅವಕಾಶವಿತ್ತು.