Advertisement

ಬರಹಗಾರ್ತಿಯಾಗಿಸಿದ ಪತ್ರಿಕೆ

10:09 AM Jan 19, 2020 | mahesh |

ಉದಯವಾಣಿ ಪತ್ರಿಕೆಯನ್ನು ಬಹಳ ವರ್ಷಗಳಿಂದ ಓದುತ್ತಿದ್ದೇನೆ. ನನಗೆ ಇಷ್ಟವಾಗಲು ಹಲವು ಕಾರಣಗಳಿವೆ. ಉದಯವಾಣಿಯ ಅಕ್ಷರ ಹಾಗೂ ಪುಟ ವಿನ್ಯಾಸ ಉಳಿದೆಲ್ಲ ಪತ್ರಿಕೆಗಳಿಗಿಂತಲೂ ಆಕರ್ಷಕ. ಕನ್ನಡ ಭಾಷೆಯ ಯಾವುದಾ ದರೂ ಪದ ಬರೆಯುವಾಗ ಅದರ ಸರಿ ಯಾದ ರೂಪ ಏನು ಎಂಬ ಬಗ್ಗೆ ಗೊಂದಲ ಬಂದಾಗ ಉದಯವಾಣಿಯನ್ನು ಪರಾಮರ್ಶಿಸುತ್ತಿದ್ದೆ. ಯಾಕೆಂದರೆ ಬಳಸುವ ಪದಗಳು ಭಾಷಾ ಶುದ್ಧತೆಯಿಂದ ಕೂಡಿರುತ್ತವೆ.

Advertisement

ನಾನು ಮೊದಲು ಪುಸ್ತಕಗಳ ಜತೆ ಉದಯವಾಣಿಯನ್ನೂ ಓದುತ್ತಿದ್ದೆ. ವಿದ್ಯಾರ್ಥಿಯಾಗಿದ್ದಾಗ ಪ್ರಬಂಧ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನಗಳಿಸುತ್ತಿದ್ದೆ. ಆದರೆ ಇತರ ರೀತಿಯ ಸಾಹಿತ್ಯದ ಬರವ ಣಿಗೆ ನನಗೆ ಅಪರಿಚಿತವಾಗಿತ್ತು. ಅಂತಹ ಬರಹಕ್ಕೆ ನಾನು ಪ್ರಯತ್ನಿ ಸಿಯೇ ಇರಲಿಲ್ಲ. ನನ್ನನ್ನು ಬರಹ ಲೋಕಕ್ಕೆ ಕೈಹಿಡಿದು ನಡೆಸಿದ್ದು ಉದಯವಾಣಿ. ಸಾಪ್ತಾಹಿಕ ಸಂಪದದಲ್ಲಿ “ನೀವೂ ಬರೆಯಿರಿ’ ಎಂಬ ಸೂಚನೆಯನ್ನು ಓದಿ (ಅದರಲ್ಲಿ ತಿಳಿಸಿದ ಮಾದರಿಯಲ್ಲಿ) ನಾನು ಬರೆದ ಹಾಗೂ ಕಳಿಸಿದ ಪ್ರಥಮ ಬರಹ ಒಂದು ಅತಿ ಸಣ್ಣ ಕತೆ ಪ್ರಕಟ ವಾಯಿತು. ನನಗಾದ ಖುಷಿ ಅಷ್ಟಿಷ್ಟಲ್ಲ. ಅದಕ್ಕೆ ಸಂಭಾವನೆಯೂ ಬಂತು. ನಾನೂ ಬರೆಯಬಲ್ಲೆ ಎಂಬ ನಂಬಿಕೆ ನನ್ನಲ್ಲಿ ಮೂಡಿಸಿದ್ದು ಉದಯವಾಣಿ. ಅನಂತರ ಮಹಿಳಾ ಸಂಪದ, ಸಾಪ್ತಾಹಿಕ, ಚಿನ್ನಾರಿ, ಅವಳು, ಸುದಿನ, ಜೋಶ್‌ ಹೀಗೆ ವಿವಿಧ ಪುರವಣಿಗಳಿಗೆ ಬರಹಗಳನ್ನು ಕಳಿಸುತ್ತಾ ಬಂದೆ. ಹೆಚ್ಚಿನ ಎಲ್ಲವೂ ಪ್ರಕಟವಾದವು. ಈಗ ನಾನು ವಿವಿಧ ಪತ್ರಿಕೆಗಳಿಗೆ ಬರೆಯುತ್ತೇನೆ. ಸಂಪಾದಕೀಯ ಪುಟದಲ್ಲೂ ನನ್ನ ಬರಹಗಳು ಪ್ರಕಟವಾದವು. ಮಹಿಳಾ ಸಂಪದದಲ್ಲಿ ಒಂದು ಅಂಕಣ ಬರೆಯುವ ಅವಕಾಶವನ್ನೂ ಪತ್ರಿಕೆ ನನಗೆ ನೀಡಿತು. ವಿವಿಧ ರೀತಿಯ ಬರಹಗಳ ನನ್ನ ಆರು ಪುಸ್ತಕಗಳು ಹೊರಬಂದಿವೆ. ಅಂದರೆ ನಾನು ಸಾಹಿತ್ಯ ಲೋಕ ಪ್ರವೇಶಿಸಲು ಕಾರಣವಾದ, ಪ್ರೇರಣೆಯಾದ ಉದಯವಾಣಿ ನನ್ನನ್ನು ಒಂದು ಲೇಖಕಿಯಾಗುವ ಮಟ್ಟಿಗೆ ಬೆಳೆಸಿದೆ. ನನ್ನ ಬಿಡುವಿನ ವೇಳೆಯನ್ನು ಮೌಲ್ಯಯುತವಾಗಿಸಿದ, ಬರಹದ ಮೂಲಕ ಹೊಸದೊಂದು ಲೋಕವನ್ನು ಪ್ರವೇಶಿಸಲು ಅನುವು ಮಾಡಿ ಕೊಟ್ಟ ಉದಯವಾಣಿಯನ್ನು ಮರೆಯಲು ಸಾಧ್ಯವಿಲ್ಲ. ಹೊಸ ಬರಹ ಗಾರರಿಗೆ ಅವಕಾಶ ನೀಡಿ, ಬೆಳೆಸಿದ ಪತ್ರಿಕೆಗೆ ತುಂಬಾ ಧನ್ಯವಾದಗಳು. ಮುಂದೆ ಇನ್ನಷ್ಟೂ ಜನರನ್ನು ಆಕರ್ಷಿಸಿ, ಬೆಳೆಯಲಿ, ಬೆಳಗಲಿ.

ಜೆಸ್ಸಿ ಪಿ.ವಿ. ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next