Advertisement
ಶಿವಾಜಿ ಸುರತ್ಕಲ್ 2020 ಒಂದು ಅದ್ಭುತ ಥ್ರಿಲ್ಲರ್ ಸಿನಿಮಾ. ಯಾವುದೇ ರೀತಿ ಆಡಂಬರವನ್ನು ಹೊಂದಿಲ್ಲ.
Related Articles
Advertisement
ಚಿತ್ರದ ನಿರ್ದೇಶಕ ಆಕಾಶ್ ಶ್ರೀವತ್ಸ ಅವರು ಈ ಚಿತ್ರಕ್ಕಾಗಿ ಉತ್ತಮ ಮತ್ತು ಆಸಕ್ತಿದಾಯಕ ಚಿತ್ರಕಥೆ ಮತ್ತು ಸೂಕ್ತ ತಾರಾಗಣವನ್ನು ಆಯ್ಕೆ ಮಾಡಿದ್ದಕ್ಕಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ, ಕನ್ನಡ ಚಿತ್ರ ರಂಗದ ಮೇರು ನಟ ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಆರೋಹಿ ನಯರನ್ ಹಾಗೂ ಇತರರು ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದಾರೆ.
ಸಿನೆಮಾದ ಕಥೆಯಲ್ಲಿ ಆಳ ವಿಸ್ತಾರ ವಿದ್ದರೂ ಅದನ್ನು ಪ್ರಸ್ತತ ಪಡಿಸಿದ ರೀತಿ ಅದ್ಭುತ. ಸರಳ ಸುಂದರ ಕಥೆ. ಸಿನೆಮಾ ಹತ್ತಿರವಾಗುವುದು ಅದರ ದೃಶ್ಯಕಾವ್ಯಗಳಲ್ಲಿ. ಸಿನೆಮಾದಲ್ಲಿ ಬರುವ ಪ್ರತಿಯೊಂದು ದೃಶ್ಯವೂ ಕೂಡ ಮನೋಹರವಾಗಿದೆ. ಈ ಕಥೆಯು ಮಡಿಕೇರಿ ಸಮೀಪದ ರಣಗಿರಿಯ ರೆಸಾರ್ಟಲ್ಲಿ ಜನರ ಗುಂಪಿನ ಸುತ್ತ ಸುತ್ತುತ್ತದೆ, ರೆಸಾರ್ಟ್ ನಲ್ಲಿ ದೃಶ್ಯಗಳನ್ನು ವೀಕ್ಷಿಸಲು ಸ್ವಲ್ಪ ಹೆಚ್ಚು ಧೈರ್ಯ ಬೇಕಾಗುತ್ತದೆ. ಕ್ರೈಮ್ ಬೇಸ್ ಸಿನೆಮಾ ಆಗಿರುವುರಿಂದ ಈ ಸಿನೆಮಾದ ಸಖತ್ ಥ್ರಿಲ್ ಕೊಡುವುದರೊಂದಿಗೆ, ಪ್ರಕರಣಗಳನ್ನು ಭೇಧಿಸುವ ಮುಳ್ಳನ್ನು ಮುಳ್ಳಿನಿಂಧಲೇ ತೆಗೆಯಬೇಕು ಎಂಬ ನೀತಿಯೊಂದಿಗೆ ನಡೆಯುವ ಕಥಾ ನಾಯಕನ ಪಾತ್ರ ಮತ್ತದರ ಚಿತ್ರಣ ಬಹಳ ಚೆನ್ನಾಗಿ ಮೂಡಿ ಬಂದಿದೆ.
ಚಿತ್ರಕಥೆ ಸಹಜವಾಗಿ ಹಾಗೂ ಸಹಜತೆಯಲ್ಲಿಯೂ ವಿಶೇಷತೆ ಇರುವುದರಿಂದ ನೋಡುಗರನ್ನು ಹಿಡಿದಿಟ್ಟುಕೊಳ್ಳೂವ ಶಕ್ತಿ ಈ ಸಿನೆಮಾಕ್ಕಿದೆ. ಪ್ರತಿಯೊಂದು ಪಾತ್ರವೂ ತನ್ನ ಪಾತ್ರವನ್ನು ಪರಿಪೂರ್ಣವಾಗಿ ವಹಿಸಿದೆ ಎಂದೆನಿಸುತ್ತದೆ ಹಾಗೂ ಹಿನ್ನೆಲೆ ಸಂಗೀತವೂ ವೀಕ್ಷಕರನ್ನು ಅಷ್ಟೇ ಆಕರ್ಷಿಸುತ್ತದೆ. ಚಿತ್ರದಲ್ಲಿ ಎಲ್ಲರ ನಟನೆಯ ಮನೋಜ್ಞವಾಗಿ ಮೂಡಿ ಬಂದಿದೆ. ಚಿತ್ರದ ಆರಂಭದಿಂದ ಕೊನೆಯ ತನಕ ಮುಂದೇನಾಗುವುದೋ ಎಂಬ ಪ್ರಶ್ನೆ ವೀಕ್ಷಕರಲ್ಲಿ ಮೂಡಿಸುತ್ತದೆ. ಇದು ಕುಟುಂಬ ಸದಸ್ಯರು ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಗಳನ್ನು ಈ ಚಿತ್ರವನ್ನು ಇಷ್ಟಪಡುವವರು ನೋಡಲೇಬೇಕು.