Advertisement
ಆದರೆ ಇದೆಲ್ಲದರ ಮಧ್ಯೆ ಮಾಯವಾಗಿದ್ದು ಮಾತ್ರ ಎಲ್ಲರೂ ಸೇರಿ ವಿಜೃಂಭಣೆಯಿಂದ ಆಚರಿಸುತ್ತಿದ್ದ ಸ್ವಾತಂತ್ರೋತ್ಸವ ದಿನ ಮತ್ತು ನಮ್ಮ ಬಾಲ್ಯದ ದಿನಗಳಲ್ಲಿ ನಾವು ಆಚರಿಸುತ್ತಿದ್ದ ಸ್ವಾತಂತ್ರ್ಯೋತ್ಸವ ದಿನ. ಅಂದೆಲ್ಲ ನಮಗೆ ಆಗಸ್ಟ್ ತಿಂಗಳು ಬಂತೆಂದರೆ ಸಾಕು ಶಾಲೆಯಲ್ಲಿ ಎಲ್ಲರ ಮುಖದಲ್ಲಿ ಒಂದು ಹುರುಪಿನ ಕಳೆ ಎದ್ದು ಕಾಣುತ್ತಿತ್ತು. ಈ ಸ್ವಾತಂತ್ರ್ಯ ದಿನಾಚರಣೆಯನ್ನು ನಮ್ಮ ಶಾಲೆಯಲ್ಲಿ ಹೇಗೆ ವೈವಿಧ್ಯಮಯವಾಗಿ ಆಚರಿಸಬೇಕೆನ್ನುವುದರ ಬಗ್ಗೆಯೆ ವಾದ-ವಿವಾದ, ಚರ್ಚೆಗಳು ಪ್ರಾರಂಭವಾಗುತ್ತಿತ್ತು.
Related Articles
Advertisement
ಸಮಯಯಕ್ಕೆ ತಕ್ಕಹಾಗೆ ನಮ್ಮ ಜೀವನ ಶೈಲಿಯನ್ನು ಬದಲಾಯಿಸಿ ಕೊಳ್ಳುವ ಅನಿವಾರ್ಯತೆ ಇರುವುದರಿಂದ ಅಮೃತ ಮಹೋತ್ಸವದ ಸ್ವಾತಂತ್ರ್ಯ ದಿನಾಚರಣೆಯನ್ನು ಮನೆಯಲ್ಲಿಯೇ ಆಚರಿಸೋಣ. ದೇಶ ಭಕ್ತಿ ಎನ್ನುವುದು ನಮ್ಮ ತೋರ್ಪಡಿಕೆಯ ಆಚರಣೆಯಲ್ಲಿ ತೋರಿಸುವ ಬದಲು ಮನದಲ್ಲಿಯೇ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆದುಕೊಳ್ಳೋಣ.
ಸ್ವಾತಂತ್ರ್ಯ ನಂತರದ ಭಾರತದ ಬಗ್ಗೆ ಒಮ್ಮೆ ಯೋಚಿಸೋಣ. ಸಿಕ್ಕ ಸ್ವಾತಂತ್ರ್ಯದ ದುರುಪಯೋಗ ಸದುಪಯೋಗ ಎಲ್ಲಿ ಆಗುತ್ತದೆ.ಹಳ್ಳಿ ಹಳ್ಳಿಗಳಲ್ಲಿ ಅಭಿವೃದ್ಧಿಯನ್ನು ಸಾಧಿಸಿ ಅಭಿವೃದ್ಧಿಹೊಂದಿದ ದೇಶಕ್ಕೆ ಸೇರಬೇಕೆಂದು ಹಂಬಲಿಸುತ್ತಿರುವ ದೇಶ ಸ್ಥಿತಿ ಹೇಗಿದೆ. ಬಡತನ, ಜನಸಂಖ್ಯಾ ಸ್ಪೋಟ, ಅನಕ್ಷರತೆ, ನಿರುದ್ಯೋಗಗಳೆಂಬ ಜ್ವಲಂತ ಸಮಸ್ಯೆಗಳ ಜೊತೆ ಸಂಕುಚಿತ ಭಾವನೆ, ಸ್ವಾರ್ಥ, ದುರಾಸೆ , ದ್ವೇಷ, ಮೂಢನಂಬಿಕೆ, ತಪ್ಪು ಎಂದು ತಿಳಿದಿದ್ದರೂ ಅದನ್ನೆ ಮುಂದುವರೆಸಿಕೊಂಡು ಹೋಗುವ ಮನಸ್ಥಿತಿ, ಅನ್ಯಾಯ, ಮೋಸ ಮಾಡುವ ಮನೋಭಾವ ಇವುಗಳ ನಿರ್ಮೂಲನೆ ಬಗ್ಗೆ ಯೋಚಿಸೋಣ.
ಆಗಲೆ ಸ್ವಾತಂತ್ರ್ಯ ದಿನದ ಆಚರಣೆಗೂ ಒಂದು ಮಹತ್ವ ಬರಬಹುದು. ಹಬ್ಬದ ಆಚರಣೆ ಎಲ್ಲಾದರೇನು ಆಚರಣೆಯ ಮಹತ್ವ ಮತ್ತು ಮನಸ್ಸು ಶುದ್ಧವಾಗಿರಬೇಕಷ್ಟೆ.