Advertisement

“ಚಿಣ್ಣರ ಬಣ್ಣ -2018′ವಿಜೇತರಿಗೆ ಬಹುಮಾನ ವಿತರಣೆ

09:28 AM Nov 05, 2018 | |

ಮಂಗಳೂರು: ಪ್ರತಿಭೆಗಳ ಅನಾವರಣಕ್ಕೆ ವಿವಿಧ ಮಾರ್ಗಗಳಿವೆ. ಪ್ರತಿಭೆಗಳ ಪ್ರಕಟಕ್ಕೆ ಅವಕಾಶಗಳು ಅವಶ್ಯ. ಈ ನಿಟ್ಟಿನಲ್ಲಿ “ಉದಯವಾಣಿ’ ದಿನಪತ್ರಿಕೆಯು ಹಮ್ಮಿಕೊಂಡಿರುವ ಚಿಣ್ಣರ ಬಣ್ಣ ಸ್ಪರ್ಧೆಯು ಮಕ್ಕಳ ಸೃಜನಾತ್ಮಕ ಕಲೆಗಳಿಗೆ ಉತ್ತಮ ವೇದಿಕೆಯಾಗಿದೆ ಎಂದು ಕೆಎಂಎಫ್‌ನ ವ್ಯವಸ್ಥಾಪನ ನಿರ್ದೇಶಕ ಡಾ| ಸತ್ಯನಾರಾಯಣ ಅಭಿಪ್ರಾಯಪಟ್ಟರು.

Advertisement

ಉದಯವಾಣಿ ಹಾಗೂ ಉಡುಪಿ ಆರ್ಟಿಸ್ಟ್ಸ್ ಫೋರಂ ವತಿಯಿಂದ ರವಿವಾರ ಮಂಗಳೂರಿನ ಡೊಂಗರಕೇರಿ ಕೆನರಾ ಗರ್ಲ್ಸ್‌ ಹೈಸ್ಕೂಲ್‌ನಲ್ಲಿ ಆಯೋಜಿಸಲಾದ ಚಿಣ್ಣರ ಬಣ್ಣ – 2018 ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಚಿಣ್ಣರ ಬಣ್ಣ ಚಿತ್ರಕಲಾ ಸ್ಪರ್ಧೆಯು ಕೇವಲ ನಗರದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಮಾತ್ರ ಒತ್ತು ನೀಡದೆ ಪ್ರತೀ ತಾಲೂಕಿಗೆ ತೆರಳಿ ಅಲ್ಲಿನ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವ ಕೆಲಸವನ್ನು ಮಾಡುತ್ತಿದೆ ಎಂದು ಡಾ| ಸತ್ಯನಾರಾಯಣ ಶ್ಲಾಘಿಸಿದರು.

ಮಣಿಪಾಲ ಮೀಡಿಯ ನೆಟ್‌ವರ್ಕ್‌ ಲಿ. ನ ಮುಖ್ಯ ಕಾರ್ಯ ನಿರ್ವ ಹಣಾಧಿಕಾರಿ ವಿನೋದ್‌ ಕುಮಾರ್‌ ಅವರು ಮಾತನಾಡಿ, ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಅಡಗಿರುತ್ತದೆ. ಸೂಕ್ತ ವೇದಿಕೆ, ಪ್ರೋತ್ಸಾಹ ದೊರಕಿದಾಗ ಅವುಗಳ ವಿಕಾಸ ಮತ್ತು ಪ್ರಕಾಶ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಉದಯೋನ್ಮುಖ ಚಿತ್ರಕಲಾ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಳಕಿಗೆ ತರುವ ಪ್ರಯತ್ನವನ್ನು ಉದಯವಾಣಿ ಪತ್ರಿಕೆ ಹಲವು ವರ್ಷಗಳಿಂದ ಮಾಡುತ್ತಿದೆ ಎಂದರು.
ಉದಯವಾಣಿಯ ಚಿಣ್ಣರ ಬಣ್ಣ ಚಿತ್ರಕಲಾ ಸ್ಪರ್ಧೆಗೆ ಓದುಗರಿಂದ ವರ್ಷದಿಂದ ವರ್ಷಕ್ಕೆ ಸ್ಪಂದನೆ ಹೆಚ್ಚಾಗುತ್ತಿದೆ. ಇದಕ್ಕಾಗಿ ನಮ್ಮ ಚಿಣ್ಣರ ಬಣ್ಣ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲ ಮಕ್ಕಳು ಹಾಗೂ ಅವರ ಪೋಷಕರನ್ನು ಅಭಿನಂದಿಸುತ್ತೇನೆ ಎಂದ ಅವರು, ಮಕ್ಕಳ ಪ್ರತಿಭೆಗಳಿಗೆ ಇನ್ನಷ್ಟು ಪ್ರೋತ್ಸಾಹ ಸಿಕ್ಕಿ ಅವರೆಲ್ಲ ಉನ್ನತ ಸಾಧನೆಯತ್ತ ಸಾಗಲಿ ಎಂದು ಹಾರೈಸಿದರು. ಮುಂದಿನ ವರ್ಷಗಳಲ್ಲಿ ಚಿಣ್ಣರ ಬಣ್ಣ ಸ್ಪರ್ಧೆಯನ್ನು ಇನ್ನಷ್ಟು ಅರ್ಥಪೂರ್ಣವಾಗಿ ಆಯೋಜಿಸಲಾಗುವುದು ಎಂದರು.

ಕೆನರಾ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಅಣ್ಣಪ್ಪ ಪೈ ಮಾತನಾಡಿ, ಮಕ್ಕಳ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಇಂತಹ ಸ್ಪರ್ಧೆಗಳು ಸಹಕಾರಿ. ಮುಂದೆಯೂ ಇಂತಹ ಕಾರ್ಯಕ್ರಮ ಆಯೋಜನೆಯಲ್ಲಿ ಕೆನರಾ ಶಿಕ್ಷಣ ಸಂಸ್ಥೆ ಸದಾ ಜತೆಗೂಡಲಿದೆ. ಮುಂದಿನ ದಿನಗಳಲ್ಲಿ ಉದಯವಾಣಿಯ ಈ ಚಿಣ್ಣರ ಬಣ್ಣ ಸ್ಪರ್ಧೆಗೆ ಮತ್ತಷ್ಟು ಬೆಂಬಲ-ಪ್ರೋತ್ಸಾಹ ನೀಡಲು ನಮ್ಮ ಸಂಸ್ಥೆ ಬದ್ಧವಾಗಿದೆ ಎಂದರು.

Advertisement

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ತಾಲೂಕು ಮಟ್ಟದಲ್ಲಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ರವಿವಾರ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆರ್ಟಿಸ್ಟ್ಸ್ ಫೋರಂನ ಅಧ್ಯಕ್ಷ ರಮೇಶ್‌ ರಾವ್‌, ಕಾರ್ಯದರ್ಶಿ ಸಕು ಪಾಂಗಾಳ ಉಪಸ್ಥಿತರಿದ್ದರು.

ಉದಯವಾಣಿ ಮ್ಯಾಗಜೀನ್‌ ವಿಭಾಗ ಮತ್ತು ಸ್ಪೆಷಲ್‌ ಇನಿಶಿಯೇಟಿವ್ಸ್‌ನ ರಾಷ್ಟ್ರೀಯ ಮುಖ್ಯಸ್ಥ ಆನಂದ್‌ ಕೆ. ಸ್ವಾಗತಿಸಿ, ಪ್ರಸ್ತಾವನೆಗೈದರು. ಉದಯವಾಣಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರ್‌ ಅವರು ವಿಜೇತರ ಪಟ್ಟಿ ವಾಚಿಸಿದರು. ಉದಯವಾಣಿ ಬಿಸಿನೆಸ್‌ ಆ್ಯಂಡ್‌ ಡೆವಲಪ್‌ಮೆಂಟ್‌ ಡಿಜಿಎಂ ಸತೀಶ್‌ ಶೆಣೈ ವಂದಿಸಿದರು. ಉದಯವಾಣಿ ಮಂಗಳೂರು ಸುದ್ದಿ ವಿಭಾಗದ ಮುಖ್ಯಸ್ಥ ಮನೋಹರ್‌ ಪ್ರಸಾದ್‌ ಕಾರ್ಯಕ್ರಮ ನಿರೂಪಿಸಿದರು.

ಜಿಲ್ಲಾ ಮಟ್ಟದ ವಿಜೇತರು
ಮಂಗಳೂರು: ಮಕ್ಕಳ ದಿನಾಚರಣೆ ಪ್ರಯುಕ್ತ ಉದಯವಾಣಿ ಪತ್ರಿಕೆ ಹಾಗೂ ಉಡುಪಿ ಆರ್ಟಿಸ್ಟ್‌ ಫೋರಂ ವತಿಯಿಂದ ಏರ್ಪಡಿಸಿದ್ದ “ಚಿಣ್ಣರ ಬಣ್ಣ-2018′ ಚಿತ್ರಕಲಾ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ (ದಕ್ಷಿಣ ಕನ್ನಡ ಹಾಗೂ ಉಡುಪಿ)  ವಿಜೇತ ವಿದ್ಯಾರ್ಥಿಗಳ ವಿವರ ಇಂತಿದೆ.

ಸಬ್‌ ಜ್ಯೂನಿಯರ್‌ ವಿಭಾಗ
ಪ್ರಥಮ-ರಿಷಬ್‌ ಎಚ್‌.ಎಂ. (ಆಳ್ವಾಸ್‌ ಪ್ರೈಮರಿ ಸ್ಕೂಲ್‌ ಪುತ್ತಿಗೆ), ದ್ವಿತೀಯ-ಸಾನ್ವಿ ಪಾಲನ್‌ (ಮಾಧವ ಕೃಪಾ ಮಣಿಪಾಲ), ತೃತೀಯ-ಪ್ರತೀಕ್‌ ಕಿಣಿ (ರೋಟರಿ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌).

ಸಮಾಧಾನಕರ ಬಹುಮಾನ
ವಿಷೃತ್‌ ವಿ. ಸಾಮಗ (ವಿದ್ಯೋದಯ ಪಬ್ಲಿಕ್‌ ಸ್ಕೂಲ್‌ ಉಡುಪಿ), ಸ್ಪಂದನಾ ಜೆ. ಶೆಟ್ಟಿ  (ಎಸ್‌ವಿಎಸ್‌ ಇಂಗ್ಲಿಷ್‌ ಮೀಡಿಯಂ ಬಂಟ್ವಾಳ), ವಿನೀಶ್‌(ಎಸ್‌ಆರ್‌ ಪಬ್ಲಿಕ್‌ ಸ್ಕೂಲ್‌ ಹೆಬ್ರಿ), ಪೂರ್ವಿ ಜಗನ್ನಾಥ್‌ (ವಿಶ್ವ ವಿನಾಯಕ ಸಿಬಿಎಸ್‌ಸಿ ತೆಕ್ಕಟ್ಟೆ ), ಪ್ರಸಿದ್ಧಿ ಎನ್‌. ಕೆವಿಜಿ ಐಪಿ ಸ್ಕೂಲ್‌ ಸುಳ್ಯ).

ಜೂನಿಯರ್‌ ವಿಭಾಗ
ಪ್ರಥಮ-ಸಿಂಚನಾ (ಸೈಂಟ್‌ ಅಲೋಶಿಯಸ್‌ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ ಉರ್ವಾ), ದ್ವಿತೀಯ-ಅಗಮ್ಯ, ವಿವೇಕಾನಂದ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ ಪುತ್ತೂರು), ತೃತೀಯ-ಆರುಷ್‌ ಎಸ್‌. ಹೆಗ್ಡೆ (ಶ್ರೀ ಲಕ್ಷ್ಮೀ ಜನಾರ್ದನ ಇಂಟರ್‌ನ್ಯಾಶನಲ್‌ ಸ್ಕೂಲ್‌ ಬೆಳ್ಮಣ್‌).

ಸಮಾಧಾನಕರ ಬಹುಮಾನ
ಓಜಸ್ವಿ (ಸೈಂಟ್‌ ಅಲೋಶಿಯಸ್‌ ಉರ್ವಾ), ಉಧಿತಾ ಕಾಮತ್‌ ಎಂ. (ಲಿಟಲ್‌ ರಾಕ್‌ ಇಂಡಿಯನ್‌ ಸ್ಕೂಲ್‌ ಬ್ರಹ್ಮಾವರ), ಪರೀಕ್ಷಿತ್‌ ಆಚಾರ್‌ ಮರೋಳಿ (ಎಸ್‌ಆರ್‌ ಪಬ್ಲಿಕ್‌ ಸ್ಕೂಲ್‌ ಹೆಬ್ರಿ), ಧನ್ವಿ ಭಟ್‌(ಎಸ್‌ಡಿಎಂ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ ಬೆಳ್ತಂಗಡಿ), ಅಕ್ಷರ ಎ.ಎನ್‌. (ಸೈಂಟ್‌ ಪೀಟರ್‌ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ ಅಳದಂಗಡಿ).

ಸೀನಿಯರ್‌ ವಿಭಾಗ
ಪ್ರಥಮ-ಹರ್ಷಿತ್‌ ಎಸ್‌.ಎಸ್‌. (ಮೌಂಟ್‌ ರೋಜರಿ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ ಉಡುಪಿ), ದ್ವಿತೀಯ – ಎಂ. ಸಿಂಚನಾ ಸುಭಾಷ್‌ (ಸೈಂಟ್‌ ಅಲೋಶಿಯಸ್‌ ಹೈಸ್ಕೂಲ್‌ ಉರ್ವಾ), ತೃತೀಯ – ಸ್ಫೂರ್ತಿ ಜಿ. (ಶ್ರೀ ವೆಂಕಟರಮಣ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ ಕುಂದಾಪುರ).

ಸಮಾಧಾನಕರ ಬಹುಮಾನ
ಶರಣ್ಯ ಎಸ್‌. (ಮಾಧವ ಕೃಪಾ ಮಣಿಪಾಲ), ರಾಹುಲ್‌ ರಮೇಶ್‌ (ಸೈಂಟ್‌ ಅಲೋಶಿಯಸ್‌ ಹೈಸ್ಕೂಲ್‌ ಕೊಡಿಯಾಲಬೈಲು), ಗೌತಮ್‌ ಎಸ್‌. (ವಿವೇಕಾನಂದ ಕನ್ನಡ ಮೀಡಿಯಂ ಸ್ಕೂಲ್‌ ಪುತ್ತೂರು), ಕಾರ್ತಿಕ್‌ (ಶ್ರೀರಾಮ ಸ್ಕೂಲ್‌ ನಟ್ಟಿಬೈಲು ಪುತ್ತೂರು),  ಅನಂತ ಎಂ. (ಸರಕಾರಿ ಪ್ರೌಢಶಾಲೆ ಯೇನೆಕಲ್ಲು ಸುಳ್ಯ).

ಆರು ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗಿ
ಸ್ಪರ್ಧೆಗೆ ಉದಯವಾಣಿ ಓದುಗರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತ ವಾಗಿತ್ತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 8 ತಾಲೂಕುಗಳಿಂದ 6,000ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಪಾಲ್ಗೊಂಡದ್ದು ವಿಶೇಷ. ಸ್ಪರ್ಧೆಯ ತಾಲೂಕು ಮಟ್ಟದಲ್ಲಿ ಸಬ್‌ ಜೂನಿಯರ್‌, ಜೂನಿಯರ್‌ ಹಾಗೂ ಸೀನಿಯರ್‌ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದ 72 ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಅಂತಿಮವಾಗಿ ಮೂರು ವಿಭಾಗಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಐದು ಸಮಾಧಾನಕರ ಬಹುಮಾನ ಸಹಿತ ಒಟ್ಟು 24 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next